ನರೇಂದ್ರ ಮೋದಿ ಅಧಿಕಾರದಲ್ಲಿ ಒಂದಾದ್ರೂ ಡ್ಯಾಮ್ ಕಟ್ಟಿದ್ರೆ ಹೇಳಲಿ, ಅವರ ಗುಲಾಮನಾಗ್ತೀನಿ: ಶಾಸಕ ನರೇಂದ್ರಸ್ವಾಮಿ
ದೇಶದಲ್ಲಿ ಕಳೆದ 10 ವರ್ಷಳಿಂದ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ಒಂದು ಡ್ಯಾಂ ಕಟ್ಟಿದ ಬಗ್ಗೆ ಹೇಳಿದರೆ ಅವರಿಗೆ ಗುಲಾಮರಾಗುತ್ತೇನೆ ಎಂದು ಶಾಸಕ ನರೇಂದ್ರಸ್ವಾಮಿ ಹೇಳಿದರು.
ಮಂಡ್ಯ (ಫೆ.10): ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು 10 ವರ್ಷಗಳು ಕಳೆಯುತ್ತಿವೆ. ಅವರು ಅಧಿಕಾರಕ್ಕೆ ಬಂದು ಒಂದೇ ಒಂದು ಜಲಾಶಯವನ್ನು ಕಟ್ಟಿದ್ದರೆ ನಮಗೆ ಹೇಳಲಿ, ನಾನು ಅವರ ಗುಲಾಮನಾಗುತ್ತೇನೆ ಎಂದು ಶಾಸಕ ನರೇಂದ್ರಸ್ವಾಮಿ ಹೇಳಿದ್ದಾರೆ.\
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ನಡೆದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗೆ ವಿರೋಧ ಪಕ್ಷದವರು ಟೀಕೆ ಮಾಡ್ತಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ನಮ್ಮ ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡಿ ದಿವಾಳಿಯಾಗುತ್ತೆ ಅಂತಾರೆ. ಮನೆಗೆ 2 ಸಾವಿರ ರೂ. ಕೊಡ್ತಿದ್ದೇವೆ. ಬಹಳ ಜನ ಕೂಗಾಡಿ ಇದು ಸರ್ಕಾರದ ಹಣ ಖಾಲಿ ಮಾಡ್ತೀರಿ ಎಂದು ಹೇಳಿದ್ದರು. ಆದರ, ಮಾವು ರಾಜಕಾರಣ ಮಾಡುತ್ತಿರುವುದು ಬರಿ ವೋಟಿಗಾಗಿ ಅಲ್ಲ. ಜನರ ಅಭಿವೃದ್ಧಿ ಮಾಡುವುದೇ ನಮ್ಮ ಯೋಜನೆಯಾಗಿದೆ ಎಂದರು.
ಬಿಗ್ ಬಾಸ್ ಫೈನಲಿಸ್ಟ್ ಸ್ಪರ್ಧಿಗೆ ಸನ್ಮಾನಿಸಿದ ಪಿಎಸ್‌ಐಗೆ ವರ್ಗಾವಣೆ ಶಿಕ್ಷೆ ಕೊಟ್ಟ ಪೊಲೀಸ್ ಇಲಾಖೆ
ನಮ್ಮ ದೇಶದಲ್ಲಿ ಲೋಕಸಭಾ ಚುನಾವಣೆ ವೇಳೆಗೆ ಕೆಲವು ಪಕ್ಷಗಳ ನಾಯಕರು ಜಾತಿ ಧರ್ಮದ ಹೆಸರಲ್ಲಿ ಮತ ಕೇಳಲು ಬರುತ್ತಾರೆ. ದೇಶದಲ್ಲಿ ಪ್ರತಿಷ್ಠಿತ ಹಾಗೂ ಪ್ರಮುಖ ಜಲಾಶಯಗಳು, ಕಾರ್ಖಾನೆಗಳನ್ನು ನಿರ್ಮಾಣ ಮಾಡಿದ್ದು ಕಾಂಗ್ರೆಸ್ ಸರ್ಕಾರವೇ ಹೊರತು ಮೋದಿಯಲ್ಲ. ನಮ್ಮ ದೇಶದ ಅಭಿವೃದ್ಧಿಯನ್ನು ಮೋದಿ ಮಾಡಿಲ್ಲ. ಕಳೆದ 10 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಈ ದೇಶಕ್ಕೆ ಒಂದೇ ಒಂದು ಡ್ಯಾಂ ಕಟ್ಟಿದ್ದಾರಾ ಹೇಳಲಿ? ನಾನು ಅವರಿಗೆ ಗುಲಾಮನಾಗುತ್ತೇನೆ. ನಾವು ಗ್ಯಾರಂಟಿ ಕೊಟ್ಟಿರುವುದು ತಪ್ಪಾ? ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜನಪರ ಯೋಜನೆಗಳನ್ನು ಕೊಡುತ್ತಿದ್ದಾರೆ ಎಂದು ಹೇಳಿದರು.
