Asianet Suvarna News Asianet Suvarna News

ಸಿದ್ದರಾಮಯ್ಯಗಿಂತ ನಾನು ಶ್ರೀಮಂತನಲ್ಲ, ಕರೆಂಟ್‌ ಬಿಲ್‌ ಕಟ್ಟಲ್ಲ: ರೈತನ ಅವಾಜ್‌ಗೆ ಬೆಚ್ಚಿಬಿದ್ದ ಸಿಬ್ಬಂದಿ!

ಕರೆಂಟ್‌ ಬಿಲ್‌ ಕೊಡಲ್ಲ ಕಣ್ರೀ. ಹಣ ಯಾಕ್ರೀ ಕೊಡಬೇಕು. ಸಿದ್ದರಾಮಯ್ಯ ಹೇಳಿಲ್ಲವಾ, ನಿಂಗೂ ಫ್ರೀ,, ನಂಗೂ ಫ್ರೀ ಅಂತಾ. ಓಟ್‌ ಹಾಕಿಸಿಕೊಳ್ಳುವಾಗ ಒಂದು ಹೇಳಿಕೆ ಕೊಡೋದು. ಗೆದ್ದ ಮೇಲೆ ಬೇರೆ ಹೇಳಿಕೆ ಕೊಡೋದಾ?. ಕರೆಂಟ್‌ ಬಿಲ್‌ ಕಟ್ಟಬೇಕು ಅಂದ್ರೆ ಸಿದ್ದರಾಮಯ್ಯ ಒಂದು ಸೆಕೆಂಡ್‌ ಕೂಡ ಸಿಎಂ ಕುರ್ಚಿ ಮೇಲೆ ಕೂರಬಾರದು, ರಾಜೀನಾಮೆ ಕೊಟ್ಟು ಬರಲಿ’ಚೆಸ್ಕಾಂ ಸಿಬ್ಬಂದಿಗೆ ರೈತನ ಅವಾಜ್

I am not richer than Siddaramaiah I am not paying electricity bill says mandya farmer rav
Author
First Published May 30, 2023, 10:41 PM IST

ಮಂಡ್ಯ (ಮೇ.30) : ‘ಕರೆಂಟ್‌ ಬಿಲ್‌ ಕೊಡಲ್ಲ ಕಣ್ರೀ. ಹಣ ಯಾಕ್ರೀ ಕೊಡಬೇಕು. ಸಿದ್ದರಾಮಯ್ಯ ಹೇಳಿಲ್ಲವಾ, ನಿಂಗೂ ಫ್ರೀ,, ನಂಗೂ ಫ್ರೀ ಅಂತಾ. ಓಟ್‌ ಹಾಕಿಸಿಕೊಳ್ಳುವಾಗ ಒಂದು ಹೇಳಿಕೆ ಕೊಡೋದು. ಗೆದ್ದ ಮೇಲೆ ಬೇರೆ ಹೇಳಿಕೆ ಕೊಡೋದಾ?. ಕರೆಂಟ್‌ ಬಿಲ್‌ ಕಟ್ಟಬೇಕು ಅಂದ್ರೆ ಸಿದ್ದರಾಮಯ್ಯ ಒಂದು ಸೆಕೆಂಡ್‌ ಕೂಡ ಸಿಎಂ ಕುರ್ಚಿ ಮೇಲೆ ಕೂರಬಾರದು, ರಾಜೀನಾಮೆ ಕೊಟ್ಟು ಬರಲಿ’, ಇದು ಕರೆಂಟ್‌ ಬಿಲ್‌ ವಸೂಲಿಗೆ ಹೋದ ಚೆಸ್ಕಾಂ ಸಿಬ್ಬಂದಿಗೆ ಮಂಡ್ಯ ತಾಲೂಕಿನ ಎಲೆಚಾಕನಹಳ್ಳಿ ಗ್ರಾಮದ ರೈತನೊಬ್ಬ ಹಾಕಿದ ಆವಾಜ್‌. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮಂಡ್ಯ ತಾಲೂಕಿನ ಎಲೆಚಾಕನಹಳ್ಳಿಯಲ್ಲಿ ಸರ್ಕಾರದ ಆದೇಶ ಬರುವವರೆಗೆ ಹಣ ಕಟ್ಟುವಂತೆ ತಿಳಿಸಿದ ಸೆಸ್ಕಾಂ ಸಿಬ್ಬಂದಿ ಜೊತೆ ತಕರಾರು ತೆಗೆದ ಈ ರೈತ, ‘200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ಎಂದು ಹೇಳಿದ್ದರಿಂದಲೇ ನಾವು ಕಾಂಗ್ರೆಸ್‌ಗೆ ಓಟು ಹಾಕಿರೋದು. ಸಿದ್ದರಾಮಯ್ಯನೇ ಕಟ್ಟಲ್ಲ ಫ್ರೀ ಅಂದ ಮೇಲೆ ನಾನೂ ಕಟ್ಟೋಲ್ಲ. ಸಿದ್ದರಾಮಯ್ಯಗಿಂತ ನಾನು ಶ್ರೀಮಂತ ಅಲ್ಲ. ಅದೇನು ಮಾಡಿಕೊಳ್ಳುತ್ತೀರಾ ಮಾಡಿಕೊಳ್ಳಿ. ಫೀಸ್‌ ಕಿತ್ತಾಕುತ್ತೀರಾ, ಕಿತಾಕಿ ನೋಡ್ತೀನಿ? ಎಂದಿದ್ದಾನೆ.

ಮಹದಾಯಿ, ಮೇಕೆದಾಟು ಜಾರಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ಡಿಕೆಶಿ ತಾಕೀತು...

ನಿಮಗೆ ತಾಕತ್‌ ಇದ್ರೆ ಕಂಬ ಹತ್ತಿ ಕಿತ್ತಾಕ್ರೀ ನೋಡ್ತೀನಿ?. ಮಾತು ಉಳಿಸಿಕೊಳ್ಳಲ್ಲ ಎಂದರೆ ನಾನು ಸಿಎಂ ಚೇರ್‌ ಮೇಲೆ ಕೂರಲ್ಲ ಅಂತಾ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಕರೆಂಟ್‌ ಬಿಲ್‌ ಕಟ್ಟಬೇಕು ಅಂದ್ರೆ ಸಿದ್ದರಾಮಯ್ಯನವರು ಒಂದು ಸೆಕೆಂಡ್‌ ಕೂಡ ಕುರ್ಚಿ ಮೇಲೆ ಕೂರಬಾರದು, ರಾಜೀನಾಮೆ ಕೊಡಲಿ. ಯಾರನ್ನು ಕರೆದುಕೊಂಡು ಬರ್ತೀರಾ ಕರ್ಕೊಂಡ್‌ ಬನ್ನಿ. ಕರೆಂಟ್‌ ಬಿಲ್‌ ಕಟ್ಟೋದೂ ಇಲ್ಲ, ನಮ್ಮ ಹೆಂಗಸರಿಗೆ ಬಸ್‌ನಲ್ಲಿ ಟಿಕೆಟ್‌ ಕೂಡ ತೆಗೆದುಕೊಳ್ಳುವುದಿಲ್ಲ’ ಎಂದು ಸವಾಲು ಹಾಕಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ..

ಫ್ರೀ ಕರೆಂಟ್‌ ಆಟ, ಸೆಸ್ಕಾಂ ಸಿಬ್ಬಂದಿಗೆ ಸಂಕಟ..!

ಯಾವುದೇ ಕಾರಣಕ್ಕೂ ನಾನು ಕರೆಂಟ್‌ ಬಿಲ್‌ ಕಟ್ಟೋಲ್ಲ. ಯಾರನ್ನ ಕರೆದುಕೊಂಡು ಬರ್ತೀರಾ ಕರ್ಕೊಂಡ್‌ ಬನ್ನಿ. ಕರೆಂಟ್‌ ಬಿಲ್‌ ಕಟ್ಟೋದೂ ಇಲ್ಲ, ನಮ್ಮ ಹೆಂಗಸರಿಗೆ ಬಸ್‌ನಲ್ಲಿ ಟಿಕೆಟ್‌ ಕೂಡ ತೆಗೊಳೋಲ್ಲ. ಅವರು ಗೃಹಲಕ್ಷ್ಮೇಗೆ 2 ಸಾವಿರ ಕೊಡಲಿ ಇಲ್ಲ ಬಿಡಲಿ. ಮಾತು ಉಳಿಸಿಕೊಳ್ಳಲ್ಲ ಎಂದರೆ ನಾನು ಸಿಎಂ ಚೇರ್‌ ಮೇಲೆ ಕೂರಲ್ಲ ಅಂತಾ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಕರೆಂಟ್‌ ಬಿಲ್‌ ಕಟ್ಟಬೇಕು ಅಂದ್ರೆ ಸಿದ್ದರಾಮಯ್ಯ ಒಂದು ಸೆಕೆಂಡ್‌ ಕುರ್ಚಿ ಮೇಲೆ ಕೂರಬಾರದು, ಸಿದ್ದರಾಮಯ್ಯ ರಾಜೀನಾಮೆ ಕೊಡಲಿ. ವೋಟ್‌ ಹಾಕಿಸಿಕೊಳ್ಳುವಾಗ ಒಂದು ಹೇಳಿಕೆ ಕೊಡೋದು. ಗೆದ್ದ ಮೇಲೆ ಬೇರೆ ಹೇಳಿಕೆ ಕೊಡೋದಾ. ಯಾವುದೇ ಕಾರಣಕ್ಕೂ ಬಿಲ್‌ ಕಟ್ಟೋಲ್ಲ. ಏನ್‌ ಮಾಡ್ಕೋತಿರೋ ಮಾಡ್ಕೋ ಹೋಗಿ ಎಂದು ಖಡಕ್ಕಾಗಿ ಹೇಳಿದ್ದಾನೆ.

ಸರ್ಕಾರದ ಭಾಗ್ಯಗಳಿಂದ ಚೆಸ್ಕಾಂ ಸಿಬ್ಬಂದಿಗೆ ಪಿಕಲಾಟ: ಲೈಟ್‌ ಬಿಲ್‌ ಕಟ್ಟಿ ಅಂದ್ರೆ ಕಟ್ಟಲ್ಲ ಎನ್ನುತ್ತಿರುವ ಜನ !

Follow Us:
Download App:
  • android
  • ios