ಸಿಟಿ ರವಿ ಮೇಲೆ ಹಲ್ಲೆ; ಗೃಹ ಸಚಿವ: 'ನನಗೇನೂ ಗೊತ್ತಿಲ್ಲ, ನಾನ್ ತುಂಬಾ ಒಳ್ಳೆಯವ್ನು.'!
ಬಿಜೆಪಿ ಪರಿಷತ್ ಸದಸ್ಯ ಸಿಟಿ ರವಿ ಅವರ ಮೇಲೆ ಸುವರ್ಣ ಸೌಧದ ಆವರಣದಲ್ಲಿ ಮೂರು ಬಾರಿ ಹಲ್ಲೆ ಪ್ರಯತ್ನಗಳು ನಡೆದಿವೆ ಎಂದು ವರದಿಯಾಗಿದೆ. ಪೊಲೀಸರ ದೌರ್ಜನ್ಯದ ಬಗ್ಗೆಯೂ ಸಿಟಿ ರವಿ ಆರೋಪಿಸಿದ್ದಾರೆ. ಆದರೆ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಬೆಳಗಾವಿ (ಡಿ.20): ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಆರೋಪದಲ್ಲಿ ಬಂಧಿತರಾಗಿರುವ ಬಿಜೆಪಿ ಪರಿಷತ್ ಸದಸ್ಯ ಸಿಟಿ ರವಿ ಅವರ ಮೇಲೆ ಸುವರ್ಣ ಸೌಧದ ಆವರಣದಲ್ಲಿಯೇ ಮೂರು ಬಾರಿ ಹಲ್ಲೆ ಪ್ರಯತ್ನಗಳು ಆಗಿವೆ. ಪೊಲೀಸರೂ ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಸ್ವತಃ ಸಿಟಿ ರವಿ ಹೇಳಿದ್ದಾರೆ. ಆದರೆ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರಿಗೆ ಮಾತ್ರ ಇದ್ಯಾವ ವಿಚಾರವೂ ಗೊತ್ತಿಲ್ಲ. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಬರೋ ಡೈಲಾಗ್‌ನಂತೆ, 'ನನಗೇನೂ ಗೊತ್ತಿಲ್ಲ ಸರ್, ನಾನ್ ತುಂಬಾ ಒಳ್ಳೆಯವನು' ಅನ್ನೋ ರೀತಿ ಗೃಹ ಸಚಿವರ ಸ್ಟೇಟ್‌ಮೆಂಟ್‌ಗಳು ಬಂದಿವೆ. ಮಾಧ್ಯಮಗಳಲ್ಲಿ ಸಾಕಷ್ಟು ಬಾರಿ ಚರ್ಚೆ ಆಗಿರುವ ವಿಚಾರಗಳಲ್ಲೂ ಗೃಹ ಸಚಿವರು ನನಗೇನೂ ಗೊತ್ತಿಲ್ಲ ಅಂತಾ ಹೇಳಿರುವುದು ಇದು ಮೊದಲೇನಲ್ಲ. ಈಗ ರಾಜ್ಯಾದ್ಯಂತ ಸದ್ದು ಮಾಡಿರುವ ಸಿಟಿ ರವಿ ಪ್ರಕರಣದಲ್ಲೂ ನನಗೇನೂ ಗೊತ್ತಿಲ್ಲ ಎಂದೇ ಹೇಳಿದ್ದಾರೆ.
ಕೊಲೆಗೆ ಸಂಚು, ಪ್ರಾಣಕ್ಕೆ ಅಪಾಯ ಎಂದು ಸಿಟಿ ರವಿ ಹೇಳುತ್ತಿದ್ದಾರೆ ಅದರ ಬಗ್ಗೆ ನಿಮ್ಮ ಕಾಮೆಂಟ್ ಏನು ಅನ್ನೋ ಪ್ರಶ್ನೆಗೆ, ' ಇದರ ಬಗ್ಗೆ ನಾನು ಕಾಮೆಂಟ್ ಮಾಡಲ್ಲ, ಅವರ ಹೇಳಿಕೆ ನನಗೆ ಗೊತ್ತಿಲ್ಲ' ಎಂದಿದ್ದಾರೆ.'ಬಂಧನಕ್ಕೆ ಪೊಲೀಸರು ಸಭಾಪತಿಗಳ ಅನುಮತಿ ಪಡೆದೇ ಬಂಧನ ಮಾಡಿರಬಹುದು' ಎಂದು ಊಹಾಪೋಹದ ಮಾತುಗಳನ್ನಾಡಿದ್ದಾರೆ. 'ಆ ಸಂದರ್ಭಕ್ಕೆ ಏನು ಮಾಡಬೇಕೋ ಅದನ್ನು ಪೊಲೀಸರು ಮಾಡ್ತಾರೆ. ಸಿಟಿ ರವಿ ತಲೆಗೆ ಪೆಟ್ಟು ಬಿದ್ದಿರೋದು ಗೊತ್ತಿಲ್ಲ. ಪೊಲೀಸ್ ಮಾಹಿತಿಗಳು ರಹಸ್ಯ, ಬಯಲು ಮಾಡಲು ಆಗಲ್ಲ. ಕೆಲವು ವಿಚಾರ ನಿಮಗೆ ಹೇಳಲು ಆಗಲ್ಲ..' ಎಂದು ಹೇಳಿದ್ದಾರೆ.
ಸಿಟಿ ರವಿಯ್ನ ಅರೆಸ್ಟ್ ಮಾಡಿದ್ದಾರೆ. ಹಿರೇಬಾಗೇವಾಡಿ ಸ್ಟೇಷನ್ ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಅವರಿಗೆ ಸಪೋರ್ಟ್ ಮಾಡೋ ರೀತಿ ಬಿಜೆಪಿ ನಾಯಕರು ಹೋಗಿದ್ದಾರೆ. ಆದರೆ, ಪೊಲೀಸರು ಎಲ್ಲವನ್ನ ನಮಗೆ ಕೇಳಿ ಮಾಡಲ್ಲ. ಪ್ರೊಸಿಜರ್ ಪ್ರಕಾರ ಮಾಡಿದ್ದಾರೆ. ಇವತ್ತು ಕೋರ್ಟ್ ಗೆ ಹಾಜರು ಪಡಿಸುತ್ತಾರೆ. ಗೊತ್ತಿಲ್ಲ, ನಾನು ಮಾಹಿತಿ ಪಡೆದುಕೊಳ್ಳುತ್ತೇನೆ. ಯಾವ ಸೆಕ್ಷನ್ ಅಡಿ ಮಾಡಬೇಕು, ಅಥವಾ ಕ್ರಿಮಿನಲ್ ಆ್ಯಕ್ಟಿವಿಟಿ ಅಂತ ನೋಡ್ತಾರೆ. ನಾವು ಸೈಲೆಂಟ್ ಆಗಿಲ್ಲ. ಕೆಲವು ಅಂಶಗಳನ್ನ ತಿಳಿಸೋದಿಲ್ಲ. ಇದು ಯಾವ ರೀತಿ ಮಾತಾಡಿದ್ದಾರೆ ಅಂತ ಚರ್ಚೆ ಮಾಡಿದ್ದೀವಿ. ನಾವು ಮತ್ತು ಸಿಎಂ ಚರ್ಚೆ ಮಾಡಿದ್ದೀವಿ. ಕ್ರಿಮಿನಲ್ ನಡಿ ಕಂಪ್ಲೆಂಟ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಹೆಬ್ಬಾಳ್ಕರ್ ಸುದ್ದಿಗೋಷ್ಠಿ: ಸಿಟಿ ರವಿ ಆ ಪದ ಬಳಕೆಯಿಂದ ನನಗೆ ನೋವಾಗಿದೆ, ಮಾಧ್ಯಮಗಳ ಮುಂದೆ ಸಚಿವೆ ಕಣ್ಣೀರು!
ರವಿ ಅವರ ಬಳಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಗಲಾಟೆ ಮಾಡಿದ್ದಾರೆ. ರವಿ ಮೇಲೆ ಅಟ್ಯಾಕ್ ಮಾಡೋಕೆ ಹೋಗಿದ್ದಾರೆ. ನಂತರ ಅವರನ್ನ ಹಿರೇ ಬಾಗೇವಾಡಿ ಠಾಣೆಗೆ ಕರೆದೊಯ್ದಿದ್ದಾರೆ. ಪಂಚಮಸಾಲಿ ಹೋರಾಟವಾದಾಗಲೂ ಕರೆದೊಯ್ದಿದ್ದಾರೆ ಎಂದಿದ್ದಾರೆ. ಮೂಲತಃ ಇದು ಪ್ರಾರಂಭ ಆಗಿದ್ದು ಎಲ್ಲಿ? ಹಿರಿಯ ಪ್ರತಿನಿಧಿಯಾಗಿ ಅವರು ಮಾತಾಡಿದ್ದು ಸರಿನಾ? ಡ್ರಗ್ಸ್ ಅಡಿಕ್ಟ್ ಅಂತ ರಾಹುಲ್ ಗಾಂಧಿಯನ್ನ ಹೇಳಿದ್ದಾರೆ, ಇದನ್ನ ಪರಿಶೀಲನೆ ಮಾಡುತ್ತೇವೆ. ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಅನ್ನೋದರ ಮೂಲಕ ಎಲ್ಲಾ ಪ್ರಾರಂಭ ಆಗಿದೆ ಅಂತಿದ್ದಾರೆ. ಅವರು ಶಬ್ದ ಬಳಕೆ ಮಾಡಿದ್ದು ತಪ್ಪು. ಸದನದಲ್ಲಿ ಆ ರೀತಿ ಶಬ್ದ ಬಳಕೆ ಮಾಡಬಾರದು ಎಂದಿದ್ದಾರೆ. ಹಿರೇಬಾಗೆವಾಡಿ ಇನ್ಸ್‌ಪೆಕ್ಟರ್ ಬಿಪಿ ಇಂದ ತಲೆಸುತ್ತಿ ಬಿದ್ದಿರೋ ವಿಚಾರದಲ್ಲಿ ಆ ವಿಚಾರ ಗೊತ್ತಿಲ್ಲ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಸಿಟಿ ರವಿ ಮೇಲೆ ಬೇಲ್ ಸಿಗದಂಥ ಕೇಸ್, ರಾತ್ರಿಯಿಡೀ ಸುತ್ತಾಡಿಸಿ ಅಂಕಲಗಿ ಠಾಣೆಗೆ ಕರೆತಂದ ಪೊಲೀಸರು!