ಹಿಂದೆ ನಾವು ಲಿಂಗಾಯತ ಧರ್ಮ ಮಾನ್ಯತೆಗೆ ಪ್ರಯತ್ನಿಸಿದ್ದೆವು. ಆದರೆ, ಕೆಲವರು ಧರ್ಮ ಒಡೆಯಲು ಪ್ರಯತ್ನಿಸಿದರು. ಅಂದು ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕಿದ್ದರೆ ಇಂದು ಲಿಂಗಾಯಿತ ಎಲ್ಲ ಉಪ ಪಂಗಡಗಳಿಗೆ ಹೆಚ್ಚಿನ ಸೌಲಭ್ಯಗಳು ದೊರೆಯುತ್ತಿದ್ದವು ಎಂದು ಜಿಲ್ಲಾ ಉಸ್ತುಚಾರಿ ಸಚಿವ ಎಂ.ಬಿ.ಪಾಟೀಲ‌ ಹೇಳಿದರು.

ವಿಜಯಪುರ (ಮೇ.08): ಹಿಂದೆ ನಾವು ಲಿಂಗಾಯತ ಧರ್ಮ ಮಾನ್ಯತೆಗೆ ಪ್ರಯತ್ನಿಸಿದ್ದೆವು. ಆದರೆ, ಕೆಲವರು ಧರ್ಮ ಒಡೆಯಲು ಪ್ರಯತ್ನಿಸಿದರು. ಅಂದು ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕಿದ್ದರೆ ಇಂದು ಲಿಂಗಾಯಿತ ಎಲ್ಲ ಉಪ ಪಂಗಡಗಳಿಗೆ ಹೆಚ್ಚಿನ ಸೌಲಭ್ಯಗಳು ದೊರೆಯುತ್ತಿದ್ದವು ಎಂದು ಜಿಲ್ಲಾ ಉಸ್ತುಚಾರಿ ಸಚಿವ ಎಂ.ಬಿ.ಪಾಟೀಲ‌ ಹೇಳಿದರು. ಬಬಲೇಶ್ವರ ತಾಲೂಕಿನ ಧನ್ಯಾಳದಲ್ಲಿ ಬುಧವಾರ ವಿಶ್ವಗುರು ಬಸವೇಶ್ವರ ಮೂರ್ತಿ ಅನಾವರಣ ಮಾಡಿ ಮಾತನಾಡಿದರು. 12ನೇ ಶತಮಾನದಿಂದ 1881ರವರೆಗೆ ಲಿಂಗಾಯಿತ ಪ್ರತ್ಯೇಕ ಧರ್ಮವಾಗಿತ್ತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ, 1881ರಲ್ಲಿ ಮೈಸೂರು ಅರಸರು ಲಿಂಗಾಯಿತರನ್ನು ಪ್ರತ್ಯೇಕ ಧರ್ಮದ ಕಾಲಂನಿಂದ ತೆಗೆದು ಹಿಂದೂ ಧರ್ಮದ ಶೂದ್ರ ವರ್ಣದಲ್ಲಿ ಸೇರಿಸಿದರು ಎಂದರು. ದಯವೇ ಧರ್ಮದ ಮೂಲವಯ್ಯ ಎಂಬ ತಿರುಳು ಹೊಂದಿರುವ ಬಸವ ಧರ್ಮ ಪಾಲನೆಯಾದರೆ ವಿಶ್ವದಲ್ಲಿ ಯುದ್ಧದ ವಾತಾವರಣವೇ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಬಸವ ಭಾರತವಾಗಲಿದೆ. ಆಗ ದೇಶದಲ್ಲಿ ಕಾಯಕ, ದಾಸೋಹ, ಸಮಾನತೆ, ಸಾಮರಸ್ಯ ನೆಲೆಸಲಿದೆ ಎಂದು ಹೇಳಿದರು.

ಆಪರೇಷನ್ ಸಿಂಧೂರ ಸಂಭ್ರಮ: ಪಾಪಿ ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ಮಧ್ಯರಾತ್ರಿ ನಡೆಸಿದ ಐತಿಹಾಸಿಕ ಏರ್ ಸ್ಟ್ರೈಕ್ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಮಾಡಿದೆ. ಈ ಹಿನ್ನಲೆಯಲ್ಲಿ ನಗರದ ಶಿವಾಜಿ ವೃತ್ತದಲ್ಲಿ ಸ್ಥಳೀಯರಿಂದ ಸಂಭ್ರಮಾಚರಣೆ ನಡೆಯಿತು. ನಗರದ ಯುವಕರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿ, ಭಾರತ ಮಾತಾ ಕಿ ಜೈ ಜೈ, ವಂದೇ ಮಾತರಂ ಎಂಬ ಘೋಷಣೆ ಜೊತೆಗೆ ಬಸವೇಶ್ವರ, ಶಿವಾಜಿ ಮಹಾರಾಜ ಹಾಗೂ ರಾಣಾ ಪ್ರತಾಪಸಿಂಗ್ ಹೆಸರಿನಲ್ಲಿ ಘೋಷಣೆ ಮೊಳಗಿಸಿದರು. 

ಪಾಕಿಸ್ತಾನದ ಅಡಗು ತಾಣಗಳ ಮೇಲೆ ದಾಳಿ ಸ್ವಾಗತಾರ್ಹ: ಸಚಿವ ಎಂ.ಬಿ.ಪಾಟೀಲ್

ತ್ರಿವರ್ಣ ಧ್ವಜ ಹಿಡಿದು ಭಾರತದ ಪರ ಘೋಷಣೆ, ಯುವಕರಿಂದ ಸಂಭ್ರಮಾಚರಣೆ ನಡೆಯಿತು. ಗಜಾನನ ಮಹಾಮಂಡಳ ಹಾಗೂ ದೇಶಭಕ್ತ ಯುವಕರು ಸಂಭ್ರಮಾಚರಣೆಯನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಸಿದ್ದೇಶ್ವರ ಬ್ಯಾಂಕ್‌ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಜಗದೀಶ ಮುಚ್ಚಂಡಿ, ಸತೀಶ ಪಾಟೀಲ, ಬಾಬು ಜಗದಾಳೆ, ಸಂತೋಷ ಕವಲ್ದಾರ, ಸಂದೀಪ ಪಾಟೀಲ, ಪ್ರಭಾಕರ ಭೋಸ್ಲೆ, ಅಖಿಲ ಶೀಲವಂತ, ಗುರು ಗೋಲಗೇರಿ ಮತ್ತಿತರರು ಉಪಸ್ಥಿತರಿದ್ದರು.