ಅಲ್ಲಾಹು ಅಕ್ಬರ್' ಘೋಷಣೆ ಕೂಗಿ ಸುದ್ದಿಯಾಗಿದ್ದ ವಿದ್ಯಾರ್ಥಿನಿ ಪರೀಕ್ಷೆಗೆ ಗೈರು
* ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮಂಡ್ಯದ ವಿದ್ಯಾರ್ಥಿನಿ ಸೆಮಿಸ್ಟರ್ ಪರೀಕ್ಷೆಗೆ ಗೈರು
* ಮಂಡ್ಯದ ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿ
* ಪರೀಕ್ಷೆಗಿಂತ ಹಿಜಾಬ್ ಮುಖ್ಯವಾಯ್ತಾ ಮುಸ್ಕಾನ್‌ಗೆ
ಮಂಡ್ಯ, (ಮಾ.24): ಕಾಲೇಜು ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಗುಂಪು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದಾಗ ಅದಕ್ಕೆ ಪ್ರತಿಯಾಗಿ ಮುಸ್ಕಾನ್ ಎಂಬ ವಿದ್ಯಾರ್ಥಿನಿ ಧೈರ್ಯವಾಗಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದು (Allah Hu Akbar) ಎಲ್ಲೆಡೆ ಸುದ್ದಿಯಾಗಿತ್ತು.
ಇದೀಗ ಮಂಡ್ಯದ (Mandya) ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಮುಸ್ಕಾನ್ (Muskan) ಇದೀಗ ಪದವಿ ಪರೀಕ್ಷೆಗೆ (Degree Exam) ಗೈರಾಗಿದ್ದಾರೆ. ಈ ಮೂಲಕ ಕರ್ನಾಟಕ ಹೈಕೋರ್ಟ್ ನೀಡಿದ್ದ ಹಿಜಾಬ್ ತೀರ್ಪು (Hijab verdict) ಅನ್ನು ವಿರೋಧಿಸಿದ್ದಾಳೆ.
Hijab Row ಅಲ್ಲಾಹು ಅಕ್ಬರ್ ಎಂದ ಮಂಡ್ಯದ ವಿದ್ಯಾರ್ಥಿನಿಗೆ ಐ ಫೋನ್, ಸ್ಮಾರ್ಟ್ವಾಚ್ ಗಿಫ್ಟ್
ಹೌದು... ಇಂದು(ಗುರುವಾರ) ಮೈಸೂರು ವಿಶ್ವವಿದ್ಯಾಲಯದ (Mysore University) ಎರಡನೇ ವರ್ಷದ ಬಿಕಾಂ ಸೆಮಿಸ್ಟರ್ ಪರೀಕ್ಷೆ ಆರಂಭವಾಗಿದೆ. ಮುಸ್ಕಾನ್ ಕೂಡ ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿದ್ದು, ಪರೀಕ್ಷೆಗೆ ಹಾಜರಾಗಿಲ್ಲ.
ಗುರುವಾರ ಬೆಳಿಗ್ಗೆ 9.30 ರಿಂದ ಪರೀಕ್ಷೆ ಆರಂಭವಾಗಿದ್ದು, ಪ್ರವೇಶ ಪತ್ರ ಪಡೆಯಲು ಅರ್ಧಗಂಟೆ ಅವಕಾಶ ಕೊಡಲಾಗಿತ್ತು. ಆದ್ರೆ, ಮುಸ್ಕಾನ್ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಸಹ ತೆಗೆದುಕೊಂಡಿಲ್ಲ.
Hijab Row: ಶ್ರೀರಾಮನ ಹೆಸರಲ್ಲಿ ಹೆದರಿಸಿದ್ದು ತಪ್ಪು: ಅಲ್ಲಾಹು ಅಕ್ಬರ್ ಎಂದ ಮುಸ್ಕಾನ್‌ಗೆ RSS ಸಮರ್ಥನೆ!
ಕಾಲೇಜಿನಲ್ಲಿ ಹಿಜಾಬ್ ಅವಕಾಶ ಕೊಡದಕ್ಕೆ ಕಾಲೇಜಿಗೆ ಕಳುಹಿಸಲ್ಲ ಮುಸ್ಕಾನ್ ತಂದೆ ಎಂದು ಹೇಳಿದ್ದಾರೆ. ಅಲ್ಲದೇ ಬೇರೆ ಕಾಲೇಜಿಗೆ ಸೇರಿಸುವ ಬಗ್ಗೆಯು ಕುಟುಂಬಸ್ಥರು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಮುಸ್ಕಾನ್ ಅವರನ್ನ ಪರೀಕ್ಷೆಗೆ ಕಳುಹಿಸಿಲ್ಲ ಎನ್ನಲಾಗುತ್ತಿದೆ.
ಶಿಕ್ಷಣಕ್ಕಿಂತ ನಮಗೆ ಹಿಜಬ್ ಮುಖ್ಯ ಎಂದು ಹೇಳಿ ಈಗಾಗಲೇ ಕರ್ನಾಟಕದ ಹಲವು ಕಡೆ ಪ್ರಾಯೋಗಿಕ ಪರೀಕ್ಷೆಗೆ ವಿದ್ಯಾರ್ಥಿನಿಯರು ಗೈರಾಗುತ್ತಿದ್ದಾರೆ.
