* ಧಾರ್ಮಿಕ ದತ್ತಿ ಇಲಾಖೆಯ ಸುತ್ತೋಲೆ ವಾಪಸ್* ಈ ಬಗ್ಗೆ ಯಾರಿಗೂ ಗೊಂದಲ ಬೇಡ * ಗೊಂದಲ ಉಂಟಾಗಿದ್ದರಿಂದ ಈಗ ಆದೇಶ ಹಿಂಪಡೆಯಲಾಗಿದೆ
ಬೆಂಗಳೂರು(ಫೆ.17): ದೇವಾಲಯಗಳಲ್ಲಿ(Temples) ಪೂಜಾ ವಿಧಿಗಳಲ್ಲಿ ಒಂದಾದ ಜಾಗಟೆ, ಗಂಟೆ, ಶಂಖ ಊದುವುದರಿಂದ ಶಬ್ದ ಮಾಲಿನ್ಯ(Noise Pollution) ಉಂಟಾಗುತ್ತದೆ ಎಂಬ ಸುತ್ತೋಲೆಯನ್ನು ಧಾರ್ಮಿಕ ದತ್ತಿ ಇಲಾಖೆಯು ಹಿಂಪಡೆದಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಈ ವಿಷಯ ತಿಳಿಸಿದ್ದಾರೆ.
ಬುಧವಾರ ಶೂನ್ಯವೇಳೆಯಲ್ಲಿ ಬಿಜೆಪಿ(BJP) ಸದಸ್ಯರಾದ ಸಿ.ಟಿ.ರವಿ ಮತ್ತು ರವಿಸುಬ್ರಹ್ಮಣ್ಯ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಈಗಾಗಲೇ ಧಾರ್ಮಿಕ ದತ್ತಿ ಇಲಾಖೆ(Department of Religious Endowment) ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಈ ಬಗ್ಗೆ ಯಾರಿಗೂ ಗೊಂದಲ ಬೇಡ ಎಂದು ತಿಳಿಸಿದರು.
Hijab Row: ಕೋರ್ಟ್ ಆದೇಶ ಪಾಲಿಸದಿದ್ರೆ ತರಗತಿಗೆ ನೋ ಎಂಟ್ರಿ: ಗೃಹ ಸಚಿವ
ದೇವಾಲಯ ಮಾತ್ರವಲ್ಲ, ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ(Religious Center) ನೊಟೀಸ್ ನೀಡಲಾಗಿತ್ತು. ಯಾವುದೇ ಒಂದು ಧರ್ಮ(Religion) ಅಥವಾ ಸಮುದಾಯವನ್ನು(Community) ಗುರಿಯಾಗಿಟ್ಟುಕೊಂಡು ನೊಟೀಸ್ ನೀಡಿರಲಿಲ್ಲ. ಗೊಂದಲ ಉಂಟಾಗಿದ್ದರಿಂದ ಈಗ ಆದೇಶವನ್ನು ಹಿಂಪಡೆಯಲಾಗಿದೆ ಎಂದರು.
ಇದಕ್ಕೂ ಮುನ್ನ ಸಿ.ಟಿ.ರವಿ(CT Ravi) ಮಾತನಾಡಿ, ಸಾವಿರಾರು ವರ್ಷಗಳಿಂದ ದೇವಾಲಯ ಮತ್ತು ಮನೆಯಲ್ಲಿ ಪೂಜೆ, ಪುನಸ್ಕಾರ ಮಾಡುವಾಗ ಶಂಖ ಊದುವುದು, ಗಂಟೆ ಬಾರಿಸುವುದು, ಜಾಗಟೆ ಬಾರಿಸುವುದು ನಡೆದುಕೊಂಡು ಬಂದಿರುವ ಸಂಪ್ರದಾಯ. ಸಾವಿರಾರು ವರ್ಷಗಳಿಂದಲೂ ಈ ಬಗ್ಗೆ ಯಾರೂ ಸಹ ತಕರಾರು ತೆಗೆದಿರಲಿಲ್ಲ. ಈಗ ಏಕಾಏಕಿ ಆಕ್ಷೇಪ ವ್ಯಕ್ತವಾಗಿದೆ. ಇದರ ಹಿಂದೆ ಯಾವುದಾದರೂ ಪಿತೂರಿ ಇದೆಯೇ ಎಂದು ಪ್ರಶ್ನಿಸಿದರು.
