ಚಿಕ್ಕಮಗಳೂರು: ಅನುಕಂಪದ ಆಧಾರದ ಕೆಲಸಕ್ಕೆ ಶಿಫಾರಸ್ಸು, ಲಂಚ ಸಮೇತ ಲೋಕಾಯುಕ್ತ ಬಲೆಗೆ ಬಿದ್ದ ಬಿಇಓ
ಮಹಿಳೆ ಬಿಇಓ ಬಳಿ ಮನವಿ ಮಾಡಿದಾಗ ಬಿಇಓ ಹೇಮಂತ್ ರಾಜ್ 15000 ದಿಂದ 10 ಸಾವಿರಕ್ಕೆ ಬಂದಿದ್ದರು. 10 ಸಾವಿರ ಹಣ ಪಡೆದುಕೊಳ್ಳುವಾಗ ಬಿಇಓ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ಇನ್ಸ್ ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದ ತಂಡ ಹೇಮಂತ್ ರಾಜ್ ಅವರನ್ನ ಬಂಧಿಸಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಡಿ.27): ಅನುಕಂಪ ಆಧಾರದ ಕೆಲಸಕ್ಕೆ ಶಿಫಾರಸ್ಸು ಮಾಡಲು ಮಹಿಳೆ ಬಳಿ 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಇಂದು(ಬುಧಾವರ) ನಡೆದಿದೆ. ಹೇಮಂತ್ ರಾಜ್ ಲೋಕಾಯುಕ್ತ ಬಲೆಗೆ ಬಿದ್ದ ಬಿಇಓ ಅಧಿಕಾರಿಯಾಗಿದ್ದಾರೆ.
ಹಣ ಪಡೆದುಕೊಳ್ಳುವಾಗ ಬಿಇಓ ಲೋಕಾಯುಕ್ತ ಬಲೆಗೆ:
ಚಿಕ್ಕಮಗಳೂರು ತಾಲೂಕಿನ ಹಳ್ಳಿಯೊಂದರ ಮಹಿಳೆಯ ಪತಿ ಮೂಡಿಗೆರೆ ತಾಲೂಕಿನ ಹೊಯ್ಸಳಲು ಗ್ರಾಮದ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. 2023ರ ಮೇ 5 ರಂದು ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಹಾಗಾಗಿ, ಶಿಕ್ಷಕರ ಪತ್ನಿ ಅನುಕಂಪದ ಆಧಾರದ ನೌಕರಿಗೆ ಶಿಫಾರಸ್ಸು ಮಾಡುವಂತೆ ಬಿಇಓಗೆ ಮನವಿ ಮಾಡಿದ್ದರು. ಅವರು ದಾಖಲೆ ಕೇಳುವ ನೆಪದಲ್ಲಿ ದಿನದೂಡುತ್ತಿದ್ದರು. ಮಹಿಳೆ ಬಿಇಓ ಕಚೇರಿಯ ಎಸ್.ಡಿ.ಎ. ಬಳಿ ಕೇಳಿದಾಗ 15000 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು.
ಒಂದು ರುಪಾಯಿ ಕೂಡ ಲಂಚ ಕೊಡಬೇಡಿ: ಸಾರ್ವಜನಿಕರಿಗೆ ಡಿಕೆಶಿ ಖಡಕ್ ಎಚ್ಚರಿಕೆ