Asianet Suvarna News Asianet Suvarna News

ನಾನು ಪಂಚೆ ಉಟ್ಟುಕೊಂಡಿದ್ದಕ್ಕೆ ಕ್ಲಬ್‌ನೊಳಗೆ ಬಿಡಲಿಲ್ಲ, ಈಗ ನಮ್ದೇ ಕ್ಲಬ್‌ ಮಾಡಿಕೊಂಡಿದ್ದೇವೆ: ಸಿಎಂ ಸಿದ್ದರಾಮಯ್ಯ

ನಾನು ಊಟ ಮಾಡಲು ಕ್ಲಬ್‌ಗೆ ಹೋಗುವಾಗ ಪಂಚೆ ಉಟ್ಟುಕೊಂಡಿದ್ದಕ್ಕೆ ಡ್ರೆಸ್‌ ಕೋಡ್ ಸರಿಯಾಗಿಲ್ಲವೆಂದು ನನಗೆ ಪ್ರವೇಶ ನಿರಾಕರಿಸಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.

I was not allowed to enter the club because I was wearing pancha says CM Siddaramaiah sat
Author
First Published Feb 12, 2024, 8:11 PM IST

ಬೆಂಗಳೂರು (ಫೆ.12): ನಾನು ಪಂಚೆಯನ್ನು ಉಟ್ಟುಕೊಂಡು ಹೋಗಿದ್ದಕ್ಕೆ ನಿಮ್ಮ ಡ್ರೆಸ್ ಕೋಡ್ ಸರಿಯಾಗಿಲ್ಲವೆಂದು ನನ್ನನ್ನು ಕ್ಲಬ್ ಒಳಗೆ ಬಿಟ್ಟಿರಲಿಲ್ಲ. ನಾನು ಅವತ್ತೆ ಅಂದುಕೊಂಡೇ, ನಮ್ದು ಒಂದು ಶಾಸಕರಿಗಳಿಗೆ ಕ್ಲಬ್ ಬೇಕು ಅಂತ. ಈಗ ಸ್ಥಾಪಿಸಿರುವ ಕ್ಲಬ್‌ನಲ್ಲಿ ಯಾವುದೇ ಡ್ರೆಸ್ ಕೋಡ್ ಇರೋದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಾಲಬ್ರೂಹಿ ಗೆಸ್ಟ್ ಹೌಸ್  ಕಟ್ಟಡದಲ್ಲಿ ಕರ್ನಾಟಕ ವಿಧಾನಮಂಡಲ ಸಂಸ್ಥೆ ಉದ್ಘಾಟನೆ ಹಾಗೂ ಕಟ್ಟಡದ ಪಾರಂಪರಿಕ ವಿನ್ಯಾಸಕ್ಕೆ ಒಳಪಟ್ಟು ನವೀಕರಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದರು. ಬಾಲಬ್ರೂಹಿ ಕಟ್ಟಡದಲ್ಲಿ ಕರ್ನಾಟಕ ವಿಧಾನ ಮಂಡಲ ಸಂಸ್ಥೆಯನ್ನ ಉದ್ಘಾಟನೆ ಮಾಡಿದ್ದೇವೆ. ಸಂವಿಧಾನಿಕ ಕ್ಲಬ್ ತರಹ ಕರ್ನಾಟಕದಲ್ಲೂ ಇರಬೇಕು ಎಂದು ಬಹಳ ದಿನಗಳಿಂದ ಬಯಕೆ ಇತ್ತು. ಈ ವಿಷಯ ಬಹಳಷ್ಟು ವರ್ಷಗಳಿಂದ ಚರ್ಚೆಯಲ್ಲೇ ಇತ್ತು ಎಂದು ಹೇಳಿದರು.

ದಿಲ್ಲಿ ಚಲೋಗೆ ಹೊರಟ ಹುಬ್ಬಳ್ಳಿ ರೈತರ ಬಂಧನ; ಮೋದಿಯ ಕ್ರಿಮಿನಲ್ ಮೈಂಡ್ ಕಾರಣವೆಂದ ಸಿಎಂ ಸಿದ್ದರಾಮಯ್ಯ

ನಾನು ಒಂದು ಕ್ಲಬ್ ಗೆ ಹೋಗಿದ್ದೆ, ಆಗ ಪಂಚೆ ಉಟ್ಟಿಕೊಂಡಿರುವರನ್ನ ಬಿಡೋದಿಲ್ಲ ಎಂದರು ಗಾಂಧೀಜಿ ಅರೆಬಟ್ಟೆಯಲ್ಲಿದ್ದರೂ ಕೂಡ ರೌಂಡ್ ಟೇಬಲ್ ಕಾನ್ಪುರೆನ್ಸ್ ಮಾಡೋಕೆ ಬಿಟ್ಟರು. ನಂಗೆ ಊಟ ಮಾಡೋಕೆ ಹೋದಾಗ ಬಿಟ್ಟಿರಲಿಲ್ಲ. ನಿಮ್ಮ ಡ್ರೆಸ್ ಕೋಡ್ ಸರಿಯಲ್ಲ ಎಂದು ಒಳಗೆ ಬಿಡಲಿಲ್ಲ. ನಾನು ಅವತ್ತೆ ಅಂದುಕೊಂಡೇ ನಮ್ದು ಒಂದು ಶಾಸಕರಿಗಳಿಗೆ ಕ್ಲಬ್ ಬೇಕು ಅಂತ. ಇಲ್ಲಿ ಯಾವುದೇ ಡ್ರೆಸ್ ಕೋಡ್ ಇರೋದಿಲ್ಲ. ನಾನು ಇವತ್ತು ಪಂಚೆ ಉಟ್ಟುಕೊಂಡೇ ಉದ್ಘಾಟನೆ ಮಾಡಿದ್ದೇನೆ ಎಂದು ತಮ್ಮ ಹಿಂದಿನ ಅನುಭವ ಹಂಚಿಕೊಂಡರು.

