ಇಂಧ್ರಧನುಶ್‌ ಲಸಿಕೆ ಹಾಕಿ ಮಗುವಿಗೆ 'ತೇಜಸ್ವಿ ಸೂರ್ಯ' ಎಂದು ನಾಮಕರಣ ಮಾಡಿದ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ!

ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಮಲ್ಲಿಕಾರ್ಜುನ ಸೋಮವಾರ ದಾವಣಗೆರೆಯಲ್ಲಿ ಇಂದ್ರಧನುಶ್‌ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಮಗುವಿಗೆ ತೇಜಸ್ವಿ ಸೂರ್ಯ ಎಂದು ನಾಮಕರಣ ಮಾಡಿದ್ದಾರೆ.

Horticulture Minister S S Mallikarjun indradhanush dose to Child and names Tejasvi surya san

ಬೆಂಗಳೂರು (ಆ.7): ಶಾಮನೂರು ಶಿವಶಂಕರಪ್ಪ ಅವರ ಪುತ್ರ ಹಾಗೂ ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಮಲ್ಲಿಕಾರ್ಜುನ ಸೋಮವಾರ ದಾವಣಗೆರೆಯಲ್ಲಿ ಇಂದ್ರಧನುಶ್‌ ಲಸಿಕಾ ಅಭಿಯಾನ 5.0ಗೆ ಚಾಲನೆ ನೀಡಿದರು. ಈ ವೇಳೆ ವಿಶೇಷವಾದ ಪ್ರಸಂಗ ನಡೆಯಿತು. ದಾವಣಗೆರೆಯಲ್ಲಿ ಇಂದ್ರಧನುಷ್ ಲಸಿಕೆ ಹಾಕಿದ ನಂತರ ಮಗುವಿಗೆ ಕೆನ್ನೆಗೆ ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ ಮುತ್ತಿಕ್ಕಿದರು. ಈ ವೇಳೆ ಮಗುವಿನ ಪೋಷಕರು, ತಮ್ಮ ಮಗುವಿಗೆ ಹೆಸರಿಡುವಂತೆ ಸಚಿವರನ್ನು ಕೇಳಿಕೊಂಡಿದ್ದಾರೆ. ಈ ವೇಳೆ ಎಸ್‌ಎಸ್‌ ಮಲ್ಲಿಕಾರ್ಜುನ 'ತೇಜಸ್ವಿ ಸೂರ್ಯ' ಎಂದು ನಾಮಕರಣ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷ, ಪ್ರಿಯಾಂಕ್‌ ಖರ್ಗೆ ಸೇರಿದಂತೆ ಇನ್ನಿತರ ನಾಯಕರು ಯಾವುದಾದರೂ ಹೆಸರನ್ನು ಟೀಕಿಸಿದ್ದರೆ ಅದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ. ಈಗ ಪಕ್ಷದ ಸಚಿವರೊಬ್ಬರು ಅದೇ ಹೆಸರನ್ನು ಮಗುವಿಗೆ ಇಟ್ಟಿದ್ದಾರೆ. ಹಾಗಂತ ಮಗುವಿಗೆ ಹೆಸರಿಡುವ ವೇಳೆ ಸಚಿವರಿಗೆ ತೇಜಸ್ವಿ ಸೂರ್ಯ ನೆನಪಾದ್ರಾ? ಅಥವಾ ಮಗುವಿನ ಮುಖ ಸೂರ್ಯನಂತೆ ತೇಜಸ್ವಿಯಾಗಿ ಕಂಡಿತಾ ಅನ್ನೋದು ಗೊತ್ತಿಲ್ಲ. ಮಗುವಿನ ತಂದೆ ತಾಯಿ, ತಮ್ಮ ಮಗುವಿಗೆ ನೀವೇ ಒಂದು ಚಂದದ ಹೆಸರಿಡಿ ಎಂದಾಗ, ಎಸ್‌ಎಸ್‌ ಮಲ್ಲಿಕಾರ್ಜುನ ತೇಜಸ್ವಿ ಸೂರ್ಯ ಎಂದು ಮಗುವಿನ ಕಿವಿಯಲ್ಲಿ ಉಸುರಿಸಿದ್ದಾರೆ.

ನವಜಾತ ಮಗುವಿನ ನಿಂದ 23ತಿಂಗಳ ಮಕ್ಕಳಿಗೆ ಒಟ್ಟು5103 ಮಕ್ಕಳಿಗೆ , ನಿಯಮಿತ ಅವಧಿಯಲ್ಲಿ ನೀಡಬೇಕಾದ ರೋಗನಿರೋಧಕ ಲಸಿಕೆಗಳು, 2-5 ವರ್ಷದೊಳಗಿನ ಮಕ್ಕಳಿಗೆ ಎಂಆರ್-1, ಎಂಆರ್-2, ಫೆಂಟಾ ಮತ್ತು ಓಪಿವಿ ಲಸಿಕಾ ಡೋಸ್‍ಗಳು ಹಾಗೂ ರೋಗ ನಿರೋಧಕ ಹಾಗೂ ಸುರಕ್ಷಿತ ಲಸಿಕೆ ಪಡೆಯದ ಅಥವಾ ಭಾಗಶಃ ಪಡೆದಿರುವ ಗರ್ಭಿಣಿಯರಿಗೆ ಲಸಿಕೆ ನೀಡುವ ತೀವ್ರತರವಾದ ಮಿಷನ್‌ ಇಂದ್ರಧನುಶ್‌ ಲಸಿಕಾ ಯೋಜನೆ. ಇಂದ್ರಧನುಶ್‌ ಯೋಜನೆಯ 5.0 ಕಾರ್ಯಕ್ರಮದ ಮೊದಲ ಸುತ್ತು ಆಗಸ್ಟ್‌ 7 ರಿಂದ 12ರವರೆಗೆ ನಡೆಯಲಿದ್ದು, 2ನೇ ಹಂತ ಸೆಪ್ಟೆಂಬರ್‌ 11 ರಿಂದ 16 ಮತ್ತು ಮೂರನೇ ಹಂತ ಅಕ್ಟೋಬರ್‌ 9 ರಿಂದ 14ರವರೆಗೆ ನಡೆಯಲಿದೆ.

ಸ್ಪಂದನಾ ಪೋಸ್ಟ್‌ ಮಾರ್ಟಂ ಮುಕ್ತಾಯ, ನಾಳೆ ಬೆಂಗಳೂರಿಗೆ ಮೃತದೇಹ-ಬುಧವಾರ ಅಂತ್ಯಕ್ರಿಯೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಭಾಗಿತ್ವದೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರ ಸ್ಥಳೀಯ ಸಂಸ್ಥೆಗಳು, ಕಾರ್ಮಿಕ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ನೆಹರು ಯುವ ಕೇಂದ್ರ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಇತರ ಸಂಘ-ಸಂಸ್ಥೆಗಳು ಸಹಯೋಗದೊಂದಿಗೆ ಈ ಕಾರ್ಯಕ್ರ ಮವನ್ನು ಹಮ್ಮಿಕೊಳ್ಳಲಾಗಿದೆ.

ಅತಿಯಾದ ಒತ್ತಡ, ವ್ಯಾಯಾಮ ನವಯುಗದ ತಂಬಾಕು: ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಮಂಜುನಾಥ್‌

Latest Videos
Follow Us:
Download App:
  • android
  • ios