'ವಿಕೃತ ಮಕ್ಕಳನ್ನು ನೀವೇ ಸಿದ್ಧಪಡಿಸ್ತಿದೀರಾ' ಮಕ್ಕಳ ಹೆತ್ತು ವಿಚ್ಛೇದನ ಕೇಳ್ದವರಿಗೆ ಚಾಟಿ

ಇದೊಂದು ವಿಚಿತ್ರ ವಿಚ್ಛೇದನ ಪ್ರಕರಣ/  ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಪೋಷಕರ ವಿರುದ್ಧವೇ ಹೈಕೋರ್ಟ್ ಗರಂ/ ದ್ವೇಷಿಸಲು ಹೇಳಿಕೊಡುವ ನೀವು ಯಾವ ಕಾರಣಕ್ಕೆ ಪೋಷಕರಾಗಬೇಕು?

Karnataka High court unhappy with parents who filed for divorce

ಬೆಂಗಳೂರು(ನ. 04) ತಾಯಿಯನ್ನು ದ್ವೇಷಿಸುವಂತೆ ಹೇಳಿಕೊಡು‌ವ ತಂದೆ ತಂದೆಯನ್ನು ದ್ವೇಷಿಸುವಂತೆ ಹೇಳಿಕೊಡುವ ತಾಯಿ ಯಾವ ಪುರುಷಾರ್ಥಕ್ಕೆ ಪೋಷಕರಾಗಬೇಕು‌ ? ಪೋಷಕರ ಸದ್ಯದ ಸ್ಥಿತಿಯ ಬಗ್ಗೆ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.

ವಿಚ್ಛೇದನಕ್ಕೆ ಸಂಬಂಧಿಸಿದ ಅರ್ಜಿ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿತ್ತು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪೋಷಕರನ್ನೇ ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು. ನ್ಯಾಯಾಲಯದ ಹಾಲ್‌ನಲ್ಲಿ ಏರುಧ್ವನಿಯಲ್ಲಿ ಗದರಿದ ನ್ಯಾಯಮೂರ್ತಿ ಪ್ರಶ್ನೆಗಳ ಮೇಲೆ ಪ್ರಶ್ನೆ ಎಸೆದರು.

ಇವರಿಗೆಲ್ಲ ಹೇಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ರಿ

ನ್ಯಾ.ವೀರಪ್ಪರಿಂದ ವಿಚ್ಚೇದನ ಅರ್ಜಿ ಸಲ್ಲಿಸಿದ್ದ ಪೋಷಕರಿಗೆ ಕ್ಲಾಸ್ ತೆಗೆದುಕೊಂಡರು. ತಾಯಿಯನ್ನ ದ್ವೇಷಿಸಲು ತಂದೆ ಹೇಳಿದ್ದ ವಿಚಾರಕ್ಕೆ ಗರಂ ಆದ ನ್ಯಾಯಮೂರ್ತಿ  ನಿಮ್ಮ ಪ್ರತಿಷ್ಠೆಗೆ‌ ಧಕ್ಕೆಯಾಗಬಾರದು, ನಿಮ್ಮ ದುರಹಂಕಾರಕ್ಕೆ ಜಯವಾಗಬೇಕು..? ನಿಮ್ಮ ತೋರ್ಪಡಿಕೆಗಳಿಗೆ‌ ಮಕ್ಕಳನ್ನು ಯಾಕೆ ಬಳಸಿಕೊಳ್ಳುತ್ತೀರಾ? ನಿಮ್ಮ ಸ್ವಾರ್ಥಗಳಿಗೆ ಮಕ್ಕಳನ್ನು ಅಸ್ತ್ರವಾಗಿ ಬಳಸಿಕೊಳ್ಳುವ ನೀವು ಹೇಡಿಗಳು, ತಾಲಿಬಾನ್‌ಗಿಂತ ವಿಕೃತ ಮಕ್ಕಳನ್ನು ನೀವೇ ಸಿದ್ದಪಡಿಸುತ್ತಿದ್ದೀರಾ.! ಎಂದು ಪ್ರಶ್ನೆ ಮಾಡಿದರು.

ಪೋಷಕರ ವೈಷಮ್ಯ, ಕಲಹ, ಮನಸ್ತಾಪಗಳನ್ನೇ ನೋಡಿ ಮಕ್ಕಳು ಬೆಳೆಯುತ್ತಾರೆ ಇವರುಗಳೇ‌ ಭವಿಷ್ಯದಲ್ಲಿ ಸಮಾಜಘಾತುಕರಾಗ್ತಾರೆ.! ಸಮಾಜಘಾತಕ ಮಕ್ಕಳನ್ನು ಸಮಾಜಕ್ಕೆ ನಿಮ್ಮಂತ‌ ಪೋಷಕರು ಅರ್ಪಿಸುತ್ತಿದ್ದೀರಾ.! ನೀವುಗಳು ಯಾವ ಪುರುಷಾರ್ಥಕ್ಕೆ ಪೋಷಕರಾಗಬೇಕು? ಮಕ್ಕಳು ದಾರಿ ತಪ್ಪಲು ಇಂತಹ ಪೋಷಕರೇ ಪ್ರಮುಖ ಕಾರಣ. ಈಗ ಎಲ್ಲಿ ಹೋಯ್ತು ವಕೀಲರ ಸಂಘ, ಎನ್‌ಜಿಒಗಳು ? ವಕೀಲರ ಸಂಘ ಹಾಗು ಎನ್‌ಜಿಒಗಳು ಈ ವಿಚಾರದ ಬಗ್ಗೆ ಗಮನ ಹರಿಸಲಿ ಎಂದು ನ್ಯಾಯಪೀಠ ಹೇಳಿತು.

 

Latest Videos
Follow Us:
Download App:
  • android
  • ios