ಇನ್ನು ಪಾರಂಪರಿಕ ಕಟ್ಟಡವಾದ ಬಾಲಬ್ರೂಹಿ ಕಟ್ಟಡದಲ್ಲಿ ಶಾಸಕರ ಕ್ಲಬ್ ನಿರ್ಮಾಣಕ್ಕೆ ಸ್ವಲ್ಪ ವಿರೋಧವೂ ಇತ್ತು. ಇದು ಪಾರಂಪರಿಕ ಕಟ್ಟಡ ಇದು ಎಂದು ಕೆಲವರು ವಿರೋಧ ಮಾಡಿದರು. ಆದ್ರೆ ಸಂವಿಧಾನಿಕ ಕ್ಲಬ್ ಮಾಡಲು ಯಾವುದೇ ವಿರೋಧ ಇಲ್ಲ ಅಂತ ನನಗೆ ಎನ್ನಿಸಿತು. ಈ ಕಟ್ಟಡ ವಿಧಾನಸೌಧಕ್ಕೂ ಹತ್ತಿರವಿದೆ. ಶಾಸಕರಗಳಿಗೆ ಸಂಜೆ ಸಮಯಕಳೆಯಲು ಸರಿಯಾದ ಜಾಗವಿರಲಿಲ್ಲ. ಸಂಜೆ ಅಂದ್ರೆ ಬೇರೆ ಅರ್ಥ ಮಾಡಿಕೊಳ್ಳಬೇಡಿ. ಪೇಪರ್ ಒದೋಕೆ ಆ ರೀತಿ , ಇಲ್ಲಿ ಲೈಬ್ರರಿ ಕ್ರೀಡಾ ಚಟುವಟಿಕೆಗಳು ಇರುತ್ತದೆ. ಬಾಲಬ್ರೂಹಿಯಲ್ಲಿ ಮಾಡಿದ್ರೆ ಹೇಗೆ ಅಂದ್ರು, ಅದಕ್ಕೆ ನಾನು ಒಪ್ಪಿಗೆ ಸೂಚಿಸಿದೆ. 

ಏನ್ ಅಂತ ಕರೆಯಬೇಕು ಇದನ್ನ ಕ್ಲಬ್ ? ಅದಕ್ಕೆ ಸ್ಪೀಕರ್ ವಿಧಾನಮಂಡಲ ಸಂಸ್ಥೆ ಎಂದರು. ಈ ಪಾರಂಪರಿಕ ಕಟ್ಟಡವನ್ನ ಹಾಗೇ ಉಳಿಸಿಕೊಂಡು ನವೀಕರಣ ಮಾಡಲಾಗುತ್ತದೆ. ಅಡುಗೆ ಚನ್ನಾಗಿ ಮಾಡಿಸಿ. ನಾನು ಒಂದು ದಿವಸ ಬರ್ತೀನಿ. ಇಂದಿನಿಂದ ಪ್ರಾರಂಭ ಆಗಲಿದೆ. ಎಲ್ಲ‌ ಶಾಸಕರು, ಮಾಜಿ ಶಾಸಕರು ಈ ವಿಧಾನಮಂಡಲ ಸಂಸ್ಥೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದರು. 

ಬಿಡದಿಗೆ ಮೆಟ್ರೋ ರೈಲು ವಿಸ್ತರಣೆಗೆ ಡಿಪಿಆರ್ ರೆಡಿಯಾಗ್ತಿದೆ, ಗ್ರೇಟರ್ ಬೆಂಗಳೂರಿಗೂ ಸೇರಿಸ್ತೇವೆ; ಡಿ.ಕೆ. ಶಿವಕುಮಾರ

ಸ್ವಲ್ಪ ಎಣ್ಣೆ ಹೊಡೀಬಹುದು:  ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಯಾರ ಯಾರ ಕಾಲಕ್ಕೆ ಆಗ್ಬೇಕು ಅನ್ನೋದು ಬರೆದುಕೊಟ್ಟಿರುತ್ತಾರೆ. 2022ರ ಮಾಡಬೇಕಿತ್ತು, ಕಾಲ ಕೂಡಿ ಬಂದಾಗ ಸಿದ್ದರಾಮಯ್ಯ ಸಿಎಂ ಆದಾಗ ಉದ್ಘಾಟನೆ ಆಗಿದೆ. ನಾವು ಬೆಂಗಳೂರು ಕ್ಲಬ್ ಗೆ ಚಪ್ಪಲಿ ಹಾಕಿಕೊಂಡು ಹೋದಾಗ ಬಿಡಲಿಲ್ಲ. ಪೊಲೀಸರ ಜೊತೆ ಜಗಳ ಮಾಡಿ ಹೋದೆವು. ಇಲ್ಲಿ‌ ಸ್ವಲ್ಪ ಎಣ್ಣೆ ಹಾಕಬಹುದು ತೊಂದರೆ ಇಲ್ಲ. ರಾಜ್ಯದ ಸಂಸದರು, ಶಾಸಕರು, ಮಾಜಿ‌ ಶಾಸಕರು, ಸಚಿವರು ಎಲ್ಲರೂ ಬಳಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

Follow Us:
Download App:
  • android
  • ios