Asianet Suvarna News Asianet Suvarna News

ವಕ್ಫ್‌ ಬೋರ್ಡ್‌ ರದ್ದತಿಗೆ ಪತ್ರ: ಕಾನೂನಿನ ಲೋಪದೋಷ ಎತ್ತಿ ತೋರಿಸಿದ ಯತ್ನಾಳ್

ತ್ರಿವಳಿ ತಲಾಖ್‌ ರದ್ದುಗೊಳಿಸಿದ ಪ್ರಧಾನಿ ಮೋದಿ ಅವರು, ಈಗ ಸರ್ಕಾರದ ಭೂಮಿಯನ್ನು ಒಂದು ಧರ್ಮಕ್ಕಾಗಿ ವಶಪಡಿಸಿಕೊಳ್ಳುವ ಅಂಸವಿಧಾನಿಕ ವಕ್ಫ್‌ ಬೋರ್ಡ್‌ ರದ್ದುಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.

Hindu Tiger MLA Basanagouda Patil Yatnal wrote letter to PM Modi for cancel Waqf Board sat
Author
First Published Sep 4, 2023, 6:55 PM IST

ವಿಜಯಪುರ (ಸೆ.04): ದೇಶದಲ್ಲಿ ತ್ರಿವಳಿ ತಲಾಖ್ ರದ್ದತಿ, ಕಾಶ್ಮೀರಕ್ಕಿದ್ದ 370ನೇ ವಿಧಿಯ ರದ್ದತಿ ಮತ್ತು ನೋಟು ಅಮಾನ್ಯೀಕರಣ ಉಪಕ್ರಮಗಳನ್ನು ಕೈಗೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಸರ್ಕಾರದ ಭೂಮಿಯನ್ನು ಬೇಕಾಬಿಟ್ಟಿ ವಶಪಡಿಸಿಕೊಳ್ಳುವ ಅಂಸವಿಧಾನಿಕ ವಕ್ಫ್‌ ಬೋರ್ಡ್‌ ರದ್ದುಗೊಳಿಸಬೇಕು ಎಂದು ಹಿಂದೂ ಹುಲಿ ಖ್ಯಾತಿಯ ಶಾಸಕ ಹಾಗೂ ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ್‌ ಯತ್ನಾಳ್‌ ಪತ್ರವನ್ನು ಬರೆದು ಮನವಿ ಮಾಡಿದ್ದಾರೆ.

ದೇಶದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ತನ್ನ ಸಾಂವಿಧಾನಿಕ ಅಧಿಕಾರವನ್ನು ಬಳಸುತ್ತಿರುವ ವಕ್ಫ್ ಮಂಡಳಿಯಿಂದ ಆಗುವ ಸಮಸ್ಯೆಯನ್ನು ಗಮನಕ್ಕೆ ತರುವುದು ಈ ಪತ್ರದ ಉದ್ದೇಶವಾಗಿದೆ. ವಕ್ಫ್ ಕಾಯಿದೆಯು ಮೂಲತಃ ವಕ್ಫ್ ಆಸ್ತಿಗಳನ್ನು ನಿರ್ವಹಿಸಲು ಜಾರಿಗೆ ತರಲಾಗಿದೆ. ವಕ್ಫ್ ಕಾಯಿದೆ, ಮೊದಲ ಬಾರಿಗೆ 1954 ರಲ್ಲಿ ಸಂಸತ್ತು ಅಂಗೀಕರಿಸಿತು. ನಂತರ 1995 ರಲ್ಲಿ ಪರಿಷ್ಕರಿಸಿ, ವಕ್ಫ್ ಮಂಡಳಿಗಳಿಗೆ ಹೆಚ್ಚುವರಿ ಅಧಿಕಾರಗಳನ್ನು ನೀಡಲಾಯಿತು. 2013 ರಲ್ಲಿ ಈ ಕಾಯಿದೆಯನ್ನು ಮತ್ತಷ್ಟು ತಿದ್ದುಪಡಿ ಮಾಡಲಾಯಿತು. ಕಾನೂನು ಕಟ್ಟಳೆಗಳಿಗೆ ಆಶ್ರಯಿಸದೆ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ವಕ್ಫ್ ಮಂಡಳಿಗಳಿಗೆ ಸಂಪೂರ್ಣ ಅಧಿಕಾರವನ್ನು ನೀಡಲಾಯಿತು.

