ರಾಜ್ಯದಲ್ಲಿ ಮತ್ತೊಂದು ಘೋರ ದುರಂತ; ಕಲುಷಿತ ನೀರು ಸೇವಿಸಿ ನೂರಾರು ಜನರು ತೀವ್ರ ಅಸ್ವಸ್ಥ!
ಕಲುಷಿತ ನೀರು ಕುಡಿದು ಸಾವಿರಾರು ಮಂದಿ ವಾಂತಿ ಭೇದಿಯಿಂದ ಅಸ್ವಸ್ಥರಾಗಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪಂದ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ.
ಉಡುಪಿ (ಅ.4): ಕಲುಷಿತ ನೀರು ಕುಡಿದು ಸಾವಿರಾರು ಮಂದಿ ವಾಂತಿ ಭೇದಿಯಿಂದ ಅಸ್ವಸ್ಥರಾಗಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪಂದ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ.
6 ಮತ್ತು 7ನೇ ವಾರ್ಡ್‌ನಲ್ಲಿ ಕುಡಿಯುವ ನೀರು ಕಲುಷಿತಗೊಂಡ ಪರಿಣಾದಿಂದ ನಡೆದಿರುವ ಅನಾಹುತ. ಕರ್ಕಿಹಳ್ಳಿಯಲ್ಲಿ ಸುಮಾರು 600ಕ್ಕೂ ಅಧಿಕ ಜನರು ಅಸ್ವಸ್ಥರಾಗಿದ್ದಾರೆ. ಪ್ರಮಾಣ ಇನ್ನಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ. ಪ್ರತಿ ಮನೆಯಲ್ಲಿ ವಾಂತಿಭೇದಿಯಿಂದ ಬಳಲುತ್ತಿದ್ದಾರೆ.
ಮಂಡ್ಯ: ಕಲುಷಿತ ನೀರು ಸೇವಿಸಿ ಇಬ್ಬರು ವೃದ್ಧರ ಸಾವು, ಮೂವರ ಸ್ಥಿತಿ ಗಂಭೀರ
ಉಪ್ಪುಂದದ ಕಾಸನಾಡಿ ಪರಿಸರದ ಬಾವಿಯಿಂದ ವಾರ್ಡ್‌ಗಳಿಗೆ ನೀರು ಸರಬರಾಜು ಆಗುತ್ತಿದೆ. ನೀರು ಕಲುಷಿತಗೊಂಡಿದ್ದು ಇಲ್ಲಿಂದ ಸರಬರಾಜು ನೀರನ್ನೇ ಕುಡಿದು ಗ್ರಾಮಕ್ಕೆ ಗ್ರಾಮವೇ ವಾಂತಿ ಭೇದಿಯಿಂದ ಬಳಲುತ್ತಿದೆ. ನೂರಕ್ಕೂ ಅಧಿಕ ಮಂದಿಯಲ್ಲಿ ಕಳೆದ ಒಂದು ವಾರದಿಂದ ವಾಂತಿ ಭೇದಿ ಅನಾರೋಗ್ಯ ಪೀಡಿತ ಜನರ ಪರೀಕ್ಷೆ ಮಾದರಿ ಪ್ರಯೋಗಾಲಯದ ವರದಿ ಕೈಸೇರಿದೆ. ಮಡಿಕಲ್, ಕರ್ಕಿಕಳಿ ಗ್ರಾಮಸ್ಥರಲ್ಲಿ ಆಮಶಂಕೆ ಭೇದಿ ರೋಗದ ಗುರುತು ಪತ್ತೆಯಾಗಿದೆ.
ಉಡುಪಿ ಡಿಎಚ್‌ಒ ಐಪಿ ಗಡಾದ್ ಮಾಹಿತಿ
ಸದ್ಯ ಬಾವಿಯಿಂದ ನೀರು ಸರಬರಾಜು ನಿಲ್ಲಿಸಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕರ್ ನೀರು ಸರಬರಾಜು ಮಾಡಿದ ಬಳಿಕ ರೋಗಿಗಳ ಸಂಖ್ಯೆ ಇಳಿಮುಖವಾಗಿದೆ. ಶುಕ್ರವಾರ ಕೇವಲ ಓರ್ವ ವ್ಯಕ್ತಿಯಲ್ಲಿ ಕಾಣಿಸಿಕೊಂಡ ಆಮಶಂಕೆ ಭೇದಿ. ಆಮಶಂಕೆ ಹಬ್ಬಲು ಕಾರಣ ಪತ್ತೆ ಹಚ್ಚುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ. ಕುಡಿಯುವ ನೀರಿನಿಂದ ರೋಗ ಹಬ್ಬಿದೆಯಾ ಅಥವಾ ಬೇರೆ ಕಾರಣಗಳಿವೆಯಾ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿರುವ ವೈದ್ಯರು. ಸಪ್ಟೆಂಬರ್ 30ಕ್ಕೆ 78 ಆಮಶಂಕೆ ಪ್ರಕರಣಗಳು ಪತ್ತೆಯಾಗಿವೆ. ಬಳಿಕ ಅಕ್ಟೋಬರ್ 1 ರಂದು 24 ಪ್ರಕರಣಗಳು, ಅ.2 ರಂದು 15 ಪ್ರಕರಣಗಳು ಪತ್ತೆಯಾಗಿವೆ. ಹತೋಟಿಗೆ ಬಂದಿದೆ. ಎಲ್ಲ ರೀತಿ ತಪಾಸಣೆ ನಡೆಸಲಾಗುತ್ತಿದೆ ಎಂದಿದ್ದಾರೆ.