ಮಂಡ್ಯದ ಪಿಇಎಸ್ ಕಾಲೇಜು ಆವರಣದಲ್ಲಿ. ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ (muskan) ಅಲ್ಲಾಹು ಅಕ್ಬರ್ ಎಂದು ಕೂಗಿದ್ದಕ್ಕೆ ಘೋಷಿಸಿತ್ತು. ಇದು ದೇಶಾದ್ಯಂತ ಸುದ್ದಿಯಾಗಿದ್ರು. ಅನೇಕ ಮುಸ್ಲಿಂ ಮುಖಂಡರು, ಕಾಂಗ್ರೆಸ್ ನಾಯಕರು ಶ್ಲಾಘಿಸಿದ್ದರು. ಅಲಲ್ದೇ ಮುಸ್ಲಿಂ ಸಂಘಟನೆಯೊಂದು ಯುವತಿಗೆ 5 ಲಕ್ಷ ರೂಪಾಯಿ ನಗದು ಬಹುಮಾನ ನೀಡಿತ್ತು. ಸಾಲದಕ್ಕೆ ಮುಸ್ಕಾನ್ ನಿವಾಸಕ್ಕೆ ಮುಂಬೈನ ಬಾಂದ್ರಾ ಪೂರ್ವ ಕ್ಷೇತ್ರದ ಶಾಸಕ ಜಿಶಾನ್ ಸಿದ್ದಿಕ್ ಭೇಟಿ ನೀಡಿದ್ದರು. ಈ ವೇಳೆ ಐ ಫೋನ್, ಸ್ಮಾರ್ಟ್ವಾಚ್ ಗಿಫ್ಟ್ ನೀಡಿ ಅಭಿನಂದಿಸಿದ್ದರು.
ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ಕೇಸರಿ ಶಾಲು ಗಲಾಟೆ ಇತ್ತೀಚೆಗೆ ತಾರಕಕ್ಕೇರಿತ್ತು. ಫೆ.8 ರಂದು ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಬುರ್ಖಾ ಧರಿಸಿದ ಯುವತಿಯ (ವಿದ್ಯಾರ್ಥಿನಿ ಮುಸ್ಕಾನ್) ಎದುರು ಯುವಕರ ಗುಂಪೊಂದು ಜೈ ಶ್ರೀರಾಮ್ ಘೋಷಣೆ ಕೂಗಿತ್ತು. ತನ್ನೆದುರು ಕೇಸರಿ ಶಾಲು ಧರಿಸಿ, ಜೈ ಶ್ರೀರಾಮ್ ಘೋಷಣೆ ಕೂಗಿದ ಯುವಕರ ವರ್ತನೆಯಿಂದ ಕೋಪಗೊಂಡ ವಿದ್ಯಾರ್ಥಿನಿ ಮುಸ್ಕಾನ್ ಅಲ್ಲಾ ಹು ಅಕ್ಬರ್ ಎಂದು ಕೈಗಳನ್ನು ಮೇಲೆತ್ತಿ ಘೋಷಣೆ ಕೂಗುತ್ತಾ ಮಂಡ್ಯದ ಪಿಇಎಸ್ ಕಾಲೇಜು ಆವರಣದಲ್ಲಿ ಕಾಣಿಸಿಕೊಂಡಿದ್ದಳು. ಆ ವಿಡಿಯೋ ವೈರಲ್ ಆಗಿತ್ತು.
'ಜೈ ಶ್ರೀ ರಾಮ್' ಹೆಸರಿನಲ್ಲಿ ಬೆದರಿಕೆ ತಪ್ಪು
ಆಕೆ ನಮ್ಮ ಸಮುದಾಯದ ಮಗಳು ಮತ್ತು ಸಹೋದರಿ ಎಂದು ಮುಸ್ಲಿಂ ಮಂಚ್‌ನ ಅವಧ್ ಪ್ರಾಂತ್ಯದ ನಿರ್ದೇಶಕ ಅನಿಲ್ ಸಿಂಗ್ ಹೇಳಿದ್ದಾರೆ. ಬಿಕ್ಕಟ್ಟಿನ ಸಮಯದಲ್ಲಿ ನಾವು ಅವರೊಂದಿಗೆ ನಿಲ್ಲುತ್ತೇವೆ. ಹಿಂದೂ ಸಂಸ್ಕೃತಿಯು ಮಹಿಳೆಯನ್ನು ಗೌರವಿಸುವುದನ್ನು ಕಲಿಸುತ್ತದೆ ಎಂದು ಹೇಳಿದರು. ಹುಡುಗಿಯನ್ನು ಹೆದರಿಸಲು 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಿದ್ದು ತಪ್ಪು. ಹೆಣ್ಣು ಮಗುವಿಗೆ ಹಿಜಾಬ್ ಧರಿಸಲು ಸಾಂವಿಧಾನಿಕ ಸ್ವಾತಂತ್ರ್ಯವಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅವರು ಕ್ಯಾಂಪಸ್ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ್ದರೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಹಕ್ಕು ಸಂಸ್ಥೆಗೆ ಇದೆ. ಕೇಸರಿ ದುಪಟ್ಟಾ ಧರಿಸಿ 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗುವ ಹುಡುಗರ ವರ್ತನೆ ಸ್ವೀಕಾರಾರ್ಹವಲ್ಲ ಎಂದು ಆರ್‌ಎಸ್‌ಎಸ್ ನಾಯಕ ಹೇಳಿದ್ದಾರೆ. ಇಂತಹ ಕೃತ್ಯದಿಂದ ವಿದ್ಯಾರ್ಥಿಗಳು ಹಿಂದೂ ಸಂಸ್ಕೃತಿಗೆ ಧಕ್ಕೆ ತಂದಿದ್ದಾರೆ ಎಂದೂ ದೂಷಿಸಿದ್ದಾರೆ.