Asianet Suvarna News Asianet Suvarna News

ಹಲಾಲ್‌ ಮುಕ್ತ ಯುಗಾದಿಗೆ ಹಿಂದೂ ಜಾಗೃತಿ ಅಭಿಯಾನ: ಸರ್ಕಾರಕ್ಕೆ ಮನವಿ

ಹಿಂದೂಗಳು ‘ಜಟ್ಕಾ ಮಾಂಸ’ ಬಳಸುವ ಮೂಲಕ ‘ಹಲಾಲ್‌ ಮಾಂಸ’ ಮುಕ್ತ ಯುಗಾದಿ ಹಬ್ಬ ಆಚರಿಸುವಂತೆ ‘ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟ’ ಕಾರ್ಯಕರ್ತರು ನಗರದೆಲ್ಲೆಡೆ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. 

hindu group demands ban on halal meat ahead of yugadi in karnataka gvd
Author
First Published Mar 22, 2023, 7:42 AM IST

ಬೆಂಗಳೂರು (ಮಾ.22): ಹಿಂದೂಗಳು ‘ಜಟ್ಕಾ ಮಾಂಸ’ ಬಳಸುವ ಮೂಲಕ ‘ಹಲಾಲ್‌ ಮಾಂಸ’ ಮುಕ್ತ ಯುಗಾದಿ ಹಬ್ಬ ಆಚರಿಸುವಂತೆ ‘ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟ’ ಕಾರ್ಯಕರ್ತರು ನಗರದೆಲ್ಲೆಡೆ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ಮಂಗಳವಾರ ಅವೆನ್ಯೂ ರಸ್ತೆ, ಮೈಸೂರು ಬ್ಯಾಂಕ್‌ ವೃತ್ತ, ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ, ಆರ್‌ಪಿಸಿ ಲೇಔಟ್‌, ವಿಜಯ ನಗರ, ಹಂಪಿ ನಗರ, ಎಲೆಕ್ಟ್ರಾನಿಕ್‌ಸಿಟಿ ಸೇರಿದಂತೆ ಹಲವೆಡೆ ಹಿಂದೂ ಜನಜಾಗೃತಿ ಸಮಿತಿ, ರಾಷ್ಟ್ರ ರಕ್ಷಣಾ ಪಡೆ, ರಾಷ್ಟ್ರೀಯ ಹಿಂದೂ ಪರಿಷತ್‌ ಕಾರ್ಯಕರ್ತರು ಕರಪತ್ರ ಹಂಚಿ ಹಿಂದೂಗಳಲ್ಲಿ ಜಾಗೃತಿ ಮೂಡಿಸಿದರು.

ಹಾಗೆಯೇ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ದಯಾನಂದ್‌ ಅವರನ್ನು ಭೇಟಿ ಮಾಡಿದ ಹಿಂದೂ ಪರ ಸಂಘಟನೆಗಳ ಮುಖಂಡರು, ರಾಜ್ಯ ಸರ್ಕಾರ ಕಾನೂನು ಬಾಹಿರವಾದ ಹಲಾಲ್‌ ಪ್ರಮಾಣ ಪತ್ರದ ಮೇಲೆ ನಿಷೇಧ ಹೇರಬೇಕು ಮತ್ತು ಯುಗಾದಿ ಹಬ್ಬದ ಸಂದರ್ಭದಲ್ಲಿ ‘ಜಟ್ಕಾ ಮಾಂಸ’ದ ವ್ಯವಸ್ಥೆ ಮಾಡಬೇಕು. ಹಲಾಲ್‌ ಮುಕ್ತ ಯುಗಾದಿ ಹಬ್ಬ ಆಚರಿಸಲು ಸಹಕರಿಸಬೇಕು ಎಂದು ಒಕ್ಕೂಟ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು. ಯುಗಾದಿ ಹಬ್ಬದ ಮಾರನೇ ದಿನ ‘ಹೊಸ ತೊಡಕು’ ಮಾಡುವ ಸಂದರ್ಭದಲ್ಲಿ ಟನ್‌ಗಟ್ಟಲೇ ಮಾಂಸ ವಿತರಣೆ ಆಗುತ್ತದೆ. 

