ರಕ್ತದಲ್ಲಿ ಬರೆದು ಕೊಡುವೆ, ನಾನು ಬಿಜೆಪಿ ಬಿಡಲ್ಲ : ಸಂಗಣ್ಣ ಕರಡಿ ಸ್ಪಷ್ಟನೆ
ನಾನು ಬಿಜೆಪಿಯನ್ನು ಬಿಡುವುದಿಲ್ಲ ಎಂದು ರಕ್ತದಲ್ಲಿ ಬರೆದು ಕೊಡುತ್ತೇನೆ’ ಎಂದು ಸಂಸದ ಸಂಗಣ್ಣ ಕರಡಿ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಸಂಗಣ್ಣ, ಮೋದಿಯಂತಹ ವ್ಯಕ್ತಿ ಈ ದೇಶಕ್ಕೆ ಸಿಕ್ಕಿದ್ದೇ ಪುಣ್ಯ. ಅವರಿಂದಾಗಿ ಇಂದು ಇಡೀ ವಿಶ್ವವೇ ಭಾರತದತ್ತ ನೋಡುವಂತಾಗಿದೆ ಎಂದರು.
ಕೊಪ್ಪಳ (ಆ.22) : ‘ನಾನು ಬಿಜೆಪಿಯನ್ನು ಬಿಡುವುದಿಲ್ಲ ಎಂದು ರಕ್ತದಲ್ಲಿ ಬರೆದು ಕೊಡುತ್ತೇನೆ’ ಎಂದು ಸಂಸದ ಸಂಗಣ್ಣ ಕರಡಿ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸೇರ್ಪಡೆ ವದಂತಿಗೆ ತೀಕ್ಷ$್ಣವಾಗಿ ಪ್ರತಿಕ್ರಿಯೆ ನೀಡಿದರು. ‘ನಾನು ಬಿಜೆಪಿಯನ್ನು ಬಿಡುವ ಪ್ರಶ್ನೆಯೇ ಇಲ್ಲ. ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯೂ ಸ್ಪರ್ಧೆ ಮಾಡುತ್ತೇನೆ. ಪಕ್ಷ ನನಗೆ ಟಿಕೆಟ್ ನೀಡುತ್ತದೆ ಎನ್ನುವ ವಿಶ್ವಾಸ ಇದೆ. ಈ ಕುರಿತು ಮಾಧ್ಯಮದವರು ಮತ್ತೊಮ್ಮೆ ಪ್ರಶ್ನೆಯನ್ನು ಕೇಳಬೇಡಿ’ ಎಂದು ತಾಕೀತು ಮಾಡಿದರು.
ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಸಹ ಬಿಜೆಪಿ ಬಿಡುವುದಿಲ್ಲ ಎನ್ನುವುದು ನನಗೆ ಇರುವ ಮಾಹಿತಿ. ಇವರಷ್ಟೇ ಅಲ್ಲ, ಬೇರೆ ಯಾರೂ ಸಹ ಬಿಜೆಪಿ ಬಿಡುವುದಿಲ್ಲ. ಬಿಜೆಪಿ ಸಂಘಟನೆಗೆ ಹಿನ್ನಡೆಯಾಗಿರುವುದು ನಿಜ. ಆದರೆ, ಹೈಕಮಾಂಡ್ ಶೀಘ್ರದಲ್ಲಿಯೇ ಇದಕ್ಕೆ ಪರಿಹಾರ ಕಂಡುಕೊಂಡು, ಸಂಘಟನೆ ಮಾಡುತ್ತದೆ. ಪ್ರತಿಪಕ್ಷದ ನಾಯಕನ ಆಯ್ಕೆಯೂ ಆಗುತ್ತದೆ ಎಂದರು.
Ghar wapsi: ಕಾಂಗ್ರೆಸ್‌ಗೆ ಸೋಮಶೇಖರ್ ಕರೆ ತರಲು ಶಾಸಕ ಶ್ರೀನಿವಾಸ್‌ಗೆ ಡಿಕೆ ಶಿವಕುಮಾರ್ ಟಾಸ್ಕ್
ಇದೇ ವೇಳೆ ಪ್ರಧಾನಿ ಮೋದಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಸಂಗಣ್ಣ, ಮೋದಿಯಂತಹ ವ್ಯಕ್ತಿ ಈ ದೇಶಕ್ಕೆ ಸಿಕ್ಕಿದ್ದೇ ಪುಣ್ಯ. ಅವರಿಂದಾಗಿ ಇಂದು ಇಡೀ ವಿಶ್ವವೇ ಭಾರತದತ್ತ ನೋಡುವಂತಾಗಿದೆ ಎಂದರು. ಈ ದೇಶದ ಆರ್ಥಿಕ ಬೆಳವಣಿಗೆಗೆ ಮನಮೋಹನ್‌ಸಿಂಗ್ ಅವರ ಕೊಡುಗೆಯೂ ಇದೆ. ಆದರೆ, ಕಾಂಗ್ರೆಸ್‌ನವರು ಅವರ ಹೆಸರು ಹೇಳುವುದಿಲ್ಲ. ಅವರಿಗೆ ಅದು ಬೇಕಾಗಿಯೂ ಇಲ್ಲ ಎಂದು ಛೇಡಿಸಿದರು.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಏರ್‌ಲಿಫ್ಟ್ ಮೂಲಕ ಹಣ ಸಾಗಿಸ್ತಿದೆ: ಜೆಡಿಸ್ ನಾಯಕ ಆರೋಪ