ಬೆಳಗಾವಿ ಜಿಲ್ಲೆಯ ಚಿಕ್ಕೊಡಿ ತಾಲೂಕಿನ ಹಿರೇಕೋಡಿ ನಂದಿ ಪರ್ವತದ ಜೈನ ಮುನಿ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಕೊಲೆ ಪ್ರಕಣವನ್ನು ಕೇಂದ್ರ ಸಚಿವ ಭಗವಂತ ಖೂಬಾ ಅವರು ಇಂದಿಲ್ಲಿ ತೀವ್ರವಾಗಿ ಖಂಡಿಸಿದರು.

ಆಳಂದ (ಜು.17) : ಬೆಳಗಾವಿ ಜಿಲ್ಲೆಯ ಚಿಕ್ಕೊಡಿ ತಾಲೂಕಿನ ಹಿರೇಕೋಡಿ ನಂದಿ ಪರ್ವತದ ಜೈನ ಮುನಿ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಕೊಲೆ ಪ್ರಕಣವನ್ನು ಕೇಂದ್ರ ಸಚಿವ ಭಗವಂತ ಖೂಬಾ ಅವರು ಇಂದಿಲ್ಲಿ ತೀವ್ರವಾಗಿ ಖಂಡಿಸಿದರು.

ಪಟ್ಟಣದಲ್ಲಿ ಭಾನುವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಹತ್ಯೆಯ ಘಟನೆಯನ್ನು ವಿಷಾಧಿಸಿ ಮಾತನಾಡಿದರು.

ರಾಜ್ಯದಲ್ಲಿ ಜೈನ್‌ ಮುನಿಯ ಈ ಹತ್ಯೆ ಘೋರ ನಿಂಧನೆಯಾಗಿದೆ. ರಾಜ್ಯ ಸರ್ಕಾರ ಮತ್ತು ಪೊಲೀಸ್‌ ಇಲಾಖೆಯ ವೈಫಲ್ಯವಾಗಿದೆ. ಮುಖ್ಯ ಆರೋಪಿಗಳ ಬಚಾವೂ ಮಾಡಲು ಸರ್ಕಾರ ಯತ್ನಿಸುತ್ತಿದೆ. ಇಂಥ ಘಟನೆ ರಾಜ್ಯಕ್ಕೆ ಶೋಭೆಯಲ್ಲ. ಈ ಸರ್ಕಾರ ಬೇಗ ತೊಲಗಲಿ ಎಂದು ಜನ ಬಯಸುತ್ತಿದ್ದಾರೆ ಎಂದು ಅವರು ಹೇಳಿದರು.

ಸುಳ್ಳಿನ ಬಜಾರಲ್ಲಿ ಖಂಡ್ರೆ ದೋಖಾ ಅಂಗಡಿ ತೆಗೆದಾರ: ಕೇಂದ್ರ ಸಚಿವ ಭಗವಂತ ಖೂಬಾ

ಕೇಂದ್ರ ಪರಿಹಾರ ಯತ್ನ:

ರಾಜ್ಯದಲ್ಲಿ ಮಳೆ ಬೆಳೆ ಕೊರತೆಯಾದ ಬಗ್ಗೆ ರಾಜ್ಯ ಸರ್ಕಾರ ಬರ ಘೋಷಣೆ ಮಾಡಿದರೆ ಕೇಂದ್ರದ ಎನ್‌ಡಿಆರ್‌ ತಂಡ ಕಳುಹಿಸಿಕೊಟ್ಟು ಪರಿಶೀಲಿಸಿ ಪರಿಹಾರದ ನೇರವಿಗೆ ಕೇಂದ್ರ ಬರಲಿದೆ. ರಾಜ್ಯ ಸರ್ಕಾರ ತನ್ನ ಕಾರ್ಯವನ್ನು ಮೊದಲು ಮಾಡಲಿ ಎಂದು ಸಚಿವರು ಹೇಳಿದರು.

ಗ್ಯಾರಂಟಿ ಹೆಸರಿನಲ್ಲಿ ಲೂಟಿ:

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ವಾರದಲ್ಲೇ ಬೆಲೆ ಹೆಚ್ಚಿಸಿ ಜನತೆಗೆ ಬರೆ ಎಳೆಯುವ ಕೆಲಸ ಮಾಡಿದ್ದಾರೆ. ಪ್ರಣಾಳಿಕೆಯ ಐದು ಗ್ಯಾರಂಟಿ ಒಂದು ಕಡೆ ತೋರಿಸಿ ಮತ್ತೊಂದು ಕಡೆ 10ಪಟ್ಟು ತೆರಿಗೆಯ ರೂಪದಲ್ಲಿ ಲೂಟಿ ಮಾಡುವ ಸರ್ಕಾರ ಇದಾಗಿದೆ ಎಂದು ಟೀಕಿಸಿದರು.

ರಾಜ್ಯದ ಬಡವರಿಗೆ 10 ಕೆ.ಜೆ ಅಕ್ಕಿ ಕೊಡುತ್ತೇವೆ ಎಂದು ಈಗ ಬರೀ 5 ಕೆ.ಜಿ. ಅಕ್ಕಿಯನ್ನು ಕೊಡುತ್ತೇವೆ ಎನ್ನುತ್ತಿದ್ದಾರೆ, ಕೇಂದ್ರ 5 ಕೆ.ಜಿ.ಬಿಟ್ಟು ರಾಜ್ಯದ 5 ಕೆ.ಜಿ. ಸೇರಿಸಿ 10 ಕೆ.ಜೆ. ಅಕ್ಕಿಯನ್ನು ಮಾತುಕೊಟ್ಟಂತೆ ಕೊಡಲಾಗುತ್ತಿಲ್ಲ. ಐದು ಕೆ.ಜೆ. ಅಕ್ಕಿಯ ಬದಲು ಹಣಕೊಡುತ್ತೇವೆ ಎನ್ನುತ್ತಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂದು ಪ್ರಧಾನಿಗಳತ್ತ ಬೊಟ್ಟು ಮಾಡುವ ಸಿಎಂ ಸಿದ್ರಾಮಯ್ಯನವರ ಅಸಮರ್ಥ ನಾಯಕತ್ವಾಗಿದೆ ಎಂದು ಹೇಳಿದರು.

'ಮೋದಿ ಹಠಾವೋ' ಎನ್ನುವ ದುಷ್ಟ ಶಕ್ತಿಗಳಿಗೆ ಪಾಠ ಕಲಿಸಿ: ಕೇಂದ್ರ ಸಚಿವ ಖೂಬಾ ಕರೆ

ಕಾಂಗ್ರೆಸ್ಸಿಗರು ಚುನಾವಣೆ ಪೂರ್ವ ಕೇಂದ್ರದಿಂದ ಹಣಕೊಟ್ಟು ಅಕ್ಕಿ ತಂದು ಕೊಡುತ್ತೇವೆ ಎಂದಿದ್ದಾರೆ. ಅದರಂತೆ ನಡೆದುಕೊಳ್ಳಬೇಕು. ನಾವು ದೇಶದಲ್ಲಿರುವ 29 ರಾಜ್ಯಗಳಿಗೆ ಒಂದೆ ನಿಯಮದಂತೆ ಎಲ್ಲಾ ರಾಜ್ಯಗಳಿಗೆ ಜವಾಬ್ದಾರಿಯಂತೆ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದರು.