ಬರ ಪರಿಹಾರ ರೈತರ ಶೋಷಣೆ ಮಾಡುವಂತಿದೆ: ಬೆಲ್ಲದ
ಯಾವಾಗ ಬಿಜೆಪಿ ಮುಖಂಡರು ರಾಜ್ಯದಲ್ಲಿ ಬರ ಅಧ್ಯಯನ ಮಾಡಲು ಹೊರಟರೋ, ಆಗ ರಾಜ್ಯ ಸರ್ಕಾರ ಎಚ್ಚತ್ತುಕೊಂಡು 320 ಕೋಟಿ ರು.ಗಳ ಅನುದಾನ ಬಿಡುಗಡೆ ಮಾಡಿದೆ, ಇದು ಸಾಕಾಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಡುಗಡೆ ಮಾಡಿರುವ ಅನುದಾನ ರೈತರನ್ನು ಶೋಷಣೆ ಮಾಡುವಂತಿದೆ ಎಂದು ಟೀಕಿಸಿದ ಶಾಸಕ ಅರವಿಂದ ಬೆಲ್ಲದ
ಯಾದಗಿರಿ(ನ.11): ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬರ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಶಾಸಕ ಅರವಿಂದ ಬೆಲ್ಲದ ಟೀಕಿಸಿದ್ದಾರೆ. ರಾಜ್ಯ ಬಿಜೆಪಿಯಿಂದ ಹಮ್ಮಿಕೊಂಡಿರುವ ಬರ ಅಧ್ಯಯನ ಪ್ರವಾಸದ ಅಂಗವಾಗಿ ಶುಕ್ರವಾರ ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮಕ್ಕೆ ಆಗಮಿಸಿ, ರೈತರ ಹೊಲಗಳಿಗೆ ಭೇಟಿ ನೀಡಿ ನಂತರ ಮಾತನಾಡಿದ ಅರವಿಂದ ಬೆಲ್ಲದ, ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರ ಅನುದಾನ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಿದೆ.
ಯಾವಾಗ ಬಿಜೆಪಿ ಮುಖಂಡರು ರಾಜ್ಯದಲ್ಲಿ ಬರ ಅಧ್ಯಯನ ಮಾಡಲು ಹೊರಟರೋ, ಆಗ ರಾಜ್ಯ ಸರ್ಕಾರ ಎಚ್ಚತ್ತುಕೊಂಡು 320 ಕೋಟಿ ರು.ಗಳ ಅನುದಾನ ಬಿಡುಗಡೆ ಮಾಡಿದೆ, ಇದು ಸಾಕಾಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಡುಗಡೆ ಮಾಡಿರುವ ಅನುದಾನ ರೈತರನ್ನು ಶೋಷಣೆ ಮಾಡುವಂತಿದೆ ಎಂದು ಟೀಕಿಸಿದರು.
ಬರ ಅಧ್ಯಯನ ನೆಪದಲ್ಲಿ ಬಿಜೆಪಿ, ಜೆಡಿಎಸ್ ಮೊಸಳೆ ಕಣ್ಣೀರು: ಸಚಿವ ದರ್ಶನಾಪೂರ್
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನಗಳಲ್ಲಿ ಬರಗಾಲ ಆವರಿಸಿದೆ. ಇಂತಹ ಬರಗಾಲ ಹಿಂದೆ ಎಂದೂ ಬ೦ದಿರಲಿಲ್ಲ. ಬರಗಾಲದಿಂದಾಗಿ ಸಂಪೂರ್ಣ ಬೆಳೆನಷ್ಟ ಅನುಭವಿಸಿ ತೀವ್ರ ಸಂಕಷ್ಟಕ್ಕೀಡಾಗಿರುವ ರೈತರ ಪ್ರತಿ ಎಕರೆಗೆ 50 ಸಾವಿರ ರು. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮುಂಗಾರು-ಹಿಂಗಾರು ವೈಫಲ್ಯದಿಂದಾಗಿ ರೈತರು, ಜನ-ಜಾನುವಾರುಗಳು ಸಂಕಷ್ಟದಲ್ಲಿದ್ದಾರೆ. ಆದರೆ, ಸರ್ಕಾರ ಎಚ್ಚೆತ್ತುಗೊಳ್ಳದೆ ನಿರ್ಲಕ್ಷ್ಯ ಮಾಡುತ್ತಿದೆ. ಕಾಲುವೆಯಲ್ಲಿ ನೀರು ಇದ್ದಾಗ್ಯೂ ಸರಿಯಾಗಿ ನಿರ್ವಹಣೆ ಇಲ್ಲದೆ ಭತ್ತ, ಜೋಳ, ತೊಗರಿ ಸೇರಿದಂತೆ ಇನ್ನಿತರ ಬೆಳೆಗಳು ಒಣಗಿಹೋಗಿವೆ ಎಂದು ಅವರು ಕಿಡಿ ಕಾರಿದರು.
ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪುರ ಅವರು ಕೂಡಾ ಈ ಭಾಗದ ರೈತರ ಸಂಕಷ್ಟಕ್ಕೆ ಸ್ಪ೦ದಿಸುವಲ್ಲಿ ವಿಫಲರಾಗಿದ್ದಾರೆ. ಬೆಳೆ ನಷ್ಟ ಅನುಭವಿಸಿರುವ ರೈತರ ನೆರವಿಗೆ ಧಾವಿಸುವಲ್ಲಿ ಹಾಗೂ ಬರ ಅಧ್ಯಯನಮಾಡುವಲ್ಲಿ ಎಡವಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎನ್ನುವ ಕಾಂಗ್ರೆಸ ಮುಖಂಡರ ಆರೋಪ ಸಲ್ಲದು ಎಂದ ಬೆಲ್ಲದ್, ಕೇಂದ್ರ ಸರ್ಕಾರತನ್ನ ಅನುದಾನ ಬಿಡುಗಡೆ ಮಾಡುತ್ತದೆ. ಇದರ ಬಗ್ಗೆ ಅನುಮಾನ ಬೇಡ ಎಂದವರು, ಕೇಂದ್ರ ಸರ್ಕಾರಎಸ್ ಟಿಆರ್ ಎಫ್, ಎನ್ಸಿಆರ್ ಎಫ್ ನಡಿ ಪ್ರತಿವರ್ಷ ರಾಜ್ಯಕ್ಕೆ 13800 ಕೋಟಿ ರು.ಗಳ ಅನುದಾನ ನೀಡುತ್ತಿದೆ ಎಂದು ಹೇಳಿದರು.
"ಕನ್ನಡಪ್ರಭ" ಬಯಲಿಗೆಳೆದ ಪಿಎಸ್ಐ ಪರೀಕ್ಷೆ ಅಕ್ರಮ ಹಗರಣ ತಾರ್ಕಿಕ ಅಂತ್ಯ..!
ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಮಾತನಾಡಿ, ಅವರು ರಾಜ್ಯದ ಯಾವ ಸಚಿವರೂ ಬರಗಾಲಪೀಡಿತ ಪ್ರದೇಶಗಳಿಗೆ ಬೇಟಿ ನೀಡದೆ ನಿರ್ಲಕ್ಷ್ಯ ಮಾಡಿದ್ದು ಇಲ್ಲಿತನಕ ಜಿಲ್ಲೆಯ ಯಾವ ತಾಲೂಕಿಗೆ ಹೋಗಿ ಬರಗಾಲ ಅಧ್ಯಯನ ಮಾಡಿಲ್ಲ. ಜಿಲ್ಲೆಗೆ ಕೇವಲ 9 ಕೋಟಿ ಬಿಡುಗಡೆ ಮಾಡಿದೆ ಇದು ಸಾಕಾಗುವುದಿಲ್ಲ ಇನ್ನು ಹೆಚ್ಚು ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಅವರು ಒತ್ತಾಯ ಮಾಡಿದರು.
ಲೋಕಸಭೆ ಸದಸ್ಯ ರಾಜಾ ಅಮರೇಶ್ವರ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ, ಕೆ.ಕರಿಯಪ್ಪ, ಕು.ಲಲಿತಾ ಅನಪೂರ, ಶ್ರೀದೇವಿ ಶೆಟ್ಟಳ್ಳಿ , ಜಿಲ್ಲಾ ವಕ್ತಾರ ಎಚ್.ಸಿ.ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಂದ್ರನಾಥ ನಾದ, ವೆಂಕಟರಡ್ಡಿ ಅಬ್ಬೆತುಮಕೂರು, ಗುರು ಕಾಮಾ, ಸುರೇಶ ಸಜ್ಜನ್, ಉಮಾರಡ್ಡಿಗೌಡ ನಾಯ್ಕಲ್, ದೇವರಾಜ ನಾಯಕ ಉಳ್ಳೆಸೂಗೂರ,ರಾಜಶೇಖರ ಕಾಡನೊರ, ಮಲ್ಲಿಕಾರ್ಜುನ ಹೊನಿಗೇರ, ಮಲ್ಲಿಕಾರ್ಜುನ ಜಲ್ಲಪ್ಪನೊರ, ಶಿವು ಕೊಂಕಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.