ಕರ್ನಾಟಕ ಲಾಕ್‌ಡೌನ್‌ಗೆ ವ್ಯಕ್ತವಾಯ್ತು ವಿರೋಧ
ಕೊರೋನಾ ಎರಡನೇ ಅಲೆ ಹೆಚ್ಚಾಗುತ್ತಿರುವುದರಿಂದ ರಾಜ್ಯ ಸರ್ಕಾರ 14 ದಿನ ಕಾಲ ಕರ್ನಾಟಕವನ್ನು ಲಾಕ್‌ಡೌನ್ ಮಾಡಿದೆ. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ಬೆಂಗಳೂರು, (ಏ.27): ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನ್ಕಕೆ ಹೆಚ್ಚಾದ ಹಿನ್ನೆಲೆ ರಾಜ್ಯ ಸರ್ಕಾರ ನಾಳೆಯಿಂದ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ.
ಸುಮಾರು 14 ದಿನಗಳ ಕಾಲ ಈ ಬಿಗಿ ಕ್ರಮ ಜಾರಿಯಲಿದ್ದು, ನಾಳೆ (ಏ.27) ರಾತ್ರಿ 9 ಗಂಟೆಯಿಂದ ಆರಂಭವಾಗಲಿದೆ. ಕೊವಿಡ್ ಕರ್ಫ್ಯೂ ಘೋಷಣೆಯಾದ ಬೆನ್ನಲ್ಲೆ ಜನಸಾಮನ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.
14 ದಿನ ಕರ್ನಾಟಕ ಲಾಕ್‌ಡೌನ್: ಸಿಎಂ ಘೋಷಣೆ, ಎಂದಿನಿಂದ?
ರಾಜ್ಯ ಸರ್ಕಾರ ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದೆ. ದಿನಸಿ ವಸ್ತುಗಳ ಬೆಲೆಗಳು ದಿನೇದಿನೆ ಗಗನಕ್ಕೆೇರುತ್ತಿವೆ. ಇದರ ನಡುವೆ ಬಿಗಿ ನಿಯಮಗಳು ಜಾರಿಯಾದರೆ ಕಷ್ಟ. ಬೆಲೆ ಏರಿಕೆ ನಡುವೆ ಜೀವನ ಸಾಗಿಸುವುದು ಹೇಗೆ ಎಂದು 14 ದಿನಗಳ ಬಿಗಿಕ್ರಮಕ್ಕೆ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಬೀದಿಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ರಂಗಸ್ವಾಮಿ ಪ್ರತಿಕ್ರಿಯಿಸಿದ್ದು, ರಾಜ್ಯಾದ್ಯಂತ ಬೀದಿಬದಿ ವ್ಯಾಪಾರಿಗಳು ಈಗಾಗಲೇ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕರ್ನಾಟಕ ಸರ್ಕಾರದಿಂದ ಸವಲತ್ತು ಒದಗಿಸಬೇಕಾಗಿತ್ತು. ಆದರೆ ಯಾವುದೇ ಸೌಲಭ್ಯ ಕೊಟ್ಟಿಲ್ಲ. ಬೀದಿಬದಿ ವ್ಯಾಪಾರಿಗಳು ಬೀದಿಪಾಲಾಗಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ
ಓಲಾ-ಊಬರ್ ಸಂಘಟನೆಗಳಿಂದ ವಿರೋಧ
ಕರ್ನಾಟಕದಲ್ಲಿ ಕೊರೊನಾ ಸೋಂಕಿನ 2ನೇ ಅಲೆ ನಿಯಂತ್ರಿಸಲು ರಾಜ್ಯ ಸರ್ಕಾರ ಘೋಷಿಸಿರುವ ಲಾಕ್‌ಡೌನ್ ಮಾದರಿಯ ನಿರ್ಬಂಧಗಳಿಗೆ ಓಲಾ-ಊಬರ್ ಅಸೋಸಿಯೇಷನ್ನಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಹೋಟೆಲ್ ಮಾಲೀಕರ ಸಂಘ ವಿರೋಧ
ರಾಜ್ಯ ಸರ್ಕಾರ ಘೋಷಿಸಿರುವ 14 ದಿನಗಳ ಲಾಕ್ಡೌನ್ನಿಂದ ಹೋಟೆಲ್ ಉದ್ಯಮಗಳಿಗೆ ನಷ್ಟಭೀತಿ ಎದುರಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿ ಮಧುಕರ್ ಶೆಟ್ಟಿ, ಸರ್ಕಾರದ ನಿರ್ಧಾರದಿಂದಾಗಿ ಹೋಟೆಲ್ ಉದ್ಯಮದ ಕಾರ್ಮಿಕರು ಅತಂತ್ರರಾಗುತ್ತಾರೆ. ಕಾರ್ಮಿಕರನ್ನು ಉಳಿಸಿಕೊಳ್ಳಲು ನಮಗೆ ಸಾಧ್ಯ ಆಗುತ್ತಿಲ್ಲ. ಸಾಲ ಪಡೆದು ಹೋಟೆಲ್ಗಳನ್ನು ನಡೆಸುತ್ತಿದ್ದ ಉದ್ಯಮಿಗಳಿಗೆ ಭಾರಿ ಸಂಕಷ್ಟ ಎದುರಾಗಲಿದೆ. ಹೋಟೆಲ್ ಉದ್ಯಮದ ನೆರವಿಗೆ ಸರ್ಕಾರ ಬಂದಿಲ್ಲ. ಸರ್ಕಾರದ ನಿರ್ಧಾರ ಪಾಲಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ನೆರವಿಗೆ ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ.