-ವೆಂಕಟೇಶ್‌ ಕಲಿಪಿ

ಬೆಂಗಳೂರು[ನ.17]: ಪರಪುರುಷನ ಜತೆಗೆ ಪತ್ನಿ ತನ್ನ ಮನೆಯಲ್ಲೇ ರಾಸಲೀಲೆ ನಡೆಸುತ್ತಿದ್ದುದನ್ನು ಗೌಪ್ಯವಾಗಿ ಚಿತ್ರೀಕರಿಸಿದ ಪತಿ, ಅದನ್ನೇ ನ್ಯಾಯಾಲಯದ ಮುಂದಿಟ್ಟು ಪತ್ನಿಯ ವ್ಯಭಿಚಾರವನ್ನು ಸಾಬೀತುಪಡಿಸಿ ವಿಚ್ಛೇದನ ಪಡೆದುಕೊಂಡ ಅಪರೂಪದ ಪ್ರಕರಣವಿದು!

ಪ್ರಕರಣದಲ್ಲಿ ಪತ್ನಿಯು ಪರ ಪುರುಷನೊಂದಿಗೆ ನಡೆಸಿದ ರಾಸಲೀಲೆಯನ್ನು ವ್ಯಭಿಚಾರ ಎಂಬುದಾಗಿ ಪರಿಗಣಿಸಿ ದಂಪತಿಯ ವಿವಾಹವನ್ನು ಅನೂರ್ಜಿತಗೊಳಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಪುರಸ್ಕರಿಸಿದೆ. ಅಲ್ಲದೆ, ಪತ್ನಿಯ ಲೈಂಗಿಕ ಚಟುವಟಿಕೆಗಳನ್ನು ಚಿತ್ರೀಕರಿಸಿದ್ದ ಡಿಜಿಟಲ್‌ ವಿಡಿಯೋ ರೆಕಾರ್ಡ್‌ (ಡಿವಿಆರ್‌) ಮತ್ತು ಅದರಿಂದ ದೃಶ್ಯಗಳನ್ನು ವರ್ಗಾಯಿಸಲಾಗಿದ್ದ ಡಿಜಿಟಲ್‌ ವರ್ಸಟೈಲ್‌ ಡಿಸ್ಕ್‌ಗಳನ್ನು (ಡಿವಿಡಿ) ವಿದ್ಯುನ್ಮಾನ ಸಾಕ್ಷ್ಯವಾಗಿ ಪರಿಗಣಿಸಿದೆ. ವಿದ್ಯುನ್ಮಾನ ಸಾಕ್ಷ್ಯವು ನೈಜತೆ ಹಾಗೂ ಪ್ರಸ್ತುತತೆಯಿಂದ ಕೂಡಿದ್ದರೆ ಅದನ್ನು ನ್ಯಾಯಾಲಯ ಒಪ್ಪಬೇಕು ಎಂದು ಹೈಕೊರ್ಟ್‌ ಆದೇಶಿಸಿದೆ.

'ವಿಕೃತ ಮಕ್ಕಳನ್ನು ನೀವೇ ಸಿದ್ಧಪಡಿಸ್ತಿದೀರಾ' ಮಕ್ಕಳ ಹೆತ್ತು ವಿಚ್ಛೇದನ ಕೇಳ್ದವರಿಗೆ ಚಾಟಿ

ಬಳ್ಳಾರಿ ದಂಪತಿಯ ಪ್ರಕರಣ:

