ಲೋಕಸಭಾ ಸ್ಥಾನ ಹೆಚ್ಚಿಸಿದರೆ ಪಾರ್ಲಿಮೆಂಟ್‌ನಲ್ಲಿ ಶಬ್ಧಮಾಲಿನ್ಯ: ದೇವನೂರು ಮಹಾದೇವ

ಮೈಸೂರು ವಿವಿ ಮಾನಸಗಂಗೋತ್ರಿಯ ವಿಶ್ವಜ್ಞಾನಿ ಸಭಾಂಗಣದಲ್ಲಿ ಶನಿವಾರ ನಡೆದ ಕ್ಷೇತ್ರ ಪುನರ್‌ ವಿಂಗಡಣೆ: ಅಂತರ ರಾಜ್ಯ ಅಸಮತೆ ಮತ್ತು ಅದರ ಪರಿಣಾಮಗಳು ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾಹಿತಿ ದೇವನೂರ ಮಹಾದೇವ ಮಾತನಾಡಿದರು.

If the Lok Sabha seat is increase there will be noise pollution in the Parliament devanur mahadeva opinion rav

ಮೈಸೂರು (ಆ.26) :  ಜನಸಂಖ್ಯೆಗೆ ಅನುಗುಣವಾಗಿ ಲೋಕಸಭಾ ಸ್ಥಾನಗಳನ್ನು ಹೆಚ್ಚಿಸಿದರೆ ಗದ್ದಲವೇ ಜಾಸ್ತಿಯಾಗಿ ಪಾರ್ಲಿಮೆಂಟ್‌ನಲ್ಲಿ ಶಬ್ಧಮಾಲಿನ್ಯವನ್ನು ಕೇಳಬೇಕಾಗುತ್ತಿದೆ ಎಂದು ಸಾಹಿತಿ ದೇವನೂರ ಮಹಾದೇವ(Devanuru mahadeva) ತಿಳಿಸಿದರು.

ಮೈಸೂರು ವಿವಿ ಮಾನಸಗಂಗೋತ್ರಿ(Mysore University Manasanggotri)ಯ ಡಾ.ಬಿ.ಆರ್‌. ಅಂಬೇಡ್ಕರ್‌ ಸಂಶೋಧನ ಹಾಗೂ ವಿಸ್ತರಣ ಕೇಂದ್ರ, ಡಾ.ಬಿ.ಆರ್‌. ಅಂಬೇಡ್ಕರ್‌ ಪೀಠ ಹಾಗೂ ಇಂಡಿಯನ್‌ ಪಾಲಿಟಿ ಫೋರಂ ಸಂಯುಕ್ತವಾಗಿ ವಿಶ್ವಜ್ಞಾನಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕ್ಷೇತ್ರ ಪುನರ್‌ ವಿಂಗಡಣೆ: ಅಂತರ ರಾಜ್ಯ ಅಸಮತೆ ಮತ್ತು ಅದರ ಪರಿಣಾಮಗಳು ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪಠ್ಯ ಪರಿಷ್ಕರಣೆ ವಿವಾದ: 2ನೇ ಪತ್ರ ಬರೆದ ದೇವನೂರು ಮಹಾದೇವ!

ಮೂರು ಮತ್ತೊಂದು ಹಿಂದಿ ರಾಜ್ಯಗಳೇ ಕೂಡಿಕೊಂಡು ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತವೆ. ಆಗ ಹಿಂದಿ ಭಾಷೆಯು ಉಳಿದ ಶ್ರೀಮಂತ ಭಾಷೆಗಳ ಮೇಲೆ ಸವಾರಿ ಮಾಡಬಹುದು. ಉತ್ತರ ಭಾರತವು ಬಹುಮತ ಪಡೆದು ಇಡೀ ದೇಶವನ್ನು ಆಳುತ್ತದೆ. ಈ ರಾಜ್ಯಗಳಿಗೆ ಭಾರತದ ಇತರೆ ರಾಜ್ಯ ಸಾಮಂತ ರಾಜ್ಯಗಳಾಗಿ ಉಳಿದು ಬಿಡುತ್ತವೆ. ಅವರು ಹೇಳಿದಂತೆ ಕುಣಿಯಬೇಕಾಗುತ್ತದೆ, ಆಗ ಭಾರತವು ಭಾರತವಾಗಿಯೇ ಉಳಿದಿರುವುದಿಲ್ಲ ಎಂದು ಅವರು ಹೇಳಿದರು.

