ಬೆಂಗಳೂರು, (ಮೇ.12): ದಿಢೀರ್ ವರ್ಗಾವಣೆಗೊಂಡಿದ್ದ ಹಿರಿಯ ಐಎಎಸ್‌ ಅಧಿಕಾರಿ ಪಿ. ಮಣಿವಣ್ಣನ್ ಅವರಿಗೆ ರಾಜ್ಯ ಸರ್ಕಾರ ಕೊನೆಗೂ ಸ್ಥಾನ ತೋರಿಸಿದೆ.

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಿ ಸರ್ಕಾರ ಇಂದು (ಮಂಗಳವಾರ) ಆದೇಶ ಮಾಡಿದೆ.

ರಾತ್ರಿ 8 ಗಂಟೆಗೆ ಮೋದಿ ಭಾಷಣ, ದಿಢೀರ್ ಸನ್ನಿ ಲಿಯೋನ್ ವಿದೇಶ ಪ್ರಯಾಣ; ಮೇ.12ರ ಟಾಪ್ 10 ಸುದ್ದಿ! 

ನಿನ್ನೆಯಷ್ಟೆ (ಸೋಮವಾರ) ಕಾರ್ಮಿಕ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಹಾಗೂ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಈ ಎರಡೂ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಹುದ್ದೆಗಳಿಂದ ಪಿ. ಮಣಿವಣ್ಣನ್ ಅವರನ್ನು ಎತ್ತಂಗಡಿ ಮಾಡಿತ್ತು.ವಿಪರ್ಯಾಸ ಅಂದ್ರೆ ಹಿರಿಯ ಅಧಿಕಾರಿಗೆ ಯಾವುದೇ ಹುದ್ದೆ ನೀಡದೆ ಟ್ರಾನ್ಸ್‌ಫರ್ ಮಾಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಕಾರ್ಮಿಕ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ಮಣಿವಣ್ಣನ್ ವರ್ಗಾವಣೆಯನ್ನು ವಿರೋಧಿಸಿದ್ದು, ಕೈಗಾರಿಕಾ ಕಂಪನಿಗಳ ಒತ್ತಡಕ್ಕೆ ಮಣಿದು ಅವರ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದ್ದವು.

ಅಲ್ಲದೇ ಮಣಿವಣ್ಣನ್ ಅವರನ್ನು ಮತ್ತೆ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮರು ವರ್ಗಾವಣೆ ಮಾಡುವಂತೆ ಸಾಮಾಜಿಕ ಜಾಲತಣಾದಲ್ಲಿ ಅಭಿಯಾನ ನಡೆಯುತ್ತಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಮಣಿವಣ್ಣನ್ ಅವರನ್ನು ಕಾರ್ಮಿಕ ಇಲಾಖೆಯಿಂದ ವರ್ಗಾವಣೆ ಮಾಡಿರುವುದು ಸರಿಯಲ್ಲ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.