ಹೀಗೇ ಮಾಡಿದರೆ ಕಾಂಗ್ರೆಸ್ ಅರಬ್ಬಿ ಸಮುದ್ರಕ್ಕೆ: ಅರಗ
ಬೆಂಗಳೂರು: ಶಾಲಾ ಸಮವಸ್ತ್ರ(School Uniform) ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಸೇರಿದಂತೆ ಕಾಂಗ್ರೆಸ್ ನಾಯಕರು ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದು, ಇದೇ ರೀತಿ ಮುಂದುವರೆದರೆ ಆ ಪಕ್ಷವನ್ನು ಅರಬ್ಬಿ ಸಮುದ್ರಕ್ಕೆ ಜನರು ಎಸೆಯತ್ತಾರೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದರು.
ಫೆ.9 ರಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಶಿವಮೊಗ್ಗದಲ್ಲಿ(Shivamogga) ರಾಷ್ಟ್ರಧ್ವಜ(National Flag) ಇಳಿಸಿ ಕೇಸರಿ ಬಾವುಟ(Saffron Flag) ಹಾರಿಸಿದ್ದಾರೆ ಎಂದು ಶಿವಕುಮಾರ್ ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಎಂದು ದೂರಿದ್ದರು.
ಕಾಲೇಜು ಆವರಣದಲ್ಲಿ ರಾಷ್ಟ್ರ ಧ್ವಜ ಹಾರಾಡುತ್ತಿರಲಿಲ್ಲ. ಶಿವಕುಮಾರ್ ಬೇಜವಾಬ್ದಾರಿಯಾಗಿ ಮಾತನಾಡಿದ್ದಾರೆ. ಇಂತಹ ಹೊಣೆಗೇಡಿತನ ಹಾಗೂ ಹಸಿ ಸುಳ್ಳು ಹೇಳಿಕೆಯನ್ನು ಒಬ್ಬ ಹಿರಿಯ ಕಾಂಗ್ರೆ(Congress) ನಾಯಕನಿಂದ ಬರುತ್ತದೆಂದರೆ ಅವರ ಉದ್ದೇಶ ಏನಿರಬಹುದೆಂದು ಜನರು ಊಹಿಸುತ್ತಾರೆ. ಶಾಲಾ ಸಮವಸ್ತ್ರ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮತೀಯ ಭಾವನೆಗಳನ್ನು ತುಂಬಬಾರದು ಎಂದರು.
Karnataka Politics: ಹಿಜಾಬ್ ವಿವಾದಕ್ಕೆ ನಾಗೇಶ್, ಆರಗ ಕಾರಣ: ಸಿದ್ದು ವಾಗ್ದಾಳಿ
ಈ ಘಟನೆ ಹಿಂದೆ ರಾಜಕೀಯ ಪಕ್ಷಗಳಲ್ಲದೆ ಕೆಲವು ಕೋಮುವಾದಿ ಸಂಘಟನೆಗಳೂ ಇವೆ. ಅವುಗಳ ಮುಖವಾಡ ಕಳಚುವ ಕೆಲಸ ಮಾಡುತ್ತೇವೆ. ದೇಶ ಕಟ್ಟುವ ಕೆಲಸವನ್ನು ಮಾಡಬೇಕೆ ಹೊರತು ಮತ್ತೊಮ್ಮೆ ದೇಶ ಒಡೆಯುವ ಕೆಲಸವನ್ನು ಯಾರೊಬ್ಬರೂ ಮಾಡಬಾರದು ಎಂದು ಸಚಿವರು ಮನವಿ ಮಾಡಿದ್ದರು.
ಹಿಜಾಬ್ ವಿವಾದ ಹಿಂದೆ ಕಾಣದ ಕೈಗಳು: ಆರಗ
ಹಿಜಾಬ್(Hijab) ಮತ್ತು ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು(Students) ತರಗತಿಗೆ ಬರಬಾರದು. ಇನ್ನು ಮುಂದೆ ಇಂತಹದ್ದೆಲ್ಲ ನಡೆಯುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟವಾಗಿ ತಿಳಿಸಿದ್ದರು. ಅಲ್ಲದೆ, ಹಿಜಾಬ್ ಧರಿಸಿಯೇ ಬರುತ್ತೇನೆ ಎಂದು ಹಟ ಹಿಡಿಯವ ವಿದ್ಯಾರ್ಥಿಗಳ ನಡವಳಿಕೆ ಹಿಂದೆ ಕಾಣದ ಶಕ್ತಿಯೊಂದರ ಕೈವಾಡ ಇರುವ ಶಂಕೆಯನ್ನು ಸಚಿವರು ವ್ಯಕ್ತಪಡಿಸಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ(Police Department) ಸೂಚಿಸಿರುವುದಾಗಿಯೂ ತಿಳಿಸಿದ್ದರು.
