ಸರ್ಫಲ್ಲಿ ಒಗೆದ ಬಟ್ಟೆಯಲ್ಲಿ ಸಾಕ್ಷ್ಯ ಸಿಕ್ಕಿದ್ದು ಹೇಗೆ: ದರ್ಶನ್ ಸಿಕ್ಕಿಸಲು ಕಲ್ಪಿತ ಕತೆ ಕಟ್ಟಲಾಗಿದೆ ಎಂದ ವಕೀಲ

ಸರ್ಫ್ ಹಾಕಿ ತೊಳೆದು, ಕುಕ್ಕಿ, ಹಿಂಡಿ ಮಹಡಿ ಮೇಲೆ ಬಿಸಿಲಿಗೆ ಹಾಕಿ ಒಣಗಿಸಿದ ಬಟ್ಟೆಯಲ್ಲಿ ಪೊಲೀಸರಿಗೆ ಸಾಕ್ಷಿ ಸಿಕ್ಕಿದೆಯೇ? ಸ್ವಇಚ್ಛಾ ಹೇಳಿಕೆ, ಸಾಕ್ಷಿ ಹೇಳಿಕೆ ಮತ್ತು ಪಂಚನಾಮೆಯಲ್ಲಿ ವ್ಯತ್ಯಾಸಗಳಿವೆ. 

How evidence was found in clothes washed in surf lawyer said that a fictitious story was made up to trap Darshan gvd

ಬೆಂಗಳೂರು (ಅ.05): ಸರ್ಫ್ ಹಾಕಿ ತೊಳೆದು, ಕುಕ್ಕಿ, ಹಿಂಡಿ ಮಹಡಿ ಮೇಲೆ ಬಿಸಿಲಿಗೆ ಹಾಕಿ ಒಣಗಿಸಿದ ಬಟ್ಟೆಯಲ್ಲಿ ಪೊಲೀಸರಿಗೆ ಸಾಕ್ಷಿ ಸಿಕ್ಕಿದೆಯೇ? ಸ್ವಇಚ್ಛಾ ಹೇಳಿಕೆ, ಸಾಕ್ಷಿ ಹೇಳಿಕೆ ಮತ್ತು ಪಂಚನಾಮೆಯಲ್ಲಿ ವ್ಯತ್ಯಾಸಗಳಿವೆ. ತನಿಖಾಧಿಕಾರಿ ಸಾಕ್ಷಿಯಾಗಿದ್ದಾರೆ. ದರ್ಶನ್ ಸಿಕ್ಕಿಸಲು ಕಲ್ಪಿತ ಕತೆ ಕಟ್ಟಲಾಗಿದೆ..! ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ವೇಳೆ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ದು ಹೀಗೆ. 57ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ 1 ತಾಸು ವಾದ ಮಂಡಿಸಿದ ಸಿ.ವಿ. ನಾಗೇಶ್, ದರ್ಶನ್ ಭಾಗಿಯಾಗಿದ್ದಾರೆ ಎನ್ನಲು ಅವರು ಧರಿಸಿದ್ದರು ಎನ್ನಲಾದ ಬಟ್ಟೆ ಮೇಲಿನ ರಕ್ತದ ಕಲೆಗಳ ಸಾಕ್ಷಿ ಒದಗಿಸಲಾಗಿದೆ. 

ಆದರೆ,ಮನೆಕೆಲಸದಾಕೆ ಬಟ್ಟೆಗಳನ್ನು ಸರ್ಫ್‌ ಹಾಕಿ ತೊಳೆದು ಬಿಸಿಲಿನಲ್ಲಿ ಒಣ ಹಾಕಿದ್ದಾರೆ. ಪಂಚನಾಮೆ ವೇಳೆ ವಶಪಡಿಸಿಕೊಂಡಿರುವ ಆ ಬಟ್ಟೆಯಲ್ಲಿ ರಕ್ತದ ಕಲೆಗಳ ಮಾದರಿ ಸಿಕ್ಕಿದೆ ಎಂದಿದ್ದಾರೆ. ಹಾಗಾದರೆ, ಬಟ್ಟೆ ಕೆಲವು ಭಾಗ ಗಳನ್ನು ಬಿಟ್ಟು ತೊಳೆಯಲಾಗಿತ್ತೇ? ಎಂದು ಪೊಲೀಸ್‌ ಕ್ರಮದ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಘಟನೆ ಸಂದರ್ಭದಲ್ಲಿ ತಮ್ಮ ಕಕ್ಷಿದಾರ ಧರಿಸಿದ್ದು ಚಪ್ಪಲಿಯೋ? ಅಥವಾ ಶೂ? ಎನ್ನುವುದು ಅಸ್ಪಷ್ಟವಾಗಿದೆ. ಸ್ವಇಚ್ಛಾ ಹೇಳಿಕೆಯಲ್ಲಿ ದರ್ಶನ್ 'ಚಪ್ಪಲಿ ಧರಿಸಿದ್ದೆ' ಎಂದಿದ್ದಾರೆ. ಆದರೆ ಪಂಚ ನಾಮೆಯಲ್ಲಿ 'ಶೂ' ಎಂದು ಉಲ್ಲೇಖಿಸಲಾಗಿದೆ. 