ಬಳ್ಳಾರಿಯ ಲತಾ ಮತ್ತು ರವಿ 1991ರ ಜು.7ರಂದು ವಿವಾಹವಾಗಿದ್ದರು. ತನ್ನ ಪತ್ನಿಯ ವಿರುದ್ಧ ಕ್ರೌರ್ಯ ಮತ್ತು ವ್ಯಭಿಚಾರ ಆರೋಪ ಮಾಡಿದ್ದ ರವಿ, 2008ರ ಜೂ.24ರಂದು ವಿವಾಹ ವಿಚ್ಛೇದನಕ್ಕೆ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಪತ್ನಿ ಸುಸಂಸ್ಕೃತಳಲ್ಲ. ಕೋಪಿಷ್ಠಳಾಗಿದ್ದು, ವಿನಾಕಾರಣ ಜಗಳ ಮಾಡಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಳು. ನಾನಿಲ್ಲದ ವೇಳೆ ಅಪರಿಚಿತರು ಮನೆಗೆ ಬರುತ್ತಾರೆ ಎಂಬ ವದಂತಿಯನ್ನು ಕೇಳ್ಪಟ್ಟೆ. ಒಂದು ದಿನ ಬ್ಯಾಂಕ್‌ ಕೆಲಸದ ಅವಧಿಯಲ್ಲಿ ಮನೆಗೆ ಬಂದಾಗ ಅಪರಿತ ವ್ಯಕ್ತಿಯೊಬ್ಬ ಇದ್ದ. ಆ ಬಗ್ಗೆ ಕೇಳಿದರೆ, ಆತ ಶಿಷ್ಯರನ್ನು ಹುಡುಕಿಕೊಂಡು ಬಂದಿದ್ದಾರೆ ಎಂದು ಪತ್ನಿ ನುಡಿದಳು. ನಂತರ ಬಳ್ಳಾರಿಯಲ್ಲಿ ರಮೇಶ್‌ ಎಂಬ ವ್ಯಕ್ತಿಯೊಂದಿಗೆ (ಎಲ್ಲರ ಹೆಸರು ಬದಲಿಸಲಾಗಿದೆ) ಪತ್ನಿ ಪದೇ ಪದೇ ಕಾಣಿಸಿಕೊಂಡಿದ್ದಳು ಎಂದು ವಿಚ್ಛೇದನ ಅರ್ಜಿಯಲ್ಲಿ ರವಿ ದೂರಿದ್ದರು.

ಮಾಜಿ ಹೆಂಡ್ತಿಗೆ ಜೀವನಾಂಶ ಕೊಡ್ಲಿಲ್ಲ: ಮಾಜಿ ಶಾಸಕ ಪುತ್ರನ ಮನೆ ಜಪ್ತಿಗೆ ಕೋರ್ಟ್ ಆದೇಶ

ಬೆಡ್‌ರೂಂನಲ್ಲಿ ಕ್ಯಾಮೆರಾ ಇಟ್ಟಪತಿ:

ಕೆಲಸದ ನಿಮಿತ್ತ ನಾನು 2008ರ ಜೂನ್‌ 4ರಿಂದ 9ರವರೆಗೆ ಬಳ್ಳಾರಿಯಿಂದ ಬೆಂಗಳೂರಿಗೆ ತೆರಳಬೇಕಿತ್ತು. ಜೂನ್‌ 4ರಂದು ಬೆಳಗ್ಗೆ ಮನೆಯ ಬೆಡ್‌ರೂಮಿನಲ್ಲಿ ಡಿಜಿಟಲ್‌ ವಿಡಿಯೋ ರೆಕಾರ್ಡ್‌ (ಡಿವಿಆರ್‌) ಅಳವಡಿಸಿದ್ದೆ. ಜೂನ್‌ 9ರಂದು ಮನೆಗೆ ವಾಪಸ್‌ ಆದಾಗ ಡಿವಿಆರ್‌ ಪರಿಶೀಲಿಸಿದ್ದೆ. ಅದರಲ್ಲಿ ಪತ್ನಿ ಹಾಗೂ ರಮೇಶ್‌ನ ಲೈಂಗಿಕ ಚಟುವಟಿಕೆಗಳು ದಾಖಲಾಗಿದ್ದವು. ಬಳಿಕ ಡಿವಿಆರ್‌ನಲ್ಲಿದ್ದ ದೃಶ್ಯಗಳನ್ನು ಡಿವಿಡಿಗೆ ವರ್ಗಾಯಿಸಿದೆ ಎಂದು ಅರ್ಜಿಯಲ್ಲಿ ದೂರಿದ್ದ ರವಿ, ಪತ್ನಿಯ ಕ್ರೌರ್ಯ ಹಾಗೂ ವ್ಯಭಿಚಾರವನ್ನು ಪರಿಗಣಿಸಿ ವಿಚ್ಛೇದನ ನೀಡುವಂತೆ ಕೋರಿದ್ದರು. ಡಿವಿಆರ್‌ ಹಾಗೂ ಡಿವಿಡಿಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದರು.

