ಸಿದ್ದರಾಮಯ್ಯಗಾಗಿ ಕ್ಷೇತ್ರ ತ್ಯಾಗಕ್ಕೆ ಸಿದ್ದವಾದ ಕೊಪ್ಪಳ ಶಾಸಕ!

ಕಳೆದ ಒಂದು ವಾರದಿಂದ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಕುರಿತು ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಇದರ ಮದ್ಯೆ ಇಲ್ಲೊಬ್ಬ ಶಾಸಕ ಸಿದ್ದರಾಮಯ್ಯ ಅವರು ನನ್ನ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾದರೆ ನಾನು ಕ್ಷೇತ್ರ ಬಿಟ್ಟು ಕೊಡುತ್ತೇನೆ ಎಂದಿದ್ದಾರೆ.‌  

Koppal MLA Raghavendra Hitnal ready to sacrifice constituency for Siddaramaiah gow

ವರದಿ: ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್
 
ಕೊಪ್ಪಳ (ನ.10): ಕಳೆದ ಒಂದು ವಾರದಿಂದ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಕುರಿತು ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಇದರ ಮದ್ಯೆ ಇಲ್ಲೊಬ್ಬ ಶಾಸಕ ಸಿದ್ದರಾಮಯ್ಯ ಅವರು ನನ್ನ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾದರೆ ನಾನು ಕ್ಷೇತ್ರ ಬಿಟ್ಟು ಕೊಡುತ್ತೇನೆ ಎಂದಿದ್ದಾರೆ.‌  ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ಯಾರಿಗೆ ತಾನೇ ಗೋತ್ತಿಲ್ಲ ಹೇಳಿ.‌ ಮಾಜಿ ಸಿಎಂ‌ ಸಿದ್ದರಾಮಯ್ಯ ಅವರ ಮಾನಸ ಪುತ್ರನೆಂದೇ ಶಾಸಕ ರಾಘವೇಂದ್ರ ಹಿಟ್ನಾಳ್ ಗುರುತಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತ ಶಾಸಕರಲ್ಲಿ ಒಬ್ಬರಾಗಿರುವ ಶಾಸಕ ರಾಘವೇಂದ್ರ ಹಿಟ್ನಾಳ್ 2013 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಬಳಿಕ 2018 ರಲ್ಲಿ ಎರಡನೇ ಬಾರಿಗೆ ರಾಘವೇಂದ್ರ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಪ್ರಸ್ತುತ ಮೂರನೇ ಅವಧಿಗೆ ಅದೃಷ್ಟ ಪರೀಕ್ಷೆಗೆ ಶಾಸಕ ರಾಘವೇಂದ್ರ ಹಿಟ್ನಾಳ್ ಸಿದ್ದವಾಗಿದ್ದು, ಕೊಪ್ಪಳ ಕ್ಷೇತ್ರದಿಂದ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡುವುದಾದರೆ ನಾನು ಅವರಿಗಾಗಿ ಕ್ಷೇತ್ರ ತ್ಯಾಗ ಮಾಡುವುದಾಗಿ ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ.

ಶಾಸಕ ಹಿಟ್ನಾಳ್ ಕ್ಷೇತ್ರ ಬಿಟ್ಟುಕೊಡಲು ಕಾರಣವೇನು?
 ಶಾಸಕ ರಾಘವೇಂದ್ರ ಹಿಟ್ನಾಳ್ ರಾಜಕೀಯವಾಗಿ ಬೆಳೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕೊಡುಗೆ ಅಪಾರ‌. ಶಾಸಕ ಹಿಟ್ನಾಳ್ ಶಾಸಕರಾಗುವ ಮೊಲದು ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು.‌ಈ  ವೇಳೆಯಲ್ಲಿ 2013 ರ ಚುನಾವಣೆಯಲ್ಲಿ ರಾಘವೇಂದ್ರ ಹಿಟ್ನಾಳ್ ತಂದೆ ಬಸವರಾಜ ಹಿಟ್ನಾಳ್ ಸ್ಪರ್ಧೆ ಮಾಡಬೇಕಿತ್ತು.‌ ಆದರೆ ಸಿದ್ದರಾಮಯ್ಯ  ಅವರು ಬಸವರಾಜ ಹಿಟ್ನಾಳ್ ಅವರಿಗೆ ನೀನು ಸ್ಪರ್ಧೆ ಮಾಡುವುದು ಬೇಡ, ರಾಘವೇಂದ್ರ ಹಿಟ್ನಾಳ್ ಸ್ಪರ್ಧಿಸಲು ಎಂದು ಹೇಳಿ ಅವರೇ ರಾಘವೇಂದ್ರ ಹಿಟ್ನಾಳ್ ಗೆ ಟಿಕೆಟ್ ಕೊಡಿಸಿದರು. ಅದೃಷ್ಟಕ್ಕೆ ಮೊದಲನೇ ಚುನಾವಣೆಯಲ್ಲಿಯೇ ರಾಘವೇಂದ್ರ ಹಿಟ್ನಾಳ್ ಗೆಲುವು ಸಾಧಿಸಿದರು. ಈ ವೇಳೆಯಲ್ಲಿ ಸಿದ್ದರಾನಯ್ಯ ಸಿಎಂ ಸಹ ಆದರು. ಜೊತೆಗೆ ಅವರ ಆಪ್ತ ಶಾಸಕ ಬೇರೆ ಹೀಗಾಗಿ ಹೆಚ್ಚಿನ ಅನುದಾನ ತಂದು ಕ್ಷೇತ್ರದಲ್ಲಿ ಒಂದಿಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದರು. ಜೊತೆಗೆ 2018 ರಲ್ಲಿಯೂ ಸಹ ರಾಘವೇಂದ್ರ ಹಿಟ್ನಾಳ್ ಶಾಸಕರಾಗಿ ಆಯ್ಕೆಯಾದರು. ಹೀಗಾಗಿ ನನ್ನ ಬೆಳವಣಿಗೆ ಹಿಂದೆ ಸಿದ್ದರಾಮಯ್ಯ ಅವರ ಪಾತ್ರ ಹಿರಿದಾಗಿದ್ದು, ಅವರಿಗಾಗಿ ನಾನು ಕ್ಷೇತ್ರ ತ್ಯಾಗ ಮಾಡಲು ಸದಾ ಸಿದ್ಧ ಎಂದು ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ.

2023 Assembly Election: ಸಿದ್ದರಾಮಯ್ಯಗೆ ಕೊಪ್ಪಳಕ್ಕೆ ಬಂದರೆ ಕ್ಷೇತ್ರ ಬಿಟ್ಟು ಕೊಡುವೆ: ರಾಘವೇಂದ್ರ ಹಿಟ್ನಾಳ

 ಸಚಿವ ಶ್ರೀರಾಮುಲುಗೆ ಟಾಂಗ್:  ಇನ್ನು ಇತ್ತೀಚಿಗೆ ಕೊಪ್ಪಳಕ್ಕೆ ಸಚಿವ ಬಿ ಶ್ರೀರಾಮುಲು ಬಂದಾಗ ಸಿದ್ದರಾಮಯ್ಯ ಗೆ ಸ್ಪರ್ದಿಸಲು ಕ್ಷೇತ್ರವಿಲ್ಲದೆ ಪರದೇಸಿ ಗಿರಾಕಿ ಆಗಿದ್ದಾರೆ ಎಂದು ವ್ಯಂಗ್ಯ ಮಾಡಿದ್ದರು. ಈ ವ್ಯಂಗ್ಯಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ್ ಕಿಡಿಕಾರಿದ್ದು, ಶ್ರೀರಾಮುಲು ಏನು ಇದ್ದಾರೆ, ಅವರು ಈಗ ಎಲ್ಲಿ ನೀಲ್ತಾರೆ, ಬಳ್ಳಾರಿ ಗ್ರಾಮೀಣ ಕ್ಷೇತ್ರ ಬಿಟ್ಟು ಮೊಳಕಾಲ್ಮುರು ಕ್ಷೇತ್ರದಲ್ಲಿ ನಿಂತು ಗೆದ್ದಿದ್ದಾರೆ. ಈ ಬಾರಿ ಅವರು ಮೊಳಕಾಲ್ಮುರು ಕ್ಷೇತ್ರದಲ್ಲಿ ನಿಲ್ಲಲಿ, ಜನರು ಏನು ಉತ್ತರ ಕೊಡುತ್ತಾರೋ ನೋಡೋಣ ಎಂದಿದ್ದಾರೆ.

Koppal: ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾದ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ!

ಜೊತೆಗೆ ಕಾಂಗ್ರೆಸ್ ನಲ್ಲಿ ಬೈಟ್ ಟು ಗಿರಾಕಿಗಳಿದ್ದಾರೆ ಎಂದು ರಾಮುಲು ಹೇಳಿದ್ದು,ಕಾಂಗ್ರೆಸ್ ಪಕ್ಷದಲ್ಲಿ ಯುನಿಟಿ ಇದೆ,ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ ಬಳಿಕ ಎಲ್ಲರೂ ಆ್ಯಕ್ಟಿವ್ ಆಗಿದ್ದು,ಕಾಂಗ್ರೆಸ್ ನಲ್ಲಿ ಬೈಟು ಇದ್ದರೆ ಬಿಜೆಪಿಯಲ್ಲಿ ಟು ಬೈ ತ್ರೀ ಇದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.

Latest Videos
Follow Us:
Download App:
  • android
  • ios