ಅತ್ತ ಕುಟುಂಬದ ಜೊತೆ ಹಬ್ಬವೂ ಮಾಡಲಿಲ್ಲ, ಇತ್ತ ಟ್ರೈನ್ ಬರಲಿಲ್ಲ; ಯಾದಗಿರಿ ರೈಲ್ವೆ ನಿಲ್ದಾಣದಲ್ಲೇ ಮಲಗಿದ ಹೋಮ್ ಗಾರ್ಡ್ಸ್!
ಪ್ರದೇಶದ ವಿಧಾನಸಭೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿ ಹೋಂ ಗಾರ್ಡ್ ಗಳು ಟ್ರೈನ್ ಬಾರದ್ದಕ್ಕೆ ರಾತ್ರಿಹೊತ್ತು ಯಾದಗಿರಿ ರೈಲ್ವೆ ನಿಲ್ದಾಣದಲ್ಲೇ ಮಲಗಿದ ಘಟನೆ ನಡೆದಿದೆ.
ಯಾದಗಿರಿ (ನ.13): ಮಧ್ಯ ಪ್ರದೇಶದ ವಿಧಾನಸಭೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿ ಹೋಂ ಗಾರ್ಡ್ ಗಳು ಟ್ರೈನ್ ಬಾರದ್ದಕ್ಕೆ ರಾತ್ರಿಹೊತ್ತು ಯಾದಗಿರಿ ರೈಲ್ವೆ ನಿಲ್ದಾಣದಲ್ಲೇ ಮಲಗಿದ ಘಟನೆ ನಡೆದಿದೆ.
ನವೆಂಬರ್ 17 ರಂದು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿರುವ ಹಿನ್ನೆಲೆ ಯಾದಗಿರಿ ಜಿಲ್ಲೆಯ 200 ಗೃಹ ರಕ್ಷಕರನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಹೀಗಾಗಿ ಮಧ್ಯಪ್ರದೇಶಕ್ಕೆ ತೆರಳಲು ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಹೋಂ ಗಾರ್ಡ್‌ಗಳು. ಬೆಳಗ್ಗೆ 6 ಗಂಟೆಗೆ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಹಾಜರಿರಲು ಸೂಚನೆ ನೀಡಿದ್ದರ ಹಿನ್ನೆಲೆ ಬೆಳಗ್ಗೆ ಟ್ರೈನ್ ಗಾಗಿ ಯಾದಗಿರಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಸಿಬ್ಬಂದಿ. ಅದರಂತೆ ನಿನ್ನೆ ವಿಶೇಷ ಟ್ರೈನ್‌ನಲ್ಲಿ ಗೃಹ ರಕ್ಷಕರನ್ನು ಕರೆದುಕೊಂಡು ಹೋಗಬೇಕಿತ್ತು. ಆದರೆ ರಾತ್ರಿಯಾದರೂ ಟ್ರೈನ್ ಬಾರದ್ದಕ್ಕೆ ಕಾದು ಕಾದು ಸುಸ್ತಾಗಿ ರಾತ್ರಿ ಹೊತ್ತು ರೈಲ್ವೆ ನಿಲ್ದಾಣದಲ್ಲೇ ಮಲಗಿದ ಗೃಹ ರಕ್ಷಕರು.
ಎಫ್‌ಡಿಎಗೆ 22 ಲಕ್ಷ, ಎಸ್‌ಡಿಎಗೆ 8 ಲಕ್ಷ: ಕೆಇಎ ಪರೀಕ್ಷೆ ಅಕ್ರಮ ರೇಟ್‌ಕಾರ್ಡ್, 25 ಕೋಟಿ ಸಂಗ್ರಹ?
ಇಂದು ಬೆಳಗ್ಗೆ ಟ್ರೈನ್ ಬರುವ ನಿರೀಕ್ಷೆಯಲ್ಲಿ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿರುವ ಗೃಹ ರಕ್ಷಕರು. ದೀಪಾವಳಿ ಹಬ್ಬ ಇದ್ರೂ ರೈಲ್ವೆ ನಿಲ್ದಾಣದಲ್ಲೇ ದಿನ ಕಳೆದ ಗೃಹರಕ್ಷಕರು. ಜಿಲ್ಲಾ ಕೇಂದ್ರದಲ್ಲಿದ್ರೂ ದೀಪಾವಳಿ ಹಬ್ಬವನ್ನು ಕುಟುಂಬಸ್ಥರ ಜತೆ ಆಚರಣೆ ಮಾಡಲಾಗದೇ ಹೋಂ ಗಾರ್ಡ್ಸ್ ಪರದಾಟ. ಅತ್ತ ಟ್ರೈನ್ ಬರಲಿಲ್ಲ. ಇತ್ತ ಕುಟುಂಬಸ್ಥರೊಂದಿಗೆ ದೀಪಾವಳಿಯನ್ನು ಆಚರಿಸಲು ಆಗದೇ ರೈಲ್ವೆ ನಿಲ್ದಾಣದಲ್ಲಿ ವ್ಯರ್ಥವಾಗಿ ಕಳೆದಿದ್ದಕ್ಕೆ ಬೇಸರ.
ಬರ ಪರಿಹಾರ ರೈತರ ಶೋಷಣೆ ಮಾಡುವಂತಿದೆ: ಬೆಲ್ಲದ