Digital Arrest: ಕರ್ನಾಟಕದಲ್ಲಿ ಹಾಲಿ ವರ್ಷ 109 ಕೋಟಿ ಕಳೆದುಕೊಂಡ ಕನ್ನಡಿಗರು!
ಕರ್ನಾಟಕದಲ್ಲಿ ಡಿಜಿಟಲ್ ವಂಚನೆಯಿಂದಾಗಿ ಈ ವರ್ಷ 109 ಕೋಟಿ ರೂಪಾಯಿ ನಷ್ಟವಾಗಿದ್ದು ಕೇವಲ 9.45 ಕೋಟಿ ರೂ. ರಿಕವರಿಯಾಗಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಇದನ್ನು ತಡೆಯಬಹುದು ಎಂದು ಗೃಹ ಸಚಿವರು ತಿಳಿಸಿದ್ದಾರೆ.
ಬೆಳಗಾವಿ (ಡಿ.13): ಡಿಜಿಟಲ್ ಅರೆಸ್ಟ್ ಕೇಸ್‌ಗಳಲ್ಲಿ ಹಾಲಿ ವರ್ಷ ಸೈಬರ್ ವಂಚಕರಿಗೆ ಕನ್ನಡಿಗೆಉ 109 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ ತಿಳಿಸಿದ್ದಾರೆ. ಇದರಲ್ಲಿ ಕೇವಲ 9.45 ಕೋಟಿ ರೂಪಾಯಿಯನ್ನು ಮಾತ್ರವೇ ರಿಕವರಿ ಮಾಡಲು ಸಾಧ್ಯವಾಗಿದೆ ಎಂದಿದ್ದಾರೆ. ಒಟ್ಟು 641 ‘ಡಿಜಿಟಲ್ ಅರೆಸ್ಟ್’ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ನಗರದಲ್ಲಿ 480 ಪ್ರಕರಣಗಳು ದಾಖಲಾಗಿವೆ. ಇದು ರಾಜ್ಯದಲ್ಲೇ ಇದು ಅತಿ ಹೆಚ್ಚು ಎಂದು ಸಚಿವರು ಮಾಹಿತಿ ನೀಡಿದ್ದಾರೆ. ನಗರದಲ್ಲಿ ಡಿಜಿಟಲ್ ಅರೆಸ್ಟ್‌ಗೆ 42.41 ಕೋಟಿ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಮೈಸೂರಿನಲ್ಲಿ 24 ಪ್ರಕರಣ ದಾಖಲಾಗಿದ್ದರೆ, ಮಂಗಳೂರಿನಲ್ಲಿ 21 ಕೇಸ್‌ಗಳು ನಡೆದಿವೆ ಎಂದು ತಿಳಿಸಿದ್ದಾರೆ. ಪರಮೇಶ್ವರ ಅವರು ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರ ಪ್ರಶ್ನೆಗೆ ವಿಧಾನಸಭೆಯಲ್ಲಿ ಉತ್ತರ ನೀಡಿದ್ದಾರೆ.
‘ಡಿಜಿಟಲ್ ಅರೆಸ್ಟ್’ ಪ್ರಕರಣಗಳಿಗೆ ಸಂಬಂಧಿಸಿದಂತೆ 27 ಜನರನ್ನು ಬಂಧಿಸುವ ಮೂಲಕ ಇದುವರೆಗೆ 9.45 ಕೋಟಿ ರೂಪಾಯಿ ವಸೂಲಿ ಮಾಡಲು ಪೊಲೀಸ್ ಇಲಾಖೆಗೆ ಸಾಧ್ಯವಾಗಿದೆ ಎಂದು ಅವರು ಹೇಳಿದರು. ಸದನದ ಹಿರಿಯ ಸದಸ್ಯರಾಗಿರುವ ಪ್ರತಾಪ್ ಸಿಂಗ ನಾಯಕ್, ತಮ್ಮ ಕಚೇರಿಯ ಸಿಬ್ಬಂದಿಯೊಬ್ಬರು ‘ಡಿಜಿಟಲ್ ಅರೆಸ್ಟ್'ಗೆ ಒಳಗಾದ ಘಟನೆಯನ್ನು ಹಂಚಿಕೊಂಡರು. “ನನ್ನ ಕಚೇರಿಯ ಸಿಬ್ಬಂದಿಯೊಬ್ಬರು ‘ಡಿಜಿಟಲ್ ಅರೆಸ್ಟ್'ಗೆ ಬಲಿಯಾಗಿದ್ದರು. ಅವರು ಪೊಲೀಸ್ ಅಧಿಕಾರಿಗಳಂತೆ ನಟಿಸಿ ಅವರಿಗೆ ಕರೆ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ ಅವರು ಇಂಥ ಪ್ರಕರಣಗಳ ಕಾರ್ಯವೈಖರಿಯನ್ನು ವಿವರಿಸಿದರು.“ಸಾಮಾನ್ಯವಾಗಿ ಅವರು ಸುಳ್ಳು ಮೊಬೈಲ್ ಸಂಖ್ಯೆಗಳಿಂದ ಕರೆ ಮಾಡುತ್ತಾರೆ, ಅದನ್ನು ಪತ್ತೆಹಚ್ಚಲು ಸಾಧ್ಯವಿಲ್ಲ. ಅವರು ಜನರನ್ನು ಬೆದರಿಸುತ್ತಾರೆ ಮತ್ತು ಅವರನ್ನು ಡಿಜಿಟಲ್ ಮೂಲಕ ಬಂಧಿಸುತ್ತಾರೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಮಾತ್ರ ನಾವು ಇದನ್ನು ತಡೆಯಬಹುದು ಎಂದಿದ್ದಾರೆ.
Mangaluru: ಪ್ರೇಮ ಪ್ರಕರಣದಲ್ಲಿ ಜೈಲಲ್ಲಿದ್ದ ಯುವಕನಿಗೆ ಯುವತಿಯ ಪೋಷಕರ ಸುಪಾರಿ, ಜೈಲಿನಲ್ಲೇ ಭಾರೀ ಹಲ್ಲೆ!
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಗೃಹ ಸಚಿವರು ತಿಳಿಸಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಅಭಿಯಾನ ಆರಂಭಿಸಲಾಗಿದೆ ಎಂದರು. ಅಮಾಯಕರನ್ನು ಸೆಳೆಯಲು ಬಳಸುತ್ತಿದ್ದ 700 ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಗುಂಪುಗಳನ್ನು ಗುರುತಿಸಲಾಗಿದೆ ಮತ್ತು ನಿಷ್ಕ್ರಿಯಗೊಳಿಸಲಾಗಿದೆ ಎಂದಿದ್ದಾರೆ. “ಪೊಲೀಸರು ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಟ್ರ್ಯಾಕ್ ಮಾಡಿದ್ದಾರೆ. ಇದರಲ್ಲಿ 268 ಫೇಸ್‌ಬುಕ್ ಗುಂಪುಗಳು, 465 ಟೆಲಿಗ್ರಾಮ್ ಗುಂಪುಗಳು, 15 ಇನ್‌ಸ್ಟಾಗ್ರಾಮ್ ಖಾತೆಗಳು ಮತ್ತು 61 ವಾಟ್ಸಾಪ್ ಗುಂಪುಗಳು ಸೇರಿವೆ ಎಂದು ಸಚಿವರು ಹೇಳಿದರು.
ಗಂಡ ನನಗಿಂತ ಜಾಸ್ತಿ ಬೆಕ್ಕನ್ನೇ ಲವ್ ಮಾಡ್ತಾನೆ, ವರದಕ್ಷಿಣೆ ಕೇಸ್ ದಾಖಲಿಸಿದ ಬೆಂಗಳೂರು ಮಹಿಳೆ!