ಸಲಿಂಗ ಕಾಮ ಆರೋಪ, ಜೆಡಿಎಸ್ ನಾಯಕ , ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಬಂಧನ!
ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಡಿ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ರೇವಣ್ಣ ಅರೆಸ್ಟ್ ಆಗಿದ್ದಾರೆ
ಬೆಂಗಳೂರು(ಜೂ.23) ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಡಿ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ರೇವಣ್ಣ ಅರೆಸ್ಟ್ ಮಾಡಲಾಗಿದೆ. ಕಳೆದ ರಾತ್ರಿ ಸೂರಜ್ ರೇವಣ್ಣ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸೆನ್ ಠಾಣಾ ಪೊಲೀಸರು ಇದೀಗ ಸೂರಜ್ ಬಂಧಿಸಿದ್ದರೆ. ಸಂತ್ರಸ್ತನ ದೂರು ಆಧಾರಿಸಿ ನಿನ್ನೆ ರಾತ್ರಿ ಪೊಲೀಸರು ಸೂರಜ್ ರೇವಣ್ಣ ವಶಕ್ಕೆ ಪಡೆದಿದ್ದರು. ಮುಂಜಾನೆ ನಾಲ್ಕು ಗಂಟೆ ವರೆಗೂ ಸೂರಜ್ ರೇವಣ್ಣ ವಿಚಾರಣೆ ಮಾಡಿದ ಪೊಲೀಸರು ಇಂದು ಬೆಳಗ್ಗೆ ಬಂಧನ ಖಚಿತಪಡಿಸಿದ್ದಾರೆ.
ಸಂತ್ರಸ್ತನ ದೂರಿನ ಆಧಾರದಲ್ಲಿ ಸಕಲೇಶಪುರ ಡಿವೈಎಸ್ಪಿ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ಸೂರಜ್ ರೇವಣ್ಣ ವಿಚಾರಣೆ ನಡೆಸಲಾಗಿತ್ತು. ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಸೂರಜ್ ರೇವಣ್ಣ ವಿರುದ್ದ ಅಸಹಜ ಲೈಂಗಿಕ ಪ್ರಕರಣ ದಾಖಲಾಗಿತ್ತು. ಸಿ.ಆರ್ ನಂ. 92/2024ರಲ್ಲಿ ಸೂರಜ್ ವಿರುದ್ದ ಐಪಿಸಿ ಸೆಕ್ಷನ್ 377,506,342,34 ರ ಅಡಿ ದೂರು ದೂರು ದಾಖಲಾಗಿತ್ತು.
ಸಲಿಂಗ ಕಾಮದ ಆರೋಪ: ಸೂರಜ್ ರೇವಣ್ಣಗೆ ಪೊಲೀಸ್ ಗ್ರಿಲ್..!
ನಿನ್ನೆ ರಾತ್ರಿ ಹೊಳೆನರಸೀಪುರ ನಗರ ಸಿಪಿಐ ಪ್ರದೀಪ್ ಕುಮಾರ್ ವಿಚಾರಣೆ ಅಂತ್ಯಗೊಂಡ ಬಳಿಕ ಸಕಲೇಶಪುರ ಡಿವೈಎಸ್ಪಿ ಪ್ರಮೋದ್ ಕುಮಾರ್ ಸೂರಜ್ ರೇವಣ್ಣ ವಿಚಾರಣೆ ನಡೆಸಿದ್ದರು. ಇತ್ತ ತಡರಾತ್ರಿ ಸಂತ್ರಸ್ತನನ್ನು ಬೆಂಗಳೂರಿಗೆ ಕರೆತಂದ ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಿದ್ದರು. ಹಾಸನದ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪರೀಕ್ಷೆಗೆ ಸಂತ್ರಸ್ತ ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆ ನಡೆಸಿದ್ದರು. ಸಂತ್ರಸ್ತ ಲೈಂಗಿಕ ಕ್ರಿಯೆ ಸಮರ್ಥನಾಗಿದ್ದನೇ ಎಂದೂ ಪರೀಕ್ಷೆ ಮಾಡಲಾಗಿದೆ. ಜೊತೆಗೆ ಬಿಪಿ, ಶುಗರ್ , ಇಸಿಜಿ, ದೇಹದ ಮೇಲೆ ಕಚ್ಚಿರು ಕಲೆಗಳ ಬಗ್ಗೆ ಪರೀಕ್ಷೆ ಪರೀಕ್ಷೆ ನಡೆಸಲಾಗಿದೆ.
ಈಗಾಗಲ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಹೆಚ್‌ಡಿ ರೇವಣ್ಣ ಕುಟುಂಬ ಹೈರಾಣಾಗಿದೆ. ಕಿಡ್ನಾಪ್ ಪ್ರಕರಣದಲ್ಲಿ ರೇವಣ್ಣ ಜಾಮೀನು ಪಡೆದು ಹೊರಬಂದಿದ್ದಾರೆ. ಇತ್ತ ಭವಾನಿ ರೇವಣ್ಣಗೂ ಸಂಕಷ್ಟ ಹೆಚ್ಚಾಗಿದೆ. ಇದರ ನಡುವೆ ಇದೀಗ ಸೂರಜ್ ರೇವಣ್ಣ ಕೂಡ ಅರೆಸ್ಟ್ ಆಗಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣ ಬೆಳಕಿಗೆ ಬಂದ ಬಳಿಕ ರೇವಣ್ಣ ಕುಟುಂಬದಲ್ಲಿ ಮೂವರು ಜೈಲು ಪಾಲಾಗಿದ್ದಾರೆ. ಈ ಪೈಕಿ ರೇವಣ್ಣ ಜಾಮೀನು ಪಡೆದು ಹೊರಬಂದಿದ್ದಾರೆ. ಇದೀಗ ಕುಟುಂಬದ ಸಂಕಷ್ಟ ದುಪ್ಪಟ್ಟಾಗಿದೆ. ಇತ್ತ ಭವಾನಿ ರೇವಣ್ಣ ಕೂಡ ಬಂಧನ ಭೀತಿಯಲ್ಲಿದ್ದಾರೆ
ಸಲಿಂಗ ಕಾಮ ಆರೋಪ: ಸೂರಜ್ ರೇವಣ್ಣ ವಿರುದ್ದ ಎಫ್ಐಆರ್ ದಾಖಲು!