5, 8ನೇ ಕ್ಲಾಸ್‌ ಪರೀಕ್ಷೆ ಮುಂದೂಡಿಕೆಗೆ ಹೈಕೋರ್ಟ್‌ ನಕಾರ

ಕೋಟಿಗಟ್ಟಲೆ ವ್ಯಾಪಾರ ವಹಿವಾಟು ನಡೆಯುತ್ತದೆ. ದೇಶದಲ್ಲಿ ಎರಡು ಲಕ್ಷ ಕೋಟಿ ವ್ಯಾಪಾರ ನಡೆಯುತ್ತಿದ್ದು, ಇದರ ಮೇಲೆ ಒಂದೇ ಸಮುದಾಯದ ಹಿಡಿತ ಸಾಧಿಸಿದೆ. ಹೀಗಾಗಿ ರಾಜ್ಯದಲ್ಲಿ ಹಲಾಲ್‌ ಉತ್ಪನ್ನಗಳ ಮೇಲೆ ನಿಷೇಧ ಹಾಕಬೇಕೆಂದು ಆಗ್ರಹಿಸಿದರು. ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ್‌ಗೌಡ ಅವರು, ಕಳೆದೊಂದು ವಾರದಿಂದ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಹಿಂದೂಗಳಲ್ಲಿ ಹಲಾಲ್‌ ಮುಕ್ತ ಯುಗಾದಿ ಆಚರಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. 

ಮತ್ತೆ ಸಚಿವ ಗಡ್ಕರಿಗೆ ಜೀವ ಬೆದರಿಕೆ ಕರೆ: ಬೆಳಗಾವಿ ಕೈದಿ ಹೆಸರಲ್ಲಿ ಮಂಗಳೂರಿಂದ ಬೆದರಿಕೆ

ನಗರದಲ್ಲಿ ಮಂಗಳವಾರ 25ಕ್ಕೂ ಹೆಚ್ಚು ಮಾಂಸದ ಅಂಗಡಿಗಳಿಗೆ ಭೇಟಿ ನೀಡಿದ್ದು, ಹಲಾಲ್‌ ಮಾಡಿದ ಮಾಂಸ ಮಾರಾಟ ಮಾಡದಂತೆ ಮನವಿ ಮಾಡಲಾಗಿದೆ. ಕೆಲವು ಅಂಗಡಿಗಳಲ್ಲಿ ಹಲಾಲ್‌ ಮಾಂಸ ಮತ್ತು ಜಟ್ಕಾ ಮಾಂಸ ಎರಡನ್ನೂ ಮಾರಾಟ ಮಾಡಲು ಮನವೊಲಿಸಲಾಗಿದೆ. ಮುಖ್ಯವಾಗಿ ಹಿಂದೂಗಳಿಗೆ ಹಲಾಲ್‌ ಬದಲು ಜಟ್ಕಾ ಮಾಂಸ ಪೂರೈಸುವಂತೆ ಅಂಗಡಿಗಳ ಮಾಲಿಕರಿಗೆ ಮನವೊಲಿಸಿದ್ದು, ಅವರು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು. ಅಭಿಯಾನದಲ್ಲಿ ರಾಷ್ಟ್ರ ರಕ್ಷಣಾ ಪಡೆ ಅಧ್ಯಕ್ಷ ಪುನೀತ್‌ ಕೆರೆಹಳ್ಳಿ, ರಾಷ್ಟ್ರೀಯ ಹಿಂದೂ ಪರಿಷತ್‌ನ ವಿಕ್ರಮ ಶೆಟ್ಟಿ, ಹಿಂದೂಪರ ಹೋರಾಟಗಾರ ಪ್ರಶಾಂತ್‌ ಸಂಬರ್ಗಿ, ಎಂ.ಎಲ್‌.ಶಿವಕುಮಾರ್‌, ವಕೀಲೆ ಶುಭಾ ನಾಯಕ್‌ ಪಾಲ್ಗೊಂಡಿದ್ದರು.

Follow Us:
Download App:
  • android
  • ios