Covid 3rd Wave: ರಾಜ್ಯದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿ ಕೊರೋನಾ ಸೋಂಕು

*   ಈವರೆಗೆ ನಂ.1 ಆಗಿದ್ದ ಮಹಾರಾಷ್ಟ್ರಕ್ಕಿಂತ ರಾಜ್ಯದಲ್ಲಿ ಪ್ರಕರಣಗಳು ಅಧಿಕ
*   ಬೇರೆಲ್ಲ ರಾಜ್ಯಗಳಲ್ಲಿ ಇಳಿಕೆ, ಕರ್ನಾಟಕದಲ್ಲಿ ಮಾತ್ರ ಭಾರೀ ಏರಿಕೆ
*   ಇದು ಕೊರೋನಾ ತಾರಕಕ್ಕೆ ಏರಿರುವ ಸಂಕೇತ 
 

Highest Number of Covid Positive Cases in Karnataka grg

ಬೆಂಗಳೂರು(ಜ.27):  ಕರ್ನಾಟಕ(Karnataka) ಪ್ರಸ್ತುತ ಕರೋನಾ ಸೋಂಕಿನ ಉಚ್ಛ್ರಾಯ ಸ್ಥಿತಿಯಲ್ಲಿದೆ. ಸದ್ಯ ದೇಶದಲ್ಲಿಯೇ(India) ಅತಿ ಹೆಚ್ಚು ಕೊರೋನಾ ಸೋಂಕಿತರು ಪತ್ತೆಯಾಗುತ್ತಿರುವುದು ಕರ್ನಾಟಕದಲ್ಲಿಯೇ! ಅದರಲ್ಲೂ, ಕಳೆದ ಕೆಲ ದಿನಗಳಿಂದ ಸೋಂಕು ಹೆಚ್ಚು ಬಾಧಿಸುವ ರಾಜ್ಯವೆಂದು ಹೇಳುವ ಮಹಾರಾಷ್ಟ್ರಕ್ಕಿಂತಲೂ ಒಂದೂವರೆಪಟ್ಟು ಅಧಿಕ ಮಂದಿ ಕರ್ನಾಟಕದಲ್ಲಿ ಸೋಂಕಿತರಾಗುತ್ತಿದ್ದಾರೆ.

ಕೊರೋನಾ(Coronavirus) ಹೊಸ ಪ್ರಕರಣಗಳು ಮಹಾರಾಷ್ಟ್ರ(Maharashtra) ಮತ್ತು ತಮಿಳುನಾಡಿನಲ್ಲಿ(Tamil Nadu) 30 ಸಾವಿರ, ಕೇರಳದಲ್ಲಿ 25 ಸಾವಿರ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಗುಜರಾತ್‌ ಹಾಗೂ ಮಧ್ಯಪ್ರದೇಶದಲ್ಲಿ 15 ಸಾವಿರ, ದೆಹಲಿ ಹಾಗೂ ಪಶ್ಚಿಮ ಬಂಗಾಳದಲ್ಲಿ ಐದು ಸಾವಿರ ಆಸುಪಾಸಿಗೆ ಇಳಿಕೆಯಾಗಿವೆ. ಆದರೆ, ಕರ್ನಾಟಕದಲ್ಲಿ ಡಿ.23ರಂದು 50 ಸಾವಿರಕ್ಕೆ ಹೆಚ್ಚಳವಾಗಿದ್ದು, ಕಳೆದ ಎಂಟು ದಿನಗಳಿಂದ 40 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿವೆ. ಕಳೆದ ನಾಲ್ಕು ದಿನಗಳಿಂದ 40 ಸಾವಿರಕ್ಕೂ ಅಧಿಕ ಮಂದಿ ಸೋಂಕಿತರಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ, ಸೋಂಕಿತರ ಸಾವು ದಾಖಲೆಯಷ್ಟು ವರದಿಯಾಗುತ್ತಿದೆ. ಈ ಮೂಲಕ ಸೋಂಕಿನ ಉಚ್ಛ್ರಾಯ ಸ್ಥಿತಿಯಲ್ಲಿದ್ದೇವೆ ಎನ್ನುತ್ತಾರೆ ಆರೋಗ್ಯ ತಜ್ಞರು(Health Experts).

Omicron Crisis: ಸಮುದಾಯಕ್ಕೆ ಹಬ್ಬುತ್ತಿದೆ ಒಮಿಕ್ರೋನ್‌: ಹೆಚ್ಚಿನ ಸೋಂಕಿತರಲ್ಲಿ ರೋಗಲಕ್ಷಣವೇ ಇರಲ್ಲ

ನಗರದಲ್ಲಿ ಸತತ 10 ದಿನಗಳಿಂದ ಬೆಂಗಳೂರಿನಲ್ಲಿಯೇ(Bengaluru)  ಅತಿ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದು, ಸಕ್ರಿಯ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ನಾಲ್ಕು ದಿನಗಳಿಂದ ಕೊರೋನಾ ಪ್ರಕರಣಗಳು ಮುಂಬೈನಲ್ಲಿ ನಾಲ್ಕು ಸಾವಿರಕ್ಕೆ, ಪುಣೆ ಹಾಗೂ ದೆಹಲಿಯಲ್ಲಿ 10 ಸಾವಿರಕ್ಕೆ ಇಳಿಕೆಯಾಗಿದೆ. ಆದರೆ, ಬೆಂಗಳೂರಿನಲ್ಲಿ 20 ಸಾವಿರ ಆಸುಪಾಸಿನಲ್ಲಿಯೇ ಇದೆ.