ಇವತ್ತಿನ ಸರ್ಕಾರಗಳ ಬಗ್ಗೆ ಚರ್ಚೆ ಜವಾಬ್ದಾರಿ ನಿಮ್ಮ ಮೇಲಿದೆ. ನಾವೆಲ್ಲರೂ ಸ್ವಾತಂತ್ರ್ಯ ನಂತರ ಹುಟ್ಟಿರುವವರು. ಸ್ವತಂತ್ರ ಪೂರ್ವದಲ್ಲಿ ನಮ್ಮ ದೇಶ ಹೇಗಿತ್ತು? ಇವಾಗ ಹೇಗೆ ಅಭಿವೃದ್ಧಿ ಪತದತ್ತ ಸಾಗುತ್ತಿದೆ. ಸುಳ್ಳು ಹೇಳುವವರು ಪಾಳೆಗಾರರಾಗಿದ್ದಾರೆ. ಸತ್ಯವಂತರು ಮನೆ ಸೇರಿಕೊಂಡಿದ್ದಾರೆ. ಈ ದೇಶ ಎಲ್ಲಾ ಜಾತಿ ಒಂದಾಗಿ ಮಕ್ಕಳಾಗಿ ಬಾಳುತ್ತಿದ್ದೇವೆ. ಧರ್ಮ, ಸಂಘರ್ಷದಿಂದ ನಡೆಯಲು ಸಾಧ್ಯನಾ? ನರೇಂದ್ರ ಮೋದಿ ಅವರಿಗೆ ಪ್ರಶ್ನೆ ಕೇಳ್ತೇನೆ. ನರೇಂದ್ರ ಮೋದಿ ರಾಜಕಾರಣಕ್ಕೆ ಬರುವ ಮುನ್ನ ನಿಜವಾದ ಬಿಜೆಪಿ ನಾಯಕ ವಾಜಪೇಯಿ ಅವರು ಇಂದಿರಾ ಗಾಂಧಿಯವರನ್ನ ದುರ್ಗೆಮಾತೆಗೆ ಹೋಲಿಸಿದ್ದರು. ಬ್ಯಾಂಕ್ ರಾಷ್ಟ್ರೀಕರಣ ಮಾಡಿದ್ದು ಇಂದಿರಾಗಾಂಧಿ ಅವರು. ಬಿಜೆಪಿದು ಮಾತನಾಡುವುದೇ ಸಾಧನೆಯಾಗಿದೆ.ಈಗ ಶಾಂತಿನಾಡು ಮಂಡ್ಯ ಜಿಲ್ಲೆಗೆ ಬೆಂಕಿ ಹಚ್ಚಲು ಬರ್ತಿದ್ದಾರೆ. ಜಿಲ್ಲೆ ಹೊಡೆದು ಲಾಭ ಮಾಡ್ಕೊಳ್ತಿದ್ದಾರೆ ಎಂದು ಕಿಡಿಕಾರಿದರು.
ಗುಜರಾತ್ ಸಿಎಂ ಆಗಿದ್ದಾಗ ಮೋದಿ ಮಾಡಿದ್ದ ಟ್ವೀಟ್ ನೆನಪಿಸಿ ಸಿದ್ದರಾಮಯ್ಯ ಕಿಡಿ
ಕೆಆರ್ ಪೇಟೆಯಲ್ಲಿ ಜೆಡಿಎಸ್ ಶಾಸಕ ಹೆಚ್.ಟಿ. ಮಂಜು ಮಾತನಾಡಿ, ಗ್ಯಾರಂಟಿಯನ್ನ ನಾನು ವಿರೋಧಿಸಲ್ಲ, ಸ್ವಾಗತಿಸುತ್ತೇನೆ. ಆದರೆ, ಗ್ಯಾರಂಟಿ ಜೊತೆ ಅಭಿವೃದ್ಧಿಯೂ ಮುಖ್ಯ. ಕೆ.ಆರ್. ಪೇಟೆಗೆ ಈವರೆಗೆ 2 ಕೋಟಿ ರೂ. ಅನುದಾನ ಬಂದಿದೆ. ಈ ವೇಳೆ ಕೆ.ಆರ್. ಪೇಟೆ ಶಾಸಕರ ಮಾತಿನ ಮಧ್ಯೆಯೇ ಶಾಸಕ ನರೇಂದ್ರ ಸ್ವಾಮಿ ವೇದಿಕೆಯಿಂದ ಹೊರಟರು. ಶಾಸಕ ನರೇಂದ್ರ ಅಣ್ಣ 2 ನಿಮಿಷ ಕೂತ್ಕೊಳಿ, ಜೆಡಿಎಸ್ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದ್ರಲ್ಲಾ, ನಾನು ಹೇಳ್ತೀನಿ ಕೇಳಿ. ದೇಶ ಮಾಜಿ ಪ್ರಧಾನಿ ದೇವೇಗೌಡರು ನಮ್ಮ ನಾಡಿನ ಬಗ್ಗೆ 93ರ ವಯಸ್ಸಲ್ಲೂ ಸಂಸತ್ತಿನಲ್ಲಿ ಧ್ವನಿ ಧ್ವನಿ ಎತ್ತಿದ್ದಾರೆ. ಮಂಡ್ಯ ಜಿಲ್ಲೆಗೆ ಮೆಡಿಕಲ್ ಕಾಲೇಜು, ಕೆಆರ್ ಪೇಟೆ ಎಂಜಿನಿಯರಿಂಗ್ ಕಾಲೇಜು ಕೊಟ್ಟಿದ್ದು ಜೆಡಿಎಸ್. ಮಿನಿ ವಿಧಾನಸೌಧ ಕೊಟ್ಟಿದ್ದು ಜೆಡಿಎಸ್. ರೈತರ ಸಾಲಮನ್ನಾ ಮಾಡಿದ ಸರ್ಕಾರವೂ ಜೆಡಿಎಸ್ ಸರ್ಕಾರವಾಗಿದೆ ಎಂದು ಶಾಸಕ ಮಂಜು ಅವರು ತಿಳಿಸಿದರು.