Asianet Suvarna News Asianet Suvarna News

Bengaluru: ಹೊಂಡಾ ಕಂಪನಿ ನಕಲಿ ಬಿಡಿಭಾಗಗಳ ಮಾರಾಟ: ನಿಮ್ಮ ಗಾಡಿಗೂ ಈ ಪಾರ್ಟ್ಸ್‌ ಇದೆನಾ ನೋಡಿ..

ಹೊಂಡಾ ಕಂಪನಿಗೆ ಸೇರಿದ ಬೈಕ್‌ ಹಾಗೂ ಸ್ಕೂಟರ್‌ಗಳ ನಕಲಿ ಬಿಡಿ ಭಾಗಗಳನ್ನು ತಯಾರಿಸಿ ಎಂಆರ್‌ಪಿ ದರಕ್ಕೆ ಮಾರಾಟ ಮಾಡುತ್ತಿದ್ದ ಬೆಂಗಳೂರಿನ ತಿಗಳರಪಾಳ್ಯದ ಕಾರ್ಖಾನೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. 

Honda Company Bikes Forged Parts Manufacturing in Bengaluru sat
Author
First Published Jul 5, 2023, 8:10 PM IST

ಬೆಂಗಳೂರು (ಜು.05): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೈಕ್‌ ಹಾಗೂ ಸ್ಕೂಟರ್‌ಗಳ ಬಿಡಿ ಭಾಗಗಳನ್ನು ತಯಾರಿಸಿ ಅದಕ್ಕೆ ಹೊಂಡಾ ಕಂಪನಿಯ ಲೇಬಲ್‌ಗಳನ್ನು ಅಂಟಿಸಿ ಗ್ರಾಹಕರಿಗೆ ಮಕ್ಮಲ್‌ ಟೋಪಿ ಹಾಕುತ್ತಿರುವ ಕಾರ್ಖಾನೆ ಮೇಲೆ ಪೊಲೀಸರು ದಾಳಿ ಮಾಡಿ ಲಕ್ಷಾಂತರ ರೂ. ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಗಲ್ಲಿ ಕಾರ್ಖಾನೆಯೊಂದರಲ್ಲಿ ಹೊಂಡಾ ಕಂಪನಿಯ ಆಕ್ಟಿವಾ ಸ್ಕೂಟರ್‌ ಮತ್ತು ಹೊಂಡಾ ಕಂಪನಿಯ ಉಳಿದ ಬೈಕ್‌ಗಳ ಬಿಡಿ ಭಾಗಗಳನ್ನು ತಯಾರಿಸಿ ಗ್ರಾಹಕರಿಗೆ ವಂಚನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಬೈಕ್‌ಗಳ ಬಿಡಿ ಭಾಗಗಳನ್ನ ನಕಲು ಮಾಡುತ್ತಿದ್ದ ಫ್ಯಾಕ್ಟರಿ ಮೇಲೆ ದಾಳಿ ಮಾಡಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 1.5 ಲಕ್ಷ ಮೌಲ್ಯದ ಹೊಂಡಾ ಕಂಪನಿಯ ದ್ವಿಚಕ್ರ ವಾಹನಗಳ ನಕಲಿ ಬಿಡಿ ಭಾಗಗಳು ಸೀಜ್‌ ಮಾಡಿದ್ದಾರೆ.

ನಾನು ಟೆಂಟ್‌ನಲ್ಲಿ ಬ್ಲೂಫಿಲ್ಮ್‌ ತೋರಿಸಿ ಬಂದವನಲ್ಲ: ಡಿಕೆಶಿಗೆ ಟಾಂಗ್‌ ಕೊಟ್ಟ ಹೆಚ್‌ಡಿಕೆ

ನಕಲಿ ವಸ್ತುಗಳಿಗೆ ಹೊಂಡಾ ಕಂಪನಿ ಎಂಆರ್‌ಪಿ ದರ: ಬೆಂಗಳೂರಿನ ತಿಗಳರಪಾಳ್ಯದ ಡಾಲ್ ಫಿನ್ ಟ್ರೇಡರ್ ಕಂಪನಿಯಲ್ಲಿ ಹೊಂಡಾ ಕಂಪನಿಯ ಬಿಡಿ ಭಾಗಗಳನ್ನು ಹೋಲುವ ನಕಲಿ ಬಿಡಿ ಭಾಗಗಳನ್ನು ತಯಾರು ಮಾಡಲಾಗುತ್ತಿತ್ತು. ನಕಲು ಮಾಡುವುದಕ್ಕಾಗಿಯೇ ಹೋಂಡಾ ಕಂಪನಿ ಹೆಸ್ರಲ್ಲಿದ್ದ ಹಲವು ಬಿಡಿ ಭಾಗಗಳನ್ನು ಕಾರ್ಖಾನೆಯಲ್ಲಿ ಪತ್ತೆ ಮಾಡಲಾಗಿದೆ. ಸಣ್ಣ ಕಾರ್ಖಾನೆಯಲ್ಲಿ ತಯಾರಿಸಿದ ದ್ವಿಚಕ್ರ ವಾಹನಗಳ ಬಿಡಿ ಭಾಗಗಳನ್ನು ಹೊಂಡಾ ಕಂಪನಿಯ ಎಂಆರ್ ಪಿ ದರದಲ್ಲೇ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದುದು ಕಂಡುಬಂದಿದೆ. ಹೀಗೆ, ಗ್ರಾಹಕರಿಂದ ಲಕ್ಷಾಂತರ ರೂ. ಹಣವನ್ನು ವಂಚನೆ ಮಾಡಲಾಗಿದೆ. ಮತ್ತೊಂದೆಡೆ ಹೋಂಡಾ ಕಂಪನಿಗೂ ವಂಚಿಸಿರೋದು ಬೆಳಕಿಗೆ ಬಂದಿದೆ.