ಹೈಕೋರ್ಟ್‌ಗೆ ಹೋದ ಪತ್ನಿ:

ಕೌಟುಂಬಿಕ ನ್ಯಾಯಾಲಯವು ಕೌರ್ಯ ಆರೋಪವನ್ನು ಕೈಬಿಟ್ಟು, ವ್ಯಭಿಚಾರ ಆರೋಪವನ್ನು ಸಾಕ್ಷ್ಯಾಧಾರಗಳೊಂದಿಗೆ ದೃಢೀಕರಿಸಿಕೊಂಡು ಲತಾ ಹಾಗೂ ರವಿ ಮದುವೆಯನ್ನು ಅನೂರ್ಜಿತಗೊಳಿಸಿ 2003ರ ಜುಲೈ 30ರಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಲತಾ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪತಿಯು 2008ರ ಜೂನ್‌ 26ರಂದು ಪ್ರಸಾದದಲ್ಲಿ ವಿಷ ಹಾಕಿ ನೀಡಿದ್ದರು. ಅದನ್ನು ಸೇವಿಸಿದ ನಾನು ತೀವ್ರ ಅಸ್ವಸ್ಥಳಾಗಿದ್ದೆ. ಅಲ್ಲದೆ, ತನ್ನ ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ, ನೀಲಿ ಚಿತ್ರ ನೋಡುವಂತೆ ಹಾಗೂ ಅದರಲ್ಲಿ ನಟಿಸುವಂತೆ ಪತಿ ನನಗೆ ಒತ್ತಾಯಿಸುತ್ತಿದ್ದರು. ನಾನು ನಿರಾಕರಿಸಿದ್ದರಿಂದ ವಿಚ್ಛೇದನ ಪಡೆಯಬೇಕೆಂದಲೇ ರವಿ ತನ್ನ ಸಹಚರರನ್ನು ಬಳಸಿಕೊಂಡು ಮಾರ್ಪಿಂಗ್‌ ಡಿವಿಡಿ ಸೃಷ್ಟಿಸಿದ್ದಾರೆ. ರಮೇಶ್‌ ಸಹ ನನ್ನ ಪತಿಯ ಸ್ನೇಹಿತನೇ. ಆದ್ದರಿಂದ ವಿಚ್ಛೇದನ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು. ಹೈಕೋರ್ಟ್‌ ಲತಾ ಅರ್ಜಿ ವಜಾಗೊಳಿಸಿ, ವಿಚ್ಛೇದನ ಆದೇಶ ಪುರಸ್ಕರಿಸಿದೆ.

ರಾತ್ರೋ ರಾತ್ರಿ ವಿಶ್ವದ ಶ್ರೀಮಂತ ಪಟ್ಟ ಕಳೆದುಕೊಂಡ ಜೆಫ್ ಬೆಜೋಸ್: ಮತ್ಯಾರೀಗ ಸಿರಿವಂತ?

ಹೈಕೋರ್ಟ್‌ ಆದೇಶವೇನು?:

ಪ್ರಕರಣದಲ್ಲಿ ಡಿವಿಆರ್‌ ಮತ್ತು ಡಿವಿಡಿಯನ್ನು ಲತಾ ಮತ್ತು ರವಿ ಪರ ವಕೀಲರ ಮುಂದೆಯೇ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ರಹಸ್ಯ ವಿಚಾರಣೆ ನಡೆಸಿ, ಕಕ್ಷೀದಾರರಿಬ್ಬರ ವಕೀಲರ ಸಮಕ್ಷಮದಲ್ಲಿ ಆ ಡಿವಿಡಿಯನ್ನು ಕೌಟುಂಬಕ ನ್ಯಾಯಾಲಯವು ವೀಕ್ಷಿಸಿತ್ತು. ಡಿವಿಡಿಯಲ್ಲಿದ್ದ ವಿಷಯಗಳನ್ನು ಕಕ್ಷೀದಾರರಿಬ್ಬರ ಪರ ವಕೀಲರು ನಮ್ಮ ಮುಂದೆಯೂ (ಹೈಕೊರ್ಟ್‌) ನಿರಾಕರಿಸಿಲ್ಲ. ಯಾವುದೇ ಅಡಚಣೆ ಇಲ್ಲದೆ ರೆಕಾರ್ಡಿಂಗ್‌ ನಡೆದಿದೆ. ಕ್ಯಾಮೆರಾದ ಗೋಚರತೆಯಲ್ಲಿಯೇ ಘಟನೆಗಳು ಸಹಜವಾಗಿ ನಡೆದಿರುವುದು ಕಾಣಿಸುತ್ತದೆ. ಡಿವಿಡಿಯಲ್ಲಿರುವ ಘಟನೆಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ ಡಿವಿಆರ್‌ನಿಂದಲೇ ರೆಕಾರ್ಡ್‌ ಆಗಿವೆ ಎಂದು ಕೌಟುಂಬಿಕ ನ್ಯಾಯಾಲಯ ಸ್ಪಷ್ಟವಾಗಿ ತೀರ್ಪಿನಲ್ಲಿ ಹೇಳಿದೆ. ಇದರಿಂದ ಡಿವಿಡಿಯಲ್ಲಿರುವ ಘಟನೆಗಳನು ನಿಜವಾಗಿ ನಡೆದಿದೆ ಎಂಬುದು ಡಿವಿಆರ್‌ ಸಾಕ್ಷ್ಯದಿಂದ ಸಾಬೀತಾಗುತ್ತದೆ ಎಂದು ಹೈಕೋರ್ಟ್‌ ಆದೇಶಿಸಿದೆ.

ಸಮಯಕ್ಕೆ ಬಾರದ ಅಂಬುಲೆನ್ಸ್; ಮಗುವಿನೊಂದಿಗೆ ನಟಿ ಸಾವು!

ತನ್ನ ವಿರುದ್ಧದ ಆರೋಪ ಖಂಡಿಸದ ಪತ್ನಿ:

ಲತಾ ಮತ್ತು ರಮೇಶ್‌ ಒಂದು ಬಾರಿಯಷ್ಟೇ ಅಲ್ಲ ಅನೇಕ ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ರವಿ ಬಳ್ಳಾರಿಗೆ ಹಿಂದಿರುಗಿದ 2008ರ ಜೂನ್‌ 9ರಂದು ಸಂಜೆ ಕೂಡ ಮನೆಯಲ್ಲಿ ಲೈಂಗಿಕ ಚಟುವಟಿಕೆ ನಡೆಸಿದ್ದಾರೆ. ಅಂದು ಬೆಳಿಗ್ಗೆ ರವಿ ತನ್ನ ಮನೆಯಲ್ಲಿದ್ದ ದೃಶ್ಯಗಳು ಡಿವಿಡಿಯಲ್ಲಿ ಕಾಣಸಿಗುತ್ತವೆ. ಇನ್ನು, ಡಿವಿಡಿಯಲ್ಲಿರುವ ದೃಶ್ಯಗಳನ್ನು ಮಾರ್ಫಿಂಗ್‌ ಮಾಡಲಾಗಿದೆ ಎಂದು ಹೇಳುವ ಲತಾ, ಅದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯವನ್ನು ಹಾಜರುಪಡಿಸಿಲ್ಲ. ಡಿವಿಡಿಯನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವಂತೆ ಕೋರಿಲ್ಲ. ಇದರಿಂದ ಆಕೆ ತನ್ನ ವಿರುದ್ಧದ ಆರೋಪಗಳನ್ನು ಖಂಡಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಮತ್ತು ನೀಲಿ ಚಿತ್ರದಲ್ಲಿ ನಟಿಸುವಂತೆ ರವಿ ಒತ್ತಾಯಿಸಿದ ಬಗ್ಗೆ ಲತಾ ಯಾವುದೇ ಹಂತದಲ್ಲೂ ದೂರು ನೀಡಿಲ್ಲ. ಹೀಗಾಗಿ ಆ ಆರೋಪಗಳು ನಂಬಲರ್ಹವಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ.