Asianet Suvarna News Asianet Suvarna News

ಮಳಲಿ ಮಸೀದಿಯಲ್ಲಿ ಗೋಚರವಾಗಿರುವುದು ವೀರಶೈವ ಮಠದ ಕುರುಹುವೇ?

ಮಳಲಿ ಶ್ರೀರಾಮಾಂಜನೇಯ ಭಜನಾ ಮಂದಿರದಲ್ಲಿ ನಡೆದ ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಂತೆ ಮಳಲಿ ಮಸೀದಿಯಲ್ಲಿ ದೇವ ಸಾನ್ನಿಧ್ಯ ಇದೆ, ಅದು ಗುರುಮಠ ಎಂಬ ವಿಚಾರಕ್ಕೆ ಸಂಬಂಧಿಸಿ ಗುರುಪುರ ವೀರಶೈವ ಮಠದ ರುದ್ರಮುನಿ ಸ್ವಾಮೀಜಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
 

ಮಂಗಳೂರು ( ಮೇ. 26): ಮಳಲಿ ಶ್ರೀರಾಮಾಂಜನೇಯ ಭಜನಾ ಮಂದಿರದಲ್ಲಿ ನಡೆದ ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಂತೆ ಮಳಲಿ ಮಸೀದಿಯಲ್ಲಿ ದೇವ ಸಾನ್ನಿಧ್ಯ ಇದೆ, ಅದು ಗುರುಮಠ ಎಂಬ ವಿಚಾರಕ್ಕೆ ಸಂಬಂಧಿಸಿ ಗುರುಪುರ ವೀರಶೈವ ಮಠದ ರುದ್ರಮುನಿ ಸ್ವಾಮೀಜಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಆಂಜನೇಯ ದೇವಸ್ಥಾನವಾಗಿತ್ತಾ ಮಸೀದಿ? ಮಂಡ್ಯದ ಜಾಮಿಯಾ ಮಸೀದಿ ಕಟ್ಟಡ ಹೇಳಿದ ಕತೆ ಏನು.?

ಮಳಲಿಯಲ್ಲಿ ಶೈವ ಸನ್ನಿಧಾನ ಪತ್ತೆ ವಿಚಾರಕ್ಕೆ ಸಂಬಂಧಿಸಿ ಇದು ವೀರಶೈವರ ಪ್ರಾಬಲ್ಯದ ಕ್ಷೇತ್ರ ಎಂಬುದು ಸ್ಪಷ್ಟವಾಗಿದೆ. ಕಾಲಾಂತರದಲ್ಲಿ ಸಾಕಷ್ಟುಭೂಮಿಯನ್ನು ಇಲ್ಲಿ ನಾವು ಕಳೆದುಕೊಂಡಿದ್ದೇವೆ. ಕಳೆದುಹೋದ ವೀರಶೈವ ಮಠಗಳ ಪಟ್ಟಿಯಲ್ಲಿ ಮಳಲಿಯ ಮಠವೂ ಇತ್ತು. ಮಳಲಿಯಲ್ಲಿ ನಮ್ಮ ಮಠ ಇದ್ದ ಬಗ್ಗೆ ಮುಂಚೆಯೇ ಗೊತ್ತಿತ್ತು. ಈ ಬಗ್ಗೆ ಅನಗತ್ಯ ವಿವಾದ ಬೇಡ ಎಂಬ ಕಾರಣಕ್ಕೆ ನಾವು ಸುಮ್ಮನಿದ್ದೆವು. ಮುಂದಿನ ದಿನಗಳಲ್ಲಿ ಜನರು ಕೈಗೊಳ್ಳುವ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ ಎಂದಿದ್ದಾರೆ. ನಾನು ಖುದ್ದಾಗಿ ಹೋಗಿ ಮಸೀದಿಯ ಸ್ಥಳವನ್ನು ನೋಡಿಲ್ಲ. ನೀಲಕಂಠೇಶ್ವರ ವೈಭವ ಪುಸ್ತಕದಲ್ಲಿ ಇದರ ಉಲ್ಲೇಖ ಇದೆ. 

ಪಠ್ಯ ಪರಿಷ್ಕರಣೆಗೆ ಸಾಹಿತಿಗಳ ವಿರೋಧ, ಹಿಂದಿನ ಪಠ್ಯವನ್ನೇ ಮುಂದುವರೆಸಲು ಆಗ್ರಹ

ಕೆಳದಿ ಅರಸರ ಆಳ್ವಿಕೆ ಸಮಯದಲ್ಲಿ ಇವೆಲ್ಲ ಮಠದ ಆಸ್ತಿಯಾಗಿತ್ತು. ಮಠಕ್ಕೆ ಬೇಕಾದ ಸಾಕಷ್ಟು ಭೂಮಿಯನ್ನು ದಾನವಾಗಿ ಕೊಟ್ಟಿದ್ದರು. ಇಡೀ ಗ್ರಾಮವನ್ನು ಮಠಕ್ಕೆ ಉಂಬಳಿ ಕೊಟ್ಟಿದ್ದರು. ಮಳಲಿ ಮಠಕ್ಕೂ ಅನೇಕ ಭೂಮಿಯನ್ನು ಉಂಬಳಿಯಾಗಿ ಕೊಟ್ಟಿದ್ದರು. ಮಂಗಳೂರು-ಉಡುಪಿ ಎರಡು ಜಿಲ್ಲೆಗಳಲ್ಲಿ ಶೈವ ಸಂಪ್ರದಾಯ ಪ್ರಬಲವಾಗಿತ್ತು. ಇಲ್ಲಿ ಒಟ್ಟು ನಮ್ಮ 64 ಮಠಗಳು ಇದ್ದವು. ಈಗ ಕೇವಲ 21 ಮಠಗಳು ಉಳಿದುಕೊಂಡಿದೆ. ಅಲ್ಲಿ ಯಾವುದೇ ವೈಷ್ಣವ ಮತ ಇರಲಿಲ್ಲ. ಮಳಲಿ ಎನ್ನುವ ಊರಿನಲ್ಲಿ ವೀರಶೈವ ಮಠವೇ ಇತ್ತು. ಸಹಮತದಿಂದ ಬಿಟ್ಟುಕೊಟ್ಟರೆ ಉತ್ತಮ. ಸಮಾಜ, ಗ್ರಾಮದವರು ತೆಗೆದುಕೊಳ್ಳುವ ತೀರ್ಮಾನಕ್ಕೆ ನನ್ನ ಸಹಮತ ಇದೆ ಎಂದರು.