ಕರ್ನಾಟಕದ 134 ತಾಲೂಕುಗಳ ಬರಪೀಡಿತ, ಜಂಟಿ ಸಮೀಕ್ಷೆ ಬಳಿಕ ಅಧಿಕೃತ ಘೋಷಣೆ

ವಕ್ಫ್‌ ಬೋರ್ಡ್‌ ಬಳಿ 8 ಲಕ್ಷ ಎಕರೆ ಆಸ್ತಿಯಿದೆ: ವಕ್ಫ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಆಫ್ ಇಂಡಿಯಾದ ಮಾಹಿತಿಯ ಪ್ರಕಾರ, ಪ್ರಸ್ತುತ ವಕ್ಫ್ ಬೋರ್ಡ್‌ಗಳ ವ್ಯಾಪ್ತಿಯಲ್ಲಿ ಒಟ್ಟು 8,54,509 ಆಸ್ತಿಗಳಿವೆ. ಎಂಟು ಲಕ್ಷ ಎಕರೆಗೂ ಹೆಚ್ಚು ಭೂಮಿ ಹೊಂದಿದೆ.ಈ ಪರಿಸ್ಥಿತಿಯು ರಾಷ್ಟ್ರದ ಸಂಪನ್ಮೂಲಗಳ ಅಕ್ರಮ ಸ್ವಾಧೀನಕ್ಕೆ ಕಾರಣವಾಗುತ್ತದೆ. ಟರ್ಕಿ, ಲಿಬಿಯಾ, ಈಜಿಪ್ಟ್, ಸುಡಾನ್, ಲೆಬನಾನ್, ಸಿರಿಯಾ, ಜೋರ್ಡಾನ್, ಟುನೀಶಿಯಾ ಮತ್ತು ಇರಾಕ್‌ನಂತಹ ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲಿ ವಕ್ಫ್ ಪರಿಕಲ್ಪನೆಯು ಅಸ್ತಿತ್ವದಲ್ಲಿಲ್ಲ. ಆದರೆ, ನಮ್ಮ ದೇಶದಲ್ಲಿ ವಕ್ಫ್ ಬೋರ್ಡ್‌ ಸ್ಥಾಪಿಸಿ ಅಸಾಧಾರಣ ಅಧಿಕಾರ ಕೊಡಲಾಗಿದೆ. ಬೋರ್ಡ್‌ನ ಸದಸ್ಯರು ದಾನದ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು, ನಂತರ ಕಾನೂನು ಬದ್ಧಗೊಳಿಸುತ್ತಾರೆ.

ಸರ್ಕಾರದ ಸಂಬಳ ಪಡೆದು, ಒಂದು ಧರ್ಮದ ಕೆಲಸ ಮಾಡುವ ಮಂಡಳಿ: ವಕ್ಫ್ ಭೂಮಿಯನ್ನು ವಶಪಡಿಸಿಕೊಳ್ಳುವುದು ಜಾತ್ಯತೀತತೆ, ಏಕತೆ ಮತ್ತು ನಮ್ಮ ರಾಷ್ಟ್ರದ ಸಮಗ್ರತೆಯ ತತ್ವಗಳಿಗೆ ಅಸಮಂಜಸವಾಗಿದೆ ಎಂದು ಸಂಸತ್ತಿನ ಸದಸ್ಯರು, ಅಧಿಕಾರಿಗಳು, ವಕೀಲರು ಮತ್ತು ವಿದ್ವಾಂಸರು ಹೇಳಿದ್ದಾರೆ. ಸರ್ಕಾರದ ಸಂಬಳ ಪಡೆಯುವ ಮೂಲಕ ಒಂದು ಧರ್ಮದ ಕೆಲಸವನ್ನು ಮಾಡಲಾಗುತ್ತಿದೆ. ಮತ್ತೊಂದೆಡೆ ಮಸೀದಿಗಳು ಅಥವಾ ದರ್ಗಾಗಳಿಂದ ಸರ್ಕಾರಕ್ಕೆ ಯಾವುದೇ ಹಣಕಾಸಿನ ಕೊಡುಗೆ ಸಿಗುವುದಿಲ್ಲ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ದೇಶದಲ್ಲಿಉ 4 ಲಕ್ಷಕ್ಕೂ ಅಧಿಕ ದೇವಾಲಯಗಳಿಂದ ಸರ್ಕಾರಕ್ಕೆ ಗಣನೀಯ ಆದಾಯ ಬರುತ್ತಿದೆ. ಆದರೆ ಹಿಂದೂಗಳಿಗೆ ಹೆಚ್ಚಿನ ಪ್ರಯೋಜನ ಸಿಗುತ್ತಿಲ್ಲ. 

ಹುಲಿಗೆ ಆಹಾರವಾದ 7 ವರ್ಷದ ಬಾಲಕ: ಅಪ್ಪ-ಅಮ್ಮನೆದುರೇ ಮಗನನ್ನು ಕೊಂದು ತಿಂದ ವ್ಯಾಘ್ರ

ರಾಷ್ಟ್ರದ ಹಿತಕ್ಕಾಗಿ ವಕ್ಫ್‌ ಬೋರ್ಡ್‌ ರದ್ದುಗೊಳಿಸಿ: ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತವು ಜಾಗತಿಕ ಶಕ್ತಿಯಾಗಲು ವಕ್ಫ್‌ ಬೋರ್ಡ್‌ನಂತಹ ಕಾನೂನುಗಳು, ಮಂಡಳಿಗಳು ದೇಶದ ಸಮಾನತೆ, ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ತತ್ವಗಳಿಗೆ ಅಡ್ಡಿಯಾಗುತ್ತವೆ. ಹಲವಾರು ರಾಜ್ಯ ಸರ್ಕಾರಗಳು ಪ್ರತ್ಯೇಕ ವಕ್ಫ್ ಸಚಿವಾಲಯಗಳನ್ನು ಸ್ಥಾಪಿಸುವಷ್ಟು ಮಟ್ಟಿಗೆ ಈ ಕಾನೂನನ್ನು ದುರುಪಯೋಗ ಮಾಡಿಕೊಂಡಿವೆ. ನಮ್ಮ ರಾಷ್ಟ್ರದ ಸಾಮರಸ್ಯವನ್ನು ಕದಡಲು ಮತ್ತು ಜನರ ನಡುವೆ ವೈಷಮ್ಯವನ್ನು ಬಿತ್ತಲು ಹಿಂದಿನ ಸರ್ಕಾರಗಳು ಇದನ್ನು ಬಳಸಿಕೊಳ್ಳುತ್ತಿವೆ. ಎಲ್ಲವೂ ರಾಜಕೀಯ ಅಧಿಕಾರವನ್ನು ಉಳಿಸಿಕೊಳ್ಳುವ ದುರುದ್ದೇಶದಿಂದ ಆಗಿದೆ.  ನಮ್ಮ ರಾಷ್ಟ್ರದ ಹಿತದೃಷ್ಟಿಯಿಂದ ವಕ್ಫ್ ಕಾಯಿದೆಯನ್ನು ಕೂಡಲೇ ಹಿಂಪಡೆಯಬೇಕೆಂದು ನಾನು ಮನಃಪೂರ್ವಕವಾಗಿ ವಿನಂತಿಸುತ್ತೇನೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

Follow Us:
Download App:
  • android
  • ios