ಹಸಿವು, ಬಡತನಕ್ಕೆ ಸ್ಪಂದಿಸಬೇಕಿದೆ:

ಆದಾಯದ ಒಂದು ಭಾಗವನ್ನು ನಮಗೂ ನೀಡಿ ಇತರೆ ಕಡೆಗೂ ನೀಡಬೇಕಿರುವುದನ್ನು ಅರ್ಥ ಮಾಡಿಕೊಳ್ಳಲಾಗಿದೆ. ಭಾರತ ಒಕ್ಕೂಟ ರಾಜ್ಯವಾಗಿರುವುದರಿಂದ ಹಿಂದುಳಿದ ಪ್ರದೇಶಗಳಿಗೆ ಆರ್ಥಿಕವಾಗಿ ಹೆಚ್ಚು ಅನುದಾನ ಹಂಚಿಕೆ ಮಾಡಬೇಕಿರುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಈ ಮೂಲಕ ದೇಶದ ಹಸಿವು ಮತ್ತು ಬಡತನಕ್ಕೆ ಸ್ಪಂದಿಸಬೇಕಾಗಿದೆ ಎಂದರು.

ಪ್ರಸ್ತುತ ಭಾರತದ ಆರ್ಥಿಕ ನೀತಿಗಳಿಗೆ ತಜ್ಞರು ಹಾಗೂ ನಮ್ಮನ್ನು ಆಳ್ವಿಕೆ ಮಾಡುತ್ತಿರುವ ಅಸಮರ್ಥ ನಾಯಕತ್ವ ಜೋತುಬಿದ್ದಿದ್ದು, ಈ ನೀತಿಗಳಿಗೆ ನೇತಾಡುತ್ತ ಜೋತು ಬಿದ್ದು ತೇಲಾಡುತ್ತಿವೆ. ಅಂಬಾನಿ, ಅದಾನಿ ಸೇರಿದಂತೆ ಕಾರ್ಪೊರೇಟ್‌ವುಳ್ಳವರಿಗೆ ದೇಶದ ಸಂಪತ್ತನ್ನು ಸುರಿಯುತ್ತಿದ್ದು, ಇದರಲ್ಲಿ ತಮಗೊಂದಿಷ್ಟುಸಿಗಬಹುದೆಂದು ಪ್ರಜೆಗಳು ಕಾಯುತ್ತಿದ್ದಾರೆ. ಆದರೆ, ಕಾರ್ಪೊರೇಟ್‌ ಮಾಯಲೋಕದಲ್ಲಿ ಸಂಪತ್ತು ವಿದೇಶಗಳಿಗೆ ವಲಸೆ ಹೋಗುತ್ತಿದೆ ಎಂದು ಅವರು ಹೇಳಿದರು.

ಭಾರತದ ಆರ್ಥಿಕ ನೀತಿಗಳಲ್ಲಿ ಸಮಸ್ಯೆ ಇರುವುದು ಒಂದು ರಾಜ್ಯಕ್ಕೆ ಹೆಚ್ಚು ಕೊಡುತ್ತಾರೆ. ಇನ್ನೊಂದು ರಾಜ್ಯಕ್ಕೆ ಕಡಿಮೆ ಕೊಡುತ್ತಿದ್ದಾರೆ ಎಂಬುದಕ್ಕಿಂತ ಹೆಚ್ಚಾಗಿ ಇಂತಹ ಕಾರ್ಪೊರೇಟ್‌ಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅನುಕೂಲವಾಗುತ್ತಿದೆ. ಹೀಗಿರುವಾಗ ರಾಜ್ಯಗಳ ಸಬಲೀಕರಣವಾಗುವುದಾರು ಹೇಗೆ? ರಾಜ್ಯ ಸಬಲೀಕರಣವಾಗದೇ ರಾಜ್ಯಗಳ ನಡುವೆ ಆರ್ಥಿಕ ಅಸಮಾತೋಲನ ನೀಗುವುದು ಕಷ್ಟಎಂದರು.

