ಬೆಂಗಳೂರು[ಫೆ.15]: ಆಪರೇಷನ್‌ ಕಮಲ ಧ್ವನಿ ಸುರಳಿ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸುವುದಾಗಿ ಘೋಷಿಸಿದ್ದು ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವರೇ ಹೊರತು ನಾನಲ್ಲ. ಸದನದ ಒಬ್ಬ ಸದಸ್ಯನಾಗಿ ನಾನು ಸಲಹೆ ನೀಡಿದ್ದೇನೆ ಅಷ್ಟೆ. ಎಸ್‌​ಐಟಿ ತನಿ​ಖೆಗೆ ನನ್ನ ಒತ್ತ​ಡವೇ ಕಾರಣ ಎಂಬ ಬಿಜೆಪಿಯ ಆರೋಪ ಮೂರ್ಖ​ತ​ನದ್ದು ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯ​ಕ ಸಿದ್ದ​ರಾ​ಮಯ್ಯ ಆರೋ​ಪಿ​ಸಿ​ದ್ದಾ​ರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌​ಐಟಿ ರಚ​ನೆಗೆ ಸಿದ್ದ​ರಾ​ಮಯ್ಯ ಒತ್ತಡ ಕಾರಣ ಎಂದು ಬಿಜೆಪಿ ನಾಯ​ಕರು ಆರೋ​ಪಿ​ಸು​ತ್ತಾರೆ. ಆದರೆ, ಸದ​ನದ ಒಬ್ಬ ಸದ​ಸ್ಯ​ನಾಗಿ ನಾನು ಸಲಹೆ ನೀಡಿ​ದ್ದೇನೆ ಅಷ್ಟೇ. ಎಸ್‌​ಐಟಿ ರಚನೆ ಮಾಡು​ವು​ದಾಗಿ ಕುಮಾ​ರ​ಸ್ವಾಮಿ ಅವರೇ ಘೋಷಣೆ ಮಾಡಿದ್ದು ಎಂದ​ರು.

ಎಸ್‌ಐಟಿ ವಿಚಾರದಲ್ಲಿ ಮುಖ್ಯಮಂತ್ರಿ ಅವರು ಸಾಫ್ಟ್‌ ಆಗಿರುವ ಮಾತುಗಳು ಕೇಳುಬರುತ್ತಿವೆಯಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಎಸ್‌​ಐಟಿ ರಚಿ​ಸು​ವು​ದಾಗಿ ಘೋಷಿ​ಸಿ​ದ​ವರೆ ಮುಖ್ಯ​ಮಂತ್ರಿ​ಯ​ವರು. ಆ ವಿಚಾರದಲ್ಲಿ ಈಗ ಏಕೆ ಸಾಫ್ಟ್‌ ಆಗುತ್ತಾರೆ? ಆದಷ್ಟುಬೇಗ ಎಸ್‌ಐಟಿ ತಂಡ ರಚನೆ ಮಾಡ್ತಾರೆ ಎಂಬ ವಿಶ್ವಾಸವಿದೆ ಎಂದರು.