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ನಮ್ಮಂತಹವರಿಗೆ ಮಾದರಿಯಾಗಲಿ: ಸಾ.ರಾ.ಮಹೇಶ್

ಅಲ್ಲದೇ, ವಿಳಂಬವಾಗಿ ಪಂಚನಾಮೆ ಮಾಡಲಾಗಿದೆ. ಸಾಕ್ಷಿಗಳನ್ನು ಪ್ಲಾಂಟ್ ಮಾಡಿ ನಂತರ ರಿಕವರಿ ಮಾಡ ಲಾಗಿದೆ. ಹೀಗಾಗಿ, ಪೊಲೀಸರು ವಶ ಪಡಿಸಿ ಕೊಂಡಿರುವ ವಸ್ತುಗಳು, ಹೇಳಿಕೆ ಸ್ವೀಕಾರಾ ರ್ಹ ವಾಗಿಲ್ಲ, ಪಂಚನಾಮೆ ಮತ್ತು ಸ್ವಇಚ್ಛಾ ಹೇಳಿಕೆಗಳಿಗೆ ಸಾಮ್ಯತೆ ಕಂಡು ಬರುತ್ತಿಲ್ಲ. ಪೊಲೀಸರು ಸಾಮಾನ್ಯ ನಿಯಮಗಳನ್ನು ಪಾಲನೆ ಮಾಡಿಲ್ಲ. ದರ್ಶನ್ ರನ್ನು ಸಿಕ್ಕಿಸಲು ಪ್ರಯತ್ನಿಸಲಾಗಿದೆ ಎಂದರು. ವಿಚಾರಣೆಯನ್ನು ನ್ಯಾಯಾಲಯ ಶನಿವಾರ (ಅ.5) ಮಧ್ಯಾಹ್ನ 12.30ಕ್ಕೆ ಮುಂದೂಡಿದೆ.

ತಡವಾಗಿ ವೆಪನ್ ರಿಕವರಿ: ಘಟನೆ ನಡೆದು ದಿನಗಳ ಬಳಿಕ ಕೃತ್ಯಕ್ಕೆ ಬಳಸಿದ ಮರದ ಕೊಂಬೆ, ಬಿದಿರಿನ ಕೋಲು, ನೀರಿನ ಬಾಟಲಿ, ನೈಲಾನ್ ಹಗ್ಗವನ್ನು ರಿಕವರಿ ಮಾಡಲಾಗಿದೆ. ಘಟನೆ ಸ್ಥಳ, ವಸ್ತುಗಳ ಬಗ್ಗೆ ಮಾಹಿತಿ ಇದ್ದರೂ ತಡವಾಗಿ ರಿಕವರಿ ಮಾಡಿದ್ದು ಏಕೆ?. ಶೆಡ್‌ ಭದ್ರತಾ ಸಿಬ್ಬಂದಿಗೆ ಕನ್ನಡ ಬರುವುದಿಲ್ಲ. ಆತನಿಂದ ಕನ್ನಡದಲ್ಲೇ ಸಾಕ್ಷಿ ದಾಖಲಿಸಿಕೊಳ್ಳಲಾಗಿದೆ ಎಂದರು.

ರೇಣುಕಾಸ್ವಾಮಿಗೆ ಯಾರೂ ಹೊಡೆದಿಲ್ಲ, ಮುಖಕ್ಕೆ ನಾಯಿ ಕಚ್ಚಿದೆ!: ರೇಣುಕಾಸ್ವಾಮಿಯ ಮುಖ ನಾಯಿ ಕಚ್ಚಿದೆ ಅಂತ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳಲ್ಲಿ ಹಲ್ಲೆ ಎಂದು ಬಿಂಬಿಸಲಾಗಿದೆ. ಮೀಡಿಯಾ ಟ್ರಯಲ್ ನಡೆಸಲಾಗಿದೆ. ಚಾರ್ಜ್‌ ಶೀಟ್ ವಿಚಾರ ಮಾಧ್ಯಮಗಳಿಗೆ ನೀಡಲಾಗಿದೆ. ತನಿಖಾಧಿಕಾರಿಯನ್ನು ತರಾಟೆಗೆ ತೆಗೆದು ಕೊಳ್ಳಬೇಕೆಂದು ಸಿ.ವಿ.ನಾಗೇಶ್ ವಾದಿಸಿದರು.

ಮಹಾರಾಷ್ಟ್ರ ವಿಧಾನಸೌಧದ 3ನೇ ಮಹಡಿಯಿಂದ ಜಿಗಿದು ಉಪಸ್ಪೀಕರ್, ಸಂಸದನಿಂದ ಹೈಡ್ರಾಮಾ!

ದರ್ಶನ್‌ಗೆ ಗುಣವಾಗಿಲ್ಲ ಬೆನ್ನುನೋವು: ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಗೆ ಬೆನ್ನು ನೋವು ಹೆಚ್ಚಾದ ಹಿನ್ನೆಲೆಯಲ್ಲಿ ವೈದ್ಯರು ಮತ್ತೊಮ್ಮೆ ತಪಾಸಣೆ ನಡೆಸಿದರು. ಬಳ್ಳಾರಿ ಸೆಂಟ್ರಲ್ ಜೈಲಿಗೆ ಭೇಟಿ ನೀಡಿದ ವಿಮ್ಸ್‌ ವೈದ್ಯರು, ಬೆನ್ನು ನೋವಿಗೆ ಸ್ಕ್ಯಾನಿಂಗ್ ಮತ್ತು ಎಕ್ಸರೇ ಮಾಡಲು ತಿಳಿಸಿದ್ದಾರೆ ಎನ್ನಲಾಗಿದೆ. ನೋವಿನ ಸಮಸ್ಯೆಯಿಂದ ದರ್ಶನ್ ಅವರ ಬೆನ್ನು ಬಾವು (ಊದಿಕೊಂಡಿದೆ) ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ, ಸ್ಕ್ಯಾನ್ ಮಾಡುವ ಅವಶ್ಯಕತೆ ಬಿದ್ದರೆ ಆತನನ್ನು ವಿಮ್ಸ್‌ಗೆ ದಾಖಲಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios