ಮಾಜಿ ಹೆಂಡ್ತಿಗೆ ಜೀವನಾಂಶ ಕೊಡ್ಲಿಲ್ಲ: ಮಾಜಿ ಶಾಸಕ ಪುತ್ರನ ಮನೆ ಜಪ್ತಿಗೆ ಕೋರ್ಟ್ ಆದೇಶ

ಡೈವರ್ಸ್ ಕೊಟ್ಟ ಹೆಂಡ್ತಿಗೆ ಜೀವನಾಂಶ ಕೊಟ್ಟಿಲ್ಲವೆಂದು ಮಾಜಿ ಶಾಸಕ ಪುತ್ರನ ಮನೆ ಜಪ್ತಿ ಮಾಡುವಂತೆ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಯಾರು? ಏನು? ಮುಂದೆ ಓದಿ

divorce case family court orders EX MLA Shivashankar gowda son  House seize

ಮೈಸೂರು, [ಅ.28]: ಕಳೆದ 7 ತಿಂಗಳಿಂದ ಪತ್ನಿಗೆ ಜೀವನಾಂಶ ನೀಡದ ಹಿನ್ನೆಲೆಯಲ್ಲಿ ಮಾಜಿ ಶಾಸಕ ದಿವಂಗತ ಶಂಕರಲಿಂಗೇಗೌಡರ ಪುತ್ರ ನಾಗೇಶ್​ ಮನೆ ಜಪ್ತಿ ಮಾಡುವಂತೆ ಮೈಸೂರು ಕೌಟುಂಬಿಕ ನ್ಯಾಯಾಲಯ ಆದೇಶ ನೀಡಿದೆ.

 7 ವರ್ಷಗಳ ಹಿಂದೆ ನಾಗೇಶ್ ಅವರು, ಜಯಶ್ರೀ ಅರಸು ಹೆಸರಿನ ಮಹಿಳೆಯನ್ನ 2ನೇ ಮದುವೆ ಆಗಿದ್ದರು. ಇಬ್ಬರ ಸಂಸಾರದಲ್ಲಿ ಕಲಹ ಉಂಟಾಗಿ ಒಂದೂವರೆ ವರ್ಷದ ಹಿಂದೆ ಜಯಶ್ರೀ ಅರಸ್​​ಗೆ ನಾಗೇಶ್ ಡೈವರ್ಸ್ ನೀಡಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ...

ಹೀಗಾಗಿ ಕೋರ್ಟ್​, ಜಯಶ್ರೀ ಅರಸ್​ಗೆ ಜೀವನಾಂಶವಾಗಿ ಪ್ರತಿ ತಿಂಗಳು 10 ಸಾವಿರ ರೂಪಾಯಿ ನೀಡುವಂತೆ ನಾಗೇಶ್ ಸೂಚನೆ ನೀಡಿ  ಆದೇಶ ಹೊರಡಿಸಿತ್ತು.  ಆದರೆ ನಾಗೇಶ್ ಕಳೆದ 7 ತಿಂಗಳಿಂದ ಯಾವುದೇ ಜೀವನಾಂಶ ನೀಡಿರಲಿಲ್ಲ. 

ಇದರಿಂದ ಜಯಶ್ರೀ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಅದರಂತೆ ಇಂದು [ಸೋಮವಾರ] ವಿಚಾರಣೆ ನಡೆಸಿ ತೀರ್ಪು ನೀಡಿರುವ ಕೋರ್ಟ್​, ನಾಗೇಶ್ ಮನೆ ಜಪ್ತಿ ಮಾಡುವಂತೆ ಮಹತ್ವದ ಆದೇಶ ಹೊರಡಿಸಿದೆ.

Latest Videos
Follow Us:
Download App:
  • android
  • ios