Asianet Suvarna News Asianet Suvarna News

ಕೋಲಾರದಲ್ಲಿ ನಾಮಿನೇಷನ್‌ ಸಲ್ಲಿಸುತ್ತೇನೆ: ಸಿದ್ದರಾಮಯ್ಯ!

ಕೋಲಾರ ಪ್ರವಾಸದಲದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರದಲ್ಲಿಯೇ ನಾನು ನಾಮಿನೇಷನ್‌ ಮಾಡಲು ಬರುತ್ತೇನೆ ಎಂದು ಹೇಳುವ ಮೂಲಕ ಕ್ಷೇತ್ರದ ಆಯ್ಕೆಯ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

I will submit nomination in Kolar Siddaramaiah Sat
Author
First Published Nov 13, 2022, 1:59 PM IST

ಕೋಲಾರ (ನ.13): ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭಾ ಚುನಾವಣೆ ವೇಳೆ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಗೊಂದಲಕ್ಕೆ ಈಗ ಪರಿಹಾರ ಸಿಕ್ಕಂತಾಗಿದೆ. ಕೋಲಾರದಲ್ಲಿ ಪ್ರವಾಸ ಕೈಗೊಂಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸ್ವತಃ ಕೋಲಾರದಲ್ಲಿ ನಾಮಿನೇಷನ್‌ ಮಾಡಲು ಬಂದೇ ಬರುತ್ತೇನೆ ಎಂದು ಹೇಳಿಕೆ ನೀಡುವ ಮೂಲಕ ವಿಧಾನಸಭಾ ಕ್ಷೇತ್ರದ ಆಯ್ಕೆಗೆ ತೆರೆ ಎಳೆದಿದ್ದಾರೆ.

ಮೂಲತಃವಾಗಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ತವರು ಕ್ಷೇತ್ರ ಮೈಸೂರಿನ ವರುಣಾ (Varuna) ವಿಧಾನಸಭಾ (Assembly) ಕ್ಷೇತ್ರವಾಗಿದೆ. ಆದರೆ, ಕಳೆದ ಚುನಾವಣೆಯಲ್ಲಿ (Election)ವರುಣಾದಲ್ಲಿ ಸೋಲುವ ಭೀತಿಯಿಂದ ವರುಣಾ ಮತ್ತು ಬಾದಾಮಿಯಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ವರುಣಾದಲ್ಲಿ ಸೋತು, ಬಾದಾಮಿಯಲ್ಲಿ ಕೆಲವೇ ಮತಗಳ ಅಂತರದಿಂದ ಗೆದ್ದಿದ್ದರು. ಪುನಃ 2023ರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಕ್ಷೇತ್ರದ ಆಯ್ಕೆಯ ಬಗ್ಗೆ ಗೊಂದಲದಲ್ಲಿದ್ದಾರೆ. ಈವರೆಗೆ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾಹಿತಿಯತಿಲ್ಲ. ಹಳೆಯ ಕ್ಷೇತ್ರ ವರುಣಾ, ಪ್ರಸ್ತುತ ಶಾಸಕರಾಗಿರುವ ಕ್ಷೇತ್ರ ಬಾದಾಮಿ, ಇತ್ತೀಚೆಗೆ ಮನ್ನೆಲೆಗೆ ಬಂದಿದ್ದ ಬೆಂಗಳೂರಿನ ಚಾಮರಾಜಪೇಟೆ (Chamarajapet) ಹಾಗೂ ಈಗ ಕೋಲಾರದಲ್ಲಿ(Kolar) ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರಿಗೆ ಆಹ್ವಾನ ಬಂದಿವೆ. ಆದರೆ, ಈ ಎಲ್ಲ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಪ್ರವಾಸ ಮಾಡುತ್ತಿದ್ದು, ಅಂತಿಮವಾಗಿ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ತೀರ್ಮಾನಿಸಿದ್ದರು. ಆದರೆ, ಇಂದು ಕೋಲಾರ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಭಾರತೀ ಮೆಥೋಡಿಸ್ಟ್ ಚರ್ಚ್ (Bharathi Methodist church) ನಲ್ಲಿ ತಾವು ಕೋಲಾರದಲ್ಲಿ ನಾಮಿನೇಷನ್‌ ಮಾಡಲು ಬರುವುದಾಗಿ ಹೇಳಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ ಎಂಬ ಅಂಶಗಳು ಲಭ್ಯವಾಗುತ್ತಿವೆ.

ಸಿದ್ದರಾಮಯ್ಯಗಾಗಿ ಕ್ಷೇತ್ರ ತ್ಯಾಗಕ್ಕೆ ಸಿದ್ದವಾದ ಕೊಪ್ಪಳ ಶಾಸಕ!

ಜಾತಿ ಆಧಾರಿತ ರಾಜಕಾರಣ:
ಕೋಲಾರಕ್ಕೆ ಆಗಮಿಸಿದ ಕೂಡಲೇ ಕೋಲಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ಈಗ ಚರ್ಚ್ ಬಂದಿದ್ದೇನೆ. ಚರ್ಚನಲ್ಲಿರುವ ಎಲ್ಲ ಕ್ರೈಸ್ತ ಸಮುದಾಯಕ್ಕೆ (Christian Community) ಧನ್ಯವಾದಗಳು. ನಾನು ಇವತ್ತು ನಾಮಿನೇಷನ್‌ ಮಾಡಲು ಬಂದಿಲ್ಲ. ಆದರೆ, ಕೋಲಾರದಲ್ಲಿ ನಿಲ್ಲಬೇಕು ಎಂದು ಒತ್ತಡವಿದೆ. ಈಗ ನಾನು ಬಾದಾಮಿ (Badami)ಶಾಸಕನಾಗಿದ್ದೇನೆ. ಮುಂದಿನ ದಿನಗಳಲ್ಲಿಯೂ ಬಾದಾಮಿಯಲ್ಲಿ, ವರುಣದಲ್ಲಿ ಸ್ಪರ್ಧಿಸುವಂತೆ ಒತ್ತಡವಿದೆ. ನನಗೆ ಕೋಲಾರ ಜನರ ಮೇಲೆ ಪ್ರೀತಿ ಇದೆ. ಮುಖ್ಯಮಂತ್ರಿ ಆದಾಗ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಿದ್ದೇನೆ. ಇದು ಬಹುತ್ವದ ದೇಶವಾಗಿದ್ದು, ಮನುಷ್ಯತ್ವ ಮುಖ್ಯವಾಗಿದೆ. ಬಿಜೆಪಿ ಹಾಗೂ ಬೇರೆ ಪಕ್ಷಗಳು ಧರ್ಮ(Religion), ಜಾತಿ (Cast)ಆಧಾರಿತವಾಗಿ ಹೋಗುತ್ತವೆ. ಕಾಂಗ್ರೆಸ್ ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುತ್ತದೆ. ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವುದ ಕರ್ತವ್ಯವಾಗಿದೆ. ನಮ್ಮ ಆಡಳಿತ ಅವಧಿಯಲ್ಲಿ ಯಾವ ಧರ್ಮಕ್ಕೆ ತೊಂದರೆ ಆಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಚರ್ಚ್ನಲ್ಲಿ ಪಾದ್ರಿಗಳ ವಿಶೇಷ ಪ್ರಾರ್ಥನೆ:
ಕೋಲಾರದ ಭಾರತೀ ಮೆಥೋಡಿಸ್ಟ್ ಚರ್ಚ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಗೆಲುವಿಗಾಗಿ ಪಾದ್ರಿಗಳು (Padri) ವಿಶೇಷ ಪ್ರಾರ್ಥನೆ (Prayer)ಸಲ್ಲಿಸಿದರು. ನಮ್ಮ ಸಮುದಾಯದ (Community)ಮೇಲೆ ಅವರ ಪ್ರೀತಿಗಾಗಿ  ಪ್ರಾರ್ಥನೆ ಸಲ್ಲಿಸಿದ್ದು, ಅವರಿಗೆ  ಬೇಕಾದ ಶುಭವನ್ನು ಕೊಡುವಂತೆ ದೇವರಲ್ಲಿ ಕೇಳಿಕೊಳ್ಳಲಾಗಿದೆ. ಜತೆಗೆ, ಬಹುಮತದಿಂದ (Majority) ಕಾಂಗ್ರೆಸ್‌ ಗೆಲ್ಲುವಂತೆ ಮತ್ತು ಮುಂದಿನ ಮುಖ್ಯಮಂತ್ರಿ ಆಗುವ ಸಹಾಯ ನೀಡುವಂತೆ ದೇವರಲ್ಲಿ ಪ್ರಾರ್ಥಿಸಲಾಗಿದೆ ಎಂದು ಚರ್ಚ್ ಮುಖ್ಯಸ್ಥರು ಮಾಹಿತಿ ನೀಡಿದರು.

ಮತ್ತೆ ಬಾದಾಮಿಯಿಂದಲೇ ಸ್ಪರ್ಧೆ ಮಾಡದಿದ್ರೆ ಸಿದ್ದರಾಮಯ್ಯ ಮನೆ ಮುಂದೆ ಆತ್ಮಹತ್ಯೆ: ಸಿದ್ದು ಅಭಿಮಾನಿಗಳು

ರೂಪ ಶಶಿಧರ್ ಅಸಮಾಧಾನ.?
ರಾಜ್ಯ ವಿಪಕ್ಷ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸ್ಥಳೀಯ ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದರೂ ಕೆಜಿಎಫ್‌ ಶಾಸಕಿ ರೂಪಾ ಶಶಿಧರ್‍ (Roopa Shashidhar)‌ ಮಾತ್ರ ಆಗಮಿಸಿರಲಿಲ್ಲ. ಈ ಬಗ್ಗೆ ಆಪ್ತರ ಬಳಿ ಅಳಲು ತೋಡಿಕೊಂಡಿರುವ ಶಾಸಕಿ ಹಿರಿಯ ನಾಯಕರಾದವರು ಎಲ್ಲರನ್ನೂ ಕೂರಿಸಿ ಸಮಾಧಾನ ಪಡಿಸಿಕೊಂಡು ಹೋಗಬೇಕು. ಒಂದು ಕಡೆ ತಂದೆ (Father), ಮತ್ತೊಂದು ಕಡೆ ಶಾಸಕಾಂಗ ಪಕ್ಷದ ನಾಯಕರು. ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
 

Follow Us:
Download App:
  • android
  • ios