ಹೊಂಡಾ ಕಂಪನಿ ಅಧಿಕಾರಿಗಳಿಂದಲೇ ಪೊಲೀಸರಿಗೆ ದೂರು: ಇನ್ನು ಹೊಂಡಾ ಕಂಪನಿಯ ಶೋರೂಮ್‌ನಲ್ಲಿ ಬೈಕ್‌ ಸರ್ವಿಸ್‌ ಕೊಟ್ಟಾಗ ಕಂಪನಿಯ ವಸ್ತುಗಳನ್ನು ಹೋಲಿಕೆ ಮಾಡಿದ್ದರೂ, ನಕಲು ಎನ್ನುವುದನ್ನು ಪತ್ತೆಮಾಡಿ ಹೊಂಡಾ ಕಂಪನಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ನಂತರ, ಹೊಂಡಾ ಕಂಪನಿಯ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ ಪೊಲೀಸರು ತಿಗಳರಪಾಳ್ಯದಲ್ಲಿದ್ದ ಡಾಲ್ ಫಿಮ್ ಟ್ರೇಡರ್ಸ್ ಮೇಲೆ ನಡೆಸಿದ್ದಾರೆ. ಈ ವೇಳೆ ಸುಮಾರು 1.5 ಲಕ್ಷದ ಬಿಡಿ ಭಾಗಗಳು ಪತ್ತೆಯಾಗಿದ್ದು, ಈಗಾಗಲೇ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ ಗ್ರಾಹಕರು ಮತ್ತು ಕಂಪನಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

'ಇಸ್ಲಾಂನಲ್ಲಿ ಜನ್ಮ ಜನ್ಮದ ಅನುಬಂಧವಿಲ್ಲ, ದಾಂಪತ್ಯದಲ್ಲಿ ವಿರಸ ಬಂದ್ರೆ ತಲಾಕ್‌ ಅಷ್ಟೇ'..

ಬೆಂಗಳೂರು ಟ್ರಾಫಿಕ್ ಸಮಸ್ಯೆ ಮುಕ್ತಿಗೆ ಸುರಂಗ‌ ನಿರ್ಮಾಣ: ಬೆಂಗಳೂರು (ಜು.5): ‘ಬ್ರ್ಯಾಂಡ್‌ ಬೆಂಗಳೂರು’ ಹೆಸರಿಗೆ ಅರ್ಥ ಬರುವ ನಿಟ್ಟಿನಲ್ಲಿ ಬೆಂಗಳೂರು ಟ್ರಾಫಿಕ್ ಸಮಸ್ಯೆ ಮುಕ್ತಿಗೆ ಸುರಂಗ‌ ರಸ್ತೆ ನಿರ್ಮಿಸಲು ಡಿಸಿಎಂ ಡಿಕೆ ಶಿವಕುಮಾರ್ ಪ್ಲಾನ್ ಮಾಡಿದ್ದಾರೆ. ಈ ಸಂಬಂಧ ಬೆಂಗಳೂರು ಉಸ್ತುವಾರಿ ಡಿಸಿಎಂ ಡಿಕೆಶಿ ಸುರಂಗ ರಸ್ತೆ ಸಲಹಾ ಸಂಸ್ಥೆ ಜೊತೆಗೆ ಮತ್ತೊಮ್ಮೆ ಸಭೆ ನಡೆಸಿದ್ದಾರೆ. ಬೆಂಗಳೂರು ಕೇಂದ್ರದ ಸುತ್ತಲ ಹೊರವಲಯಗಳಿಗೆ ಸುರಂಗ‌ ಸಂಪರ್ಕ ರಸ್ತೆಗಳು ನಿರ್ಮಿಸಲು ಯೋಜಿಸಲಾಗಿದ್ದು, ಮೊದಲ ಹಂತದಲ್ಲಿ 50 ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗಿದೆ.  ಖಾಸಗಿ ಸಹಭಾಗಿತ್ಬದಲ್ಲಿ 22 ಸಾವಿರ ಕೋಟಿ ವೆಚ್ಚದ ಸುರಂಗ ರಸ್ತೆ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗಿದೆ. ಈ ಮೂಲಕ ಎಲಿವೇಟೆಡ್ ಕಾರಿಡಾರ್ ಬದಲು ಸುರಂಗ ಕಾರಿಡಾರ್ ಮಾಡಲು ಡಿಕೆಶಿ ಯೋಜನೆ ಹಾಕಿದ್ದಾರೆ.

Follow Us:
Download App:
  • android
  • ios