Hijab Row: ಶ್ರೀರಾಮನ ಹೆಸರಲ್ಲಿ ಹೆದರಿಸಿದ್ದು ತಪ್ಪು: ಅಲ್ಲಾಹು ಅಕ್ಬರ್ ಎಂದ ಮುಸ್ಕಾನ್‌ಗೆ RSS ಸಮರ್ಥನೆ!
* ರಾಜ್ಯಾದ್ಯಂತ ವ್ಯಾಪಿಸಿದ ಉಡುಪಿಯ ಕಾಲೇಜಿನಿಂದ ಆರಂಭವಾದ ಹಿಜಾಬ್ ವಿವಾದ
* ಹಿಜಾಬ್ ವಿವಾದದ ಮಧ್ಯೆ ವೈರಲ್ ಆಗಿತ್ತು ಮುಸ್ಕಾನ್ ವಿಡಿಯೋ
* ಅಲ್ಲಾಹು ಅಕ್ಬರ್ ಎಂದ ಮುಸ್ಕಾನ್‌ಗೆ RSS ಸಮರ್ಥನೆ
ಬೆಂಗಳೂರು(ಫೆ.10): ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಸ್ಲಿಂ ವಿಭಾಗ 'ಮುಸ್ಲಿಂ ರಾಷ್ಟ್ರೀಯ ಮಂಚ್' ಕರ್ನಾಟಕ ವಿದ್ಯಾರ್ಥಿ ಮುಸ್ಕಾನ್ ಅವರ ಬೆಂಬಲಕ್ಕೆ ನಿಂತಿದೆ. ಹಿಜಾಬ್ ಅಥವಾ 'ಪರ್ದಾ' ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದೆ ಎಂಬುವುದನ್ನು ಮುಸ್ಲಿಂ ವಿಭಾಗವು ಸಮರ್ಥಿಸುತ್ತದೆ. ವಿದ್ಯಾರ್ಥಿನಿಯನ್ನು ಸುತ್ತುವರಿದು ಜೈ ಶ್ರೀ ರಾಮ್ ಘೋಷಣೆ ಕೂಗಿದ್ದು ದೇವರನ್ನೇ ನಿಂದಿಸಿದಂತೆ, ಇದು ಮೂರ್ಖತನ ಎಂದು ಮುಸ್ಲಿಂ ರಾಷ್ಟ್ರೀಯ ಮಂಚ್ ಹೇಳಿದೆ.
'ಜೈ ಶ್ರೀ ರಾಮ್' ಹೆಸರಿನಲ್ಲಿ ಬೆದರಿಕೆ ತಪ್ಪು
ಆಕೆ ನಮ್ಮ ಸಮುದಾಯದ ಮಗಳು ಮತ್ತು ಸಹೋದರಿ ಎಂದು ಮುಸ್ಲಿಂ ಮಂಚ್‌ನ ಅವಧ್ ಪ್ರಾಂತ್ಯದ ನಿರ್ದೇಶಕ ಅನಿಲ್ ಸಿಂಗ್ ಹೇಳಿದ್ದಾರೆ. ಬಿಕ್ಕಟ್ಟಿನ ಸಮಯದಲ್ಲಿ ನಾವು ಅವರೊಂದಿಗೆ ನಿಲ್ಲುತ್ತೇವೆ. ಹಿಂದೂ ಸಂಸ್ಕೃತಿಯು ಮಹಿಳೆಯನ್ನು ಗೌರವಿಸುವುದನ್ನು ಕಲಿಸುತ್ತದೆ ಎಂದು ಹೇಳಿದರು. ಹುಡುಗಿಯನ್ನು ಹೆದರಿಸಲು 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಿದ್ದು ತಪ್ಪು. ಹೆಣ್ಣು ಮಗುವಿಗೆ ಹಿಜಾಬ್ ಧರಿಸಲು ಸಾಂವಿಧಾನಿಕ ಸ್ವಾತಂತ್ರ್ಯವಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅವರು ಕ್ಯಾಂಪಸ್ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ್ದರೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಹಕ್ಕು ಸಂಸ್ಥೆಗೆ ಇದೆ. ಕೇಸರಿ ದುಪಟ್ಟಾ ಧರಿಸಿ 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗುವ ಹುಡುಗರ ವರ್ತನೆ ಸ್ವೀಕಾರಾರ್ಹವಲ್ಲ ಎಂದು ಆರ್‌ಎಸ್‌ಎಸ್ ನಾಯಕ ಹೇಳಿದ್ದಾರೆ. ಇಂತಹ ಕೃತ್ಯದಿಂದ ವಿದ್ಯಾರ್ಥಿಗಳು ಹಿಂದೂ ಸಂಸ್ಕೃತಿಗೆ ಧಕ್ಕೆ ತಂದಿದ್ದಾರೆ ಎಂದೂ ದೂಷಿಸಿದ್ದಾರೆ.
ಮುಸ್ಲಿಮರು ಮತ್ತು ಹಿಂದೂಗಳ ಡಿಎನ್ಎ ಒಂದೇ
ಹಿಜಾಬ್ ಅಥವಾ ಪರ್ದಾ ಇವು ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದೆ ಮತ್ತು ಹಿಂದೂ ಮಹಿಳೆಯರು ತಮ್ಮ ಆಯ್ಕೆಯಂತೆ ಮುಸುಕು(ದುಪಟ್ಟಾ) ಧರಿಸುತ್ತಾರೆ. ಇದೇ ಮುಸ್ಕಾನ್‌ಗೂ ಅನ್ವಯಿಸುತ್ತದೆ. ಮುಸ್ಲಿಮರು ನಮ್ಮ ಸಹೋದರರು ಮತ್ತು ಎರಡೂ ಸಮುದಾಯಗಳ ಡಿಎನ್ಎ ಒಂದೇ ಎಂದು ನಮ್ಮ ಸರ್ಸಂಘ್ ಚಾಲಕ್ ಹೇಳಿದ್ದಾರೆ. ಮುಸ್ಲಿಮರನ್ನು ತಮ್ಮ ಸಹೋದರರಂತೆ ಸ್ವೀಕರಿಸುವಂತೆ ನಾನು ಹಿಂದೂ ಸಮುದಾಯದ ಸದಸ್ಯರಲ್ಲಿ ಮನವಿ ಮಾಡುತ್ತೇನೆ ಎಂದು ಸಿಂಗ್ ಹೇಳಿದ್ದಾರೆ.
ಏನಿದು ವಿವಾದ?
ಫೆಬ್ರವರಿ 8 ರ ಮಂಗಳವಾರ ಬಂದ ಈ ವಿಡಿಯೋದಲ್ಲಿ ಮುಸ್ಕಾನ್ ಅವರನ್ನು ಕೆಲವು ವಿದ್ಯಾರ್ಥಿಗಳು ಸುತ್ತುವರೆದಿರುವುದು ಕಂಡುಬಂದಿದೆ. ಈ ವೇಳೆ ಕೇಸರಿ ಮಾಲೆ ಧರಿಸಿದ್ದ ಯುವಕರು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದರೆ, ಮುಸ್ಕಾನ್ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಿದ್ದರು. ಆ ದಿನ ಕಾಲೇಜಿನಲ್ಲಿ ಅಸೈನ್‌ಮೆಂಟ್‌ಗೆ ಹೋಗಿದ್ದೆ ಎಂದು ಮುಸ್ಕಾನ್ ನಂತರ ತಿಳಿಸಿದ್ದಾಳೆ. ಅಲ್ಲಿ ಹಿಂದೂ ವಿದ್ಯಾರ್ಥಿಗಳು ಅವರನ್ನು ಒಳಗೆ ಹೋಗದಂತೆ ತಡೆದು ಘೋಷಣೆಗಳನ್ನು ಕೂಗಿದರು. ಆದರೆ, ಕರ್ನಾಟಕ ಸರ್ಕಾರದ ಶಿಕ್ಷಣ ಸಚಿವರು ಮುಸ್ಕಾನ್ ಕಾಲೇಜಿಗೆ ಬಂದಾಗ ಗೇಟ್‌ನಲ್ಲಿ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯರು ಇರಲಿಲ್ಲ ಎಂದು ಹೇಳಿದ್ದರು. ಅಲ್ಲಿಗೆ ತಲುಪಿದ ಅವರು ಅಲ್ಲಾಹು ಅಕ್ಬರ್ ಎಂದು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು, ನಂತರ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಘೋಷಣೆಗಳನ್ನು ಎತ್ತಿದ್ದರು ಎಂದಿದ್ದರು.
ಮೌಲಾನಾ ಮದನಿ 5 ಲಕ್ಷ ನೀಡುವುದಾಗಿ ಘೋಷಿಸಿದರು
ಈ ಘಟನೆಗೆ ಜಮೀಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ ಮುಸ್ಕಾನ್ ಅವರನ್ನು ಶ್ಲಾಘಿಸಿದ್ದಾರೆ. ಈ ಸಾಹಸಕ್ಕೆ ಮುಸ್ಕಾನ್ ಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.