Asianet Suvarna News Asianet Suvarna News

ಶಾಸಕ ತಿಪ್ಪಾರೆಡ್ಡಿಗೆ 90 ಲಕ್ಷ ರೂ. ಕಮೀಷನ್‌ ಕೊಟ್ಟಿದ್ದೇನೆ: ಗುತ್ತಿಗೆದಾರ ಮಂಜುನಾಥ್ ಆರೋಪ

ಚಿತ್ರದುರ್ಗದ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಅವರಿಗೆ ಕಳೆದ 2019ರಿಂದ ಇಲ್ಲಿಯವರೆಗೆ ನಾನೊಬ್ಬನ್ನೇ 90 ಲಕ್ಷ ಕಮಿಷನ್ ಕೊಟ್ಟಿದ್ದೇನೆ ಎಂದು ರಾಜ್ಯ ಗುತ್ತಿಗೆದಾರರ ಕಾರ್ಯಾಧ್ಯಕ್ಷ ಮಂಜುನಾಥ್ ಕಮಿಷನ್ ಆರೋಪ ಮಾಡಿದ್ದಾರೆ.

I gave 90 lakh Rs commission to MLA Tippareddy Contractor Manjunath alleges sat
Author
First Published Jan 16, 2023, 2:58 PM IST

ಬೆಂಗಳೂರು (ಜ.16):  ಚಿತ್ರದುರ್ಗದ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಅವರು ನಮಗೆ ನೇರವಾಗಿ ಕಮಿಷನ್ ಕೇಳಿದ್ದಾರೆ. ಶಾಸಕರು ಕಮಿಷನ್ ಕೇಳಿರುವ ಬಗ್ಗೆ ಎಲ್ಲ ಮೇಸಜ್ ಮತ್ತು ಆಡಿಯೋ ರೆಕಾರ್ಡ್‌ಗಳು ನನ್ನ ಬಳಿಯಿವೆ. ಕಳೆದ 2019ರಿಂದ ಇಲ್ಲಿಯವರೆಗೆ ನಾನೊಬ್ಬನ್ನೇ 90 ಲಕ್ಷ ಕಮಿಷನ್ ಕೊಟ್ಟಿದ್ದೇನೆ ಎಂದು ರಾಜ್ಯ ಗುತ್ತಿಗೆದಾರರ ಕಾರ್ಯಾಧ್ಯಕ್ಷ ಮಂಜುನಾಥ್ ಕಮಿಷನ್ ಆರೋಪ ಮಾಡಿದ್ದಾರೆ.

ರಾಜ್ಯ ಗುತ್ತಿಗೆದಾರರ ಸಂಘ ಅಧ್ಯಕ್ಷ ಕೆಂಪಣ್ಣ ನೇತೃತ್ವದಲ್ಲಿ ಇಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ತಿಪ್ಪಾರೆಡ್ಡಿ ಅವರಿಗೆ ಗುತ್ತಿಗೆದಾರ ಮಂಜುನಾಥ್ ಕಮಿಷನ್‌ ಹಣ ನೀಡುವ ಬಗ್ಗೆ ಮಾತನಾಡಿದ್ದರೆನ್ನಲಾದ ಆಡಿಯೋ ಬಿಡುಗಡೆ ಮಾಡಲಾಯಿತು. ನಂತರ ಮಾತನಾಡಿದ ಗುತ್ತಿಗೆದಾರ ಮಂಜುನಾಥ್, ಕಳೆದ 3 ವರ್ಷದಲ್ಲಿ ನಾನು ಶಾಸಕ‌ ತಿಪ್ಪರೆಡ್ಡಿಗೆ 90 ಲಕ್ಷ ಲಂಚ‌ ನೀಡಿದ್ದೇನೆ. ಈ ಎಲ್ಲ ಹಣವನ್ನು ನಗದು ರೂಪದಲ್ಲಿ‌ ನೀಡಿದ್ದೇನೆ. ಇನ್ನು ಪ್ರತಿ 1 ಕೋಟಿ ರೂ. ಕಾಮಗಾರಿಗೆ 10 ಲಕ್ಷ ರೂ.ನಂತೆ ಶಾಸಕರಿಗೆ ಕಮೀಷನ್‌ ಕೊಡಲಾಗಿದೆ ಎಂದು ಆರೋಪ ಮಾಡಿದ್ದಾರೆ.

ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್: ಈಶ್ವರಪ್ಪ ಪಿಎಗೂ ಸಿಕ್ಕಿತ್ತು ಕಮಿಷನ್

ನೀರಾವರಿ ಇಲಾಖೆ ಕಾಮಗಾರಿಗೆ  ಶೇ.25  ಕಮಿಷನ್:  
ಮೆಡಿಕಲ್, ಗ್ಯಾಸ್ ಪೈಪ್‌ಲೈನ್, ಸಿಸ್ಟಂ ಕಾಮಗಾರಿಗೆ ಶೇ.10ರಂತೆ ಕಮಿಷನ್‌ ಕೇಳಿದ್ದರು. ಎಂಜಿಪಿಎಸ್ ಕಾಮಗಾರಿಗೆ ೧೫ ಲಕ್ಷ ರೂ. ಕಾಮಗಾರಿಗೆ ೪ ಲಕ್ಷ  ಕೊಟ್ಟಿದ್ದೇನೆ. ಶಾಸಕ ತಿಪ್ಪಾರೆಡ್ಡಿ ನೀರಾವರಿ ಇಲಾಖೆ ಕಾಮಗಾರಿಗಳಿಗೆ  ಶೇ.25  ಕಮಿಷನ್, ಪಿಡಬ್ಲ್ಯೂಡಿ ಕಾಮಗಾರಿಗೆ ಶೇ.15 % ಕಮಿಷನ್, ಕಟ್ಟಡ ನಿರ್ಮಾಣ ಕಾಮಗಾರಿಗೆ ಶೇ.5-10  ಕಮಿಷನ್ ಪಡೆದಿದ್ದಾರೆ. ಈವರೆಗೆ ಒಟ್ಟಾರೆ ಚಿತ್ರದುರ್ಗ ಜಿಲ್ಲೆಗೆ ಒಟ್ಟು 800 ಕೋಟಿ ರೂ.ಗಳಿಂದ 900 ಕೋಟಿ  ರೂ. ಮೊತ್ತದ ಕಾಮಾಗಾರಿ ಆಗಿವೆ. ಇನ್ನೂ ಈ ಕಮಿಷನ್‌ ಹಣ ಅವರಿಗೆ ಹೋಗುತ್ತಿದೆ ಎಂದು ತಿಳಿಸಿದರು. 

ಶಾಸಕ ತಿಪ್ಪಾರೆಡ್ಡಿ ಅವರಿಗೆ ಕೊಟ್ಟ ಲಂಚ ವಿವರ:  

  • ಪಿಡಬ್ಲ್ಯೂಡಿ ಕಾಮಗಾರಿ- 12.5 ಲಕ್ಷ ರೂ.
  • ಆಸ್ಪತ್ರೆ ಕಾಮಗಾರಿ- 12.5 ಲಕ್ಷ ರೂ. 
  • ಕೋವಿಡ್‌ ಮೊದಲ ಅಲೆ - 10 ಲಕ್ಷ
  • ಕೋವಿಡ್‌ 2ನೇ ಅಲೆ - 12 ಲಕ್ಷ
  • ಎಂಜಿಪಿಎಸ್‌- 4 ಲಕ್ಷ
  • ಬಡಾವಣೆ ನಿರ್ಮಾಣ- 4 ಲಕ್ಷ
  • ಬಡಾವಣೆಗೆ ಅನುಮತಿ - 18 ಲಕ್ಷ 

 

Bengaluru: ಸರ್ಕಾರದ ವಿರುದ್ಧ 40% ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿ ನಾಲ್ವರು ಅರೆಸ್ಟ್!

ಸಚಿವ ಮುನಿರತ್ನ ಕಮಿಷನ್‌ ದಾಖಲೆ ಬಿಡುಗಡೆ:
ಕರ್ನಾಟಕರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾತನಾಡಿ, ಸಚಿವ ಮುನಿರತ್ನ ಆಸ್ತಿ ಬಗ್ಗೆ ಲೋಕಯುಕ್ತರ ಬಳಿ ಮಾಹಿತಿ ಕೇಳಿದ್ದೇವೆ. ನಾವು ಮಾಡಿರೋ ಭ್ರಷ್ಟಾಚಾರ ಆರೋಪ ಸತ್ಯವಾಗಿದೆ. ಆದಷ್ಟು ಬೇಗ ದಾಖಲೆಗಳನ್ನ ಬಿಡುಗಡೆ ಮಾಡುತ್ತೇವೆ. ಇನ್ನು 30 ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇವೆ. ಈಗ ಪ್ರಕರಣ ನಗ್ಯಾಯಾಲಯದಲ್ಲಿ ಇರುವುದರಿಂದ ಬಿಡುಗಡೆ ಮಾಡಲ್ಲ. ನಮ್ಮ ವಕೀಲರ ಜೊತೆ ಚರ್ಚೆ ಮಾಡಿ ಆದಷ್ಟು ಬೇಗ ಬಿಡುಗಡೆ ಮಾಡುತ್ತೇವೆ ಎಮದು ತಿಳಿಸಿದರು. 

Follow Us:
Download App:
  • android
  • ios