ಉಡುಪಿ ಕಾಲೇಜು ಶೌಚಗೃಹದಲ್ಲಿ ಹಿಂದೂ ಹುಡ್ಗೀರ ಚಿತ್ರೀಕರಣ: ಮುಸ್ಲಿಂ ಯುವತಿಯರ ಕೃತ್ಯ ಒಪ್ಪಿಕೊಂಡ ಕಾಲೇಜು
ಉಡುಪಿಯ ಕಾಲೇಜಿನ ಶೌಚಗೃಹದಲ್ಲಿ ಹಿಂದೂ ಯುವತಿಯರ ಅರೆನಗ್ನ ವೀಡಿಯೋ ಸೆರೆ ಹಿಡಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರದ ನಂತರ ಕಾಲೇಜು ಆಡಳಿತ ಮಂಡಳಿಯು ಸ್ಪಷ್ಟೀಕರಣವನ್ನು ನೀಡಿದೆ.
ಉಡುಪಿ (ಜು.25): ರಾಜ್ಯದಲ್ಲಿ ಅತ್ಯಂತ ವಿವಾದವನ್ನು ಸೃಷ್ಟಿಸಿರುವ ಉಡುಪಿಯ ಕಾಲೇಜಿನ ಶೌಚಗೃಹದಲ್ಲಿ ಹಿಂದೂ ಯುವತಿಯರ ಅರೆನಗ್ನ ವೀಡಿಯೋ ಸೆರೆ ಹಿಡಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರದ ನಂತರ ಕಾಲೇಜು ಆಡಳಿತ ಮಂಡಳಿಯು ಸ್ಪಷ್ಟೀಕರಣವನ್ನು ನೀಡಿದೆ.
ಉಡುಪಿಯ ಪ್ರತಿಷ್ಠಿತ ಕಾಲೇಜು ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ಮೊಬೈಲ್ ಚಿತ್ರೀಕರಣದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನೇತ್ರಾಜ್ಯೋತಿ ಕಾಲೇಜು ಆಡಳಿತ ಮಂಡಳಿ ನಿರ್ದೇಶಕಿ ರಶ್ಮೀ ಕೃಷ್ಣಪ್ರಸಾದ್ ಅವರು, ಕಾಲೇಜಿನ ಶೌಚಾಲಯದಲ್ಲಿ ವೀಡಿಯಯೋ ಚಿತ್ರೀಕರಣ ಮಾಡಿರುವುದು ನಿಜ. ಇನ್ನು ಮೂವರು ಒಂದೇ ಕ್ಲಾಸ್ ಆಗಿದ್ದು, ಇನ್ನೊಬ್ಬಳು ಹುಡುಗಿ ಬೇರೆ ತರಗತಿಯವಳು. ಇನ್ನು ನಮಗೆ ವಿಚಾರ ತಿಳಿದ ಕೂಡಲೆ ವಿಚಾರಣೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಉಡುಪಿ ಕಾಲೇಜು ಶೌಚಗೃಹದಲ್ಲಿ ಹಿಂದೂ ಯುವತಿಯರ ವೀಡಿಯೋ ಸೆರೆ: ಪ್ರಶ್ನಿಸಿದವರ ಮೇಲೆ ಪೊಲೀಸ್ ವಿಚಾರಣೆ
ಮಕ್ಕಳು ತಪ್ಪೊಪ್ಪಿಗೆ ಕೊಟ್ಟ ನಂತರವೂ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಕಾಲೇಜ್ ಗೆ ಮೊಬೈಲ್ ತರುವಂತಿಲ್ಲ, ಕಾನೂನು ಮೀರಿದ ಕಾರಣ ಮೊಬೈಲನ್ನು ಪೊಲೀಸರಿಗೆ ಒಪ್ಪಿಸಿದ್ದೇವೆ. ತಮಾಷೆಯ ವೀಡಿಯೋ ಮಾಡಿರುವುದಾಗಿ ಮೂವರು ಹೇಳಿದ್ದಾರೆ. ಮೊಬೈಲ್ ಕೊಡುವಾಗಲೇ ಅದರಲ್ಲಿ ವೀಡಿಯೋ ಇರಲಿಲ್ಲ. ವಾಶ್ ರೂಮ್ ಗೆ ಹೋದಾಗ ಮೊಬೈಲ್ ನೋಡಿದೆ, ತಕ್ಷಣ ಹೊರಗೆ ಬಂದೆ. ಸ್ಥಳದಲ್ಲೇ ವಿಡಿಯೋ ಡಿಲೀಟ್ ಮಾಡಿಸಿರುವುದಾಗಿ ಯುವತಿ ಹೇಳಿದ್ದಾಳೆ ಎಂದರು.