ಭಾರತವು ಆರ್ಥಿಕ ನೀತಿಗಳಿಂದ ಬಚಾವ್‌ ಆಗಿ ಒಂದು ಮಧ್ಯಮ ಹಾದಿ ಕಂಡುಕೊಳ್ಳಬೇಕಾದರೆ ರಾಜ್ಯಗಳು ಸ್ವಾಯತ್ತವಾಗಿ ವೀಕೇಂದ್ರೀಕರಣದ ಕಡೆ ಚಲಿಸಿದಾಗ, ಸ್ಥಳೀಯವಾಗಿ ಗುಡಿ ಕೈಗಾರಿಕೆಗಳಿಗೆ ಮಾರುಕಟ್ಟೆದೊರಕಿದಾಗ, ಸಣ್ಣಸಣ್ಣ ಕೈಗಾರಿಕೆಗಳು ವಿಫಲವಾದಾಗ, ಉದ್ಯಮಗಳು ಅಲ್ಲಲ್ಲೆ ಹುಟ್ಟಿಕೊಳ್ಳುತ್ತವೆ. ನಿರುದ್ಯೋಗ ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಸಬಲೀಕರಣ ಎಂಬ ಮಾತು ನಡೆದಾಡ ತೊಡಗುತ್ತವೆ. ಇಷ್ಟೆಅಲ್ಲ ಪ್ರಕೃತಿ, ಪರಿಸರ ಲೂಟಿಯಾಗುತ್ತವೆ. ಸಾರ್ವಜನಿಕ ಸಂಪತ್ತು ಉಳಿಯಬೇಕು. ಜತೆಜತೆಗೆ ಸಾಮಾಜಿಕ ನ್ಯಾಯವು ನಡೆಯುತ್ತಿದ್ದರೆ ಮಾತ್ರ ಭಾರತವನ್ನು ಕಾಪಾಡಬಲ್ಲವು ಎಂದು ಅವರು ತಿಳಿಸಿದರು. 

ಪಠ್ಯ ಪರಿಷ್ಕರಣೆ ವಿವಾದ: ತಮ್ಮ ಪಠ್ಯವನ್ನೂ ಸಹ ಕೈಬಿಡಿ ಎಂದ ಸಾಹಿತಿ ದೇವನೂರು ಮಹಾದೇವ

ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಡ್ವೊಕೇಟ್‌ ಜನರಲ್‌ ಪ್ರೊ. ರವಿವರ್ಮಕುಮಾರ್‌, ಐಸೆಕ್‌ ನಿರ್ದೇಶಕ ಪ್ರೊ.ಡಿ. ರಾಜಶೇಖರ್‌, ನಿವೃತ್ತ ಪ್ರಾಧ್ಯಾಪಕರಾದ ಡಾ. ಜಾನಕಿ ನಾಯರ್‌, ಡಾ. ನಾಗರಾಜು, ಡಾ.ಟಿ.ಆರ್‌. ಚಂದ್ರಶೇಖರ್‌, ಡಾ. ಸ್ವರ್ಣಮಾಲಾ ಸಿರಸಿ, ಎನ್‌ಐಇ ಕಾರ್ಚ್‌ ಮಾಜಿ ನಿರ್ದೇಶಕ ಯು.ಎನ್‌. ರವಿಕುಮಾರ್‌ ಇದ್ದರು.

Latest Videos
Follow Us:
Download App:
  • android
  • ios