ಸತ್ಯ ಹೇಳಿದರೆ ನನ್ನನ್ನು ಟಾರ್ಗೆಟ್ ಮಾಡ್ತಾರೆ: ಸಿಎಂ ಸಿದ್ದರಾಮಯ್ಯ
ಮಾಡಬಾರದ್ದನ್ನೆಲ್ಲಾ ಮಾಡಿ ದೇವಸ್ಥಾನಕ್ಕೆ ಹೋಗುವ ಆಸ್ತಿಕರ ಮನಸ್ಥಿತಿ ಒಪ್ಪಲ್ಲ । ಎಲ್ಲ ಜಾತಿಯ ಬಡವರನ್ನು ಮೇಲೆತ್ತಬೇಕು: ಸಿದ್ದು
ಬ್ಯಾಡಗಿ(ಜ.16): ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು ಎಂಬಂತಹ ಸತ್ಯವನ್ನು ಹೇಳಿದರೆ ನನ್ನನ್ನು ಟಾರ್ಗೆಟ್ ಮಾಡುತ್ತಿ ದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಾದಿಸಿದರು. ಚಿಕ್ಕಬಾಸೂರಿನಲ್ಲಿ ಸಿದ್ದರಾಮೇಶ್ವರ 851ನೇ ಜಯಂತಿ, ನೊಳಂಬ ಸಮಾವೇಶದ ಸಮಾರೋಪದಲ್ಲಿ ಸೋಮವಾರ ಮಾತನಾಡಿದರು. ಮಾಡಬಾರದನ್ನೆಲ್ಲಾ ಮಾಡಿ ದೇವಸ್ಥಾನಕ್ಕೆ ಹೋಗುವ ಆಸ್ತಿಕರ ಮನಸ್ಥಿತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಣೆ ಯಾರೂ ಶ್ರೀಮಂತರಾಗಿಲ್ಲ. ನಮ್ಮ ತಂದೆಗೂ 6 ಜನ ಮಕ್ಕಳು. ಆದರೆ ಯಾರೊಬ್ಬರೂ ಓದಲಿಲ್ಲ, ನನಗೊಬ್ಬನಿಗೆ ಓದುವ ಅವಕಾಶ ಸಿಕ್ಕಿತ್ತು. ಅದು ನನ್ನ ಹಣೆ ಬರಹದಲ್ಲ, ಬದಲಾಗಿ ನಾನು ಮಾಡಿದ ಪ್ರಯತ್ನ ಎಂದರು.
ವಿಷ್ಣುವಿನ ತಲೆಯಿಂದ ಹುಟ್ಟಿದವನು ಬ್ರಾಹ್ಮಣ, ತೋಳಿನಿಂದ ಕ್ಷತ್ರಿಯ, ಹೊಟ್ಟೆಭಾಗದಿಂದ ವೈಶ್ಯ, ನಾದದ ಕೆಳಗಿನಿಂದ ಹುಟ್ಟಿದವನು ಶೂದ್ರನೆಂದು ಸ್ವಾರ್ಥಕ್ಕಾಗಿ ಇಂತಹ ಸುಳ್ಳುಗಳನ್ನು ಹೇಳಿಕೊಂಡು ತಿರುಗಾಡುತ್ತಿರುವವರು ವೈಜ್ಞಾನಿಕ ಕಾರಣ ಕೊಡ ಬಲ್ಲರೇ..? ಹೀಗಾಗಿ ಶರಣರು ತಮ್ಮ ಬದುಕಿನಲ್ಲಿ ಇಂತಹ ಮೌಡ್ಯ, ಕಂದಾಚಾರ ಸೇರಿದಂತೆ ವರ್ಗ ಪದ್ಧತಿಯನ್ನು ತಿರಸ್ಕರಿಸಿದ್ದರು ಎಂದರು.
ಹಾವೇರಿ ಗ್ಯಾಂಗ್ ರೇಪ್ ಸಂತ್ರಸ್ತೆ ಬಗ್ಗೆ ಮಾನವೀಯತೆಯನ್ನೂ ತೋರಿಸದ ಸಿಎಂ ಸಿದ್ದರಾಮಯ್ಯ!
ಎಲ್ಲಾ ಜಾತಿಯ ಬಡವರನ್ನು ಮುಖ್ಯವಾಹಿನಿಗೆ ತರಬೇಕಾಗಿದೆ. ಯೂರೋಪ್ ನಲ್ಲಿ ಕೂಡ ಯೂನಿವರ್ಸಲ್ ಇನಕಂ ಎಂಬ ರೂಲ್ ಚಾಲ್ತಿಯಲ್ಲಿದೆ. ಅಂಬೇಡ್ಕರ್ ಹೇಳಿದಂತೆ ಎಲ್ಲರಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮಾನತೆ ತಂದು ಕೊಟ್ಟ ದಿನವೇ ದೇಶದ ಜನರಿಗೆ ನಿಜವಾದ ಸ್ವಾತಂತ್ರ್ಯ ಬಂದಾಂತಾಗುತ್ತದೆ ಎಂದರು.
ಅವಕಾಶ ನೀಡದ ದೇವಸ್ಥಾನಗಳಿಗೆ ಹೋಗಬೇಡಿ
ಮನುಷ್ಯ ಜಾತಿ ಎಂಬುದು ಒಂದೇ. ಯಾವ ದೇವಸ್ಥಾನಗಳಲ್ಲಿ ಅವಕಾಶವಿಲ್ಲವೋ ಅಂತಹ ದೇವಸ್ಥಾನಕ್ಕೆ ಹೋಗಬೇಡಿ ಎಂದು ಹಿಂದುಳಿದ ಜನರಿಗೆ ನಾರಾಯಣ ಗುರು ತಿಳಿಸಿಕೊಟ್ಟಿದ್ದಾರೆ. ಹೀಗಾಗಿ ನಿಮಗೆ ದೇವಸ್ಥಾನಗಳನ್ನು ನಿರ್ಮಿಸಿಕೊಂಡು ಪೂಜೆಗಳನ್ನು ಸಲ್ಲಿಸಿ ಎಂದು ಸಲಹೆ ನೀಡಿದರು.