ಇಂತಹ ಘಟನೆ ನಡೆಯಬಾರದು ಎಂಬ ಕಾರಣಕ್ಕೆ ಮೊಬೈಲ್ ಬ್ಯಾನ್ ಮಾಡಿದ್ದೇವೆ. ನಮ್ಮ ಜವಾಬ್ದಾರಿ ಸುರಕ್ಷತೆ ಹಾಗಾಗಿ ನಿಯಮ ಮಾಡಿದ್ದೇವೆ. ಇನ್ನು ವೀಡಿಯೋ ಚಿತ್ರೀಕರಣ ಮಾಡಿದವರ ವಿರುದ್ಧ ಸಂತ್ರಸ್ತೆ ಯಾವುದೇ ದೂರು ಕೊಟ್ಟಿಲ್ಲ. ಒಂದೇ ಕಾಲೇಜ್ ಮೇಟ್ ಆಗಿರುವ ಕಾರಣ ದೂರು ಕೊಡಲ್ಲ ಎಂದಿದ್ದಾಳೆ. ನಿಷೇಧ ಮಾಡಿದ್ದರೂ ಕಾಲೇಜಿಗೆ ಮೊಬೈಲ್ ತಂದದ್ದು, ಶೂಟ್ ಮಾಡಿದ್ದು ತಪ್ಪು. ಹಾಗಾಗಿ ಮೊಬೈಲ್ ತಂದು ವೀಡಿಯೋ ಚಿತ್ರೀಕರಣ ಮಾಡಿದ ವಿದ್ಯಾರ್ಥಿನಿಯರನ್ನು ಸಸ್ಪೆಂಡ್ ಮಾಡಿದ್ದೇವೆ. ನೂರಾರು ವಿದ್ಯಾರ್ಥಿನೀಯರ ಚಿತ್ರೀಕರಣ ಮಾಡಲಾಗಿದೆ ಎಂಬೂದು ಸರಿಯಲ್ಲ. ವಿಚಾರ ತಿಳಿಯದೆ ತಪ್ಪು ಮಾಹಿತಿ ಯಾರೂ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.
ಇನ್ನು ಯಾರೊಬ್ಬರೂ ಸುಳ್ಳು ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಬೇಡಿ. ಕಾಲೇಜಿನ ಮಕ್ಕಳಲ್ಲಿ ನಾವು ಧರ್ಮವನ್ನು ನೋಡಲ್ಲ. ಚಿತ್ರೀಕರಿಸಿದ ಧರ್ಮದವರೇ ಕಾಲೇಜಿನಲ್ಲಿ ಘಟನೆ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ತಮಾಷೆಗೆ ಮಾಡಿರುವುದರಿಂದ ನನ್ನ ಭವಿಷ್ಯ, ಆ ಮೂವರ ಭವಿಷ್ಯ ಮುಖ್ಯ ಅಂತ ಸಂತ್ರಸ್ಥೆ ಬರೆದು ನೀಡಿದ್ದಾಳೆ ಎಂದು ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕಿ ರಶ್ಮೀ ಕೃಷ್ಣಪ್ರಸಾದ್ ಮಾಹಿತಿಯನ್ನು ನೀಡಿದ್ದಾರೆ.
Anita Bhat: ಉಡುಪಿ ಕಾಲೇಜ್ ಟಾಯ್ಲೆಟಲ್ಲಿ ಹಿಂದೂ ವಿದ್ಯಾರ್ಥಿನಿಯರ ವಿಡಿಯೋ: ಅನುಭವ ಹೇಳಿದ 'ಟಗರು' ನಟಿ!
ಒಂದು ವಾರ ಘಟನೆಯನ್ನು ಮುಚ್ಚಿಟ್ಟಿದ್ದ ಕಾಲೇಜು: ಉಡುಪಿಯ ಪ್ರತಿಷ್ಠಿತ ಖಾಸಗಿ ಕಾಲೇಜೊಂದರಲ್ಲಿ ಮೂವರು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಕ್ಯಾಮರಾ ಇಟ್ಟು ಹಿಂದೂ ವಿದ್ಯಾರ್ಥಿನಿಯರ ಅರೆ ನಗ್ನ ಚಿತ್ರಗಳನ್ನು ರೆಕಾರ್ಡ್ ಮಾಡಿದ್ದಾರೆ. ನಂತರ, ಅವುಗಳನ್ನು ಅವರದ್ದೇ ಸಮುದಾಯದ ಯವಕರಿಗೆ ಕಳುಹಿಸಲಾಗುತ್ತದೆ. ನಂತರ, ಆ ವೀಡಿಯೋಗಳನ್ನು ಕೆಲವೊಂದು ವಾಟ್ಸಾಪ್ ಗುಂಪುಗಳಿಗೆ ಹಂಚಿಕೊಳ್ಳಲಾಗತ್ತಿತ್ತು. ಈ ಬಗ್ಗೆ ಹಿಂದೂ ವಿದ್ಯಾರ್ಥಿನಿಯರಿಗೆ ಮಾಹಿತಿ ತಿಳಿದು ಕಾಲೇಜು ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರು. ಇದನ್ನು ಪರಿಶೀಲನೆ ಮಾಡಿದ ಕಾಲೇಜು ಆಡಳಿತ ಮಂಡಳಿಯವರು, ಕ್ಯಾಮರಾ ಇಟ್ಟಿದ್ದ ವಿದ್ಯಾರ್ಥಿನಿಯರ ಮೊಬೈಲ್‌ನಲ್ಲಿದ್ದ ವೀಡಿಯೋಗಳನ್ನು ಡಿಲೀಟ್ ಮಾಡಿಸಿದ್ದಾರೆ. ನಂತರ ಕೃತ್ಯವನ್ನು ಎಸಗಿದ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ಈ ಪ್ರಕರಣವನ್ನು ಕಾಲೇಜು ಆಡಳಿತ ಮಂಡಳಿ ಮುಚ್ಚಿಹಾಕಿತ್ತು ಎಂದು ಸುದ್ದಿ ಪ್ರಸಾರವಾಗಿತ್ತು.