ಸಂಸದ ರಮೇಶ ಜಿಗಜಿಣಗಿ ಅವರು ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗುವವರೆಗೂ ತಾನು ಸಾಯುವುದಿಲ್ಲ ಎಂದು ಹೇಳುವ ಮೂಲಕ 'ದಲಿತ ಸಿಎಂ' ಚರ್ಚೆಯನ್ನು ಮುನ್ನೆಲೆಗೆ ತಂದಿದ್ದಾರೆ. ಜೊತೆಗೆ, ಕಾಂಗ್ರೆಸ್ ಸರ್ಕಾರದ ಬಳಿ ಪೆಟ್ರೋಲ್ ಹಾಕಿಸಲು, ರೈತರಿಗೆ ಪರಿಹಾರ ನೀಡಲು ಹಣವಿಲ್ಲ ಎಂದು ಟೀಕಿಸಿದ್ದಾರೆ. ಮುಂದೆ ಓದಿ…
ವಿಜಯಪುರ (ಸೆ.25): ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗೋವರೆಗೂ ನಾನು ಸಾಯುವುದಿಲ್ಲ ಎನ್ನುವ ಮೂಲಕ ಸಂಸದ ರಮೇಶ ಜಿಗಜಿಣಗಿ ಅವರು ‘ದಲಿತ ಸಿಎಂ’ ಕೂಗು ಮುನ್ನೇಲೆಗೆ ತಂದಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ದಲಿತ ಸಿಎಂ ವಿಚಾರ ಪ್ರಸ್ತಾಪಿಸಿದ ಅವರು, ‘ನಾನು ದಲಿತ ಸಿಎಂ ಆದ ಮೇಲೆಯೇ ಸಾಯ್ತಿನಿ. ಅಲ್ಲಿಯವರೆಗೂ ಸಾಯೋದಿಲ್ಲ’ ಎಂದಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸರ್ಕಾರಿ ವಾಹನಗಳಿಗೆ ಪೆಟ್ರೋಲ್ ಹಾಕಲು ಹಣ ಇಲ್ಲದ ಕೆಟ್ಟ ಪರಿಸ್ಥಿತಿ ಬಂದಿದೆ. ಶಾಸಕರು ಸಂಚಾರ ಮಾಡಿ ರೈತರ ಸಮಸ್ಯೆ ಕೇಳಲು ಹೋಗಬೇಕಾದರೆ ಅವರ ಗಾಡಿಗೆ ಹಾಕಲು ಪೆಟ್ರೋಲ್ ಇಲ್ಲ. ಹೋಗಲು ಸರಿಯಾದ ರಸ್ತೆ ಇಲ್ಲ. ರೈತರಿಗೆ ಪರಿಹಾರ ನೀಡಲೂ ಸರ್ಕಾರದ ಬಳಿ ಹಣ ಇಲ್ಲ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಜೀವನದ ಜೊತೆ ಆಟ ಆಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: sahyog portal: ಸಾಮಾಜಿಕ ಜಾಲತಾಣಗಳಿಗೆ ಅನಿಯಂತ್ರಿತ ಸ್ವಾತಂತ್ರ್ಯ ಕೊಟ್ಟರೆ ಅರಾಜಕತೆ- ಹೈಕೋರ್ಟ್
ಈ ಜಾತಿ ಸಮೀಕ್ಷೆ ಎಂಬುವುದು ಹೇಯ ಕೃತ್ಯ. ರಾಜ್ಯ ಸರ್ಕಾರ ನಿಜವಾಗಿ ಜನರ ಮೇಲೆ ಕಾಳಜಿ ಇದ್ದರೆ, ಜಾತಿ ಸಮೀಕ್ಷೆ ಕೈ ಬಿಟ್ಟು, ರೈತರ ಸಮಸ್ಯೆಗಳ, ಜನರ ಆರ್ಥಿಕ ವ್ಯವಸ್ಥೆ ಬಗ್ಗೆ ಸಮೀಕ್ಷೆ ಮಾಡಬೇಕು ಎಂದರು.