ಕೇಸ್‌ ಇಳಿಕೆ- ಪಾಸಿಟಿವಿಟಿ ದರವಲ್ಲ:

ರಾಜ್ಯದಲ್ಲಿ 50 ಸಾವಿರಕ್ಕೆ ಹೆಚ್ಚಿದ್ದ ಹೊಸ ಪ್ರಕರಣಗಳು ಕಳೆದ ಎರಡು ದಿನಗಳಿಂದ ಇಳಿಕೆಯಾಗದರೂ, ಪಾಸಿಟಿವಿಟಿ ದರ(Positivity Rate) ಮಾತ್ರ ಏರಿಕೆಯಾಗುತ್ತಲೇ ಸಾಗಿ ಶೇ.30ರಷ್ಟು ವರದಿಯಾಗುತ್ತಿದೆ. ಸೋಂಕು ಪರೀಕ್ಷೆಗಳು 60 ರಿಂದ 70 ಸಾವಿರದಷ್ಟು(2.2 ಲಕ್ಷದಿಂದ 1.5 ಲಕ್ಷಕ್ಕೆ) ಇಳಿಕೆಯಾದ ಹಿನ್ನೆಲೆ ಹೊಸ ಪ್ರಕರಣಗಳು ತಗ್ಗಿವೆ. ಆದರೆ, ಸೋಂಕಿತರ ಸಾವು ಮತ್ತು ಪಾಸಿಟಿವಿಟಿ ದರ ಮಾತ್ರ ಹೆಚ್ಚಿದೆ. ಈ ಹಿನ್ನೆಲೆ ಸಾರ್ವಜನಿಕರು ಕೊರೋನಾ ಕಡಿಮೆಯಾಯಿತು ಎಂದು ಮುಂಜಾಗ್ರತಾ ಕ್ರಮಕೈಬಿಡುವಂತಿಲ್ಲ ಎನ್ನುತ್ತಾರೆ ತಜ್ಞರು.

Fact Check: ಕೊರೋನಾ, ವೈರಸ್ ಅಲ್ಲ, ಆಸ್ಪಿರಿನ್‌ ಬಳಸಿ ಚಿಕಿತ್ಸೆ ನೀಡಬಹುದಾದ ಬ್ಯಾಕ್ಟೀರಿಯಾ ಎಂಬುದು ಸುಳ್ಳು!

ಫೆಬ್ರವರಿ ಎರಡನೇ ವಾರ ಇಳಿಕೆ: ಡಾ. ಮುಂಜುನಾಥ್‌

ಮಹಾರಾಷ್ಟ್ರ ಮತ್ತು ದೆಹಲಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸೋಂಕಿನ ತೀವ್ರತೆ ಅವಧಿ ಮೂರು ವಾರಗಳ ವ್ಯತ್ಯಾಸವಿದೆ. ಕೊರೋನಾ ಮೊದಲೆರಡು ಅಲೆಗಳಲ್ಲಿಯೂ ಮಹಾರಾಷ್ಟ್ರ ದೆಹಲಿಯಲ್ಲಿ ಸೋಂಕು ಏರಿಕೆಯಾಗಿ ಮೂರು ವಾರದ ಬಳಿಕ ಕರ್ನಾಟಕದಲ್ಲಿ ಏರಿಕೆಯಾಗಿತ್ತು. ಮೂರನೇ ಅಲೆಯಲ್ಲಿಯೂ ಇದೇ ರೀತಿ ಮುಂದುವರೆದಿದೆ. ಸದ್ಯ ಮಹಾರಾಷ್ಟ್ರ, ದೆಹಲಿಯಲ್ಲಿ ಸೋಂಕು ತಗ್ಗಿದ್ದು, ನಮ್ಮಲ್ಲಿ ಫೆಬ್ರವರಿ ಎರಡನೇ ವಾರದಲ್ಲಿ ಇಳಿಕೆಯಾಗಬಹುದು ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ, ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ಸಿ.ಎನ್‌.ಮಂಜುನಾಥ್‌(Dr CN Manjunath) ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೋನಾ ಹೊಸ ಪ್ರಕರಣ, ಪಾಸಿಟಿವಿಟಿ ದರ ನೋಡಿದರೆ ಸೋಂಕು ಉಚ್ಛ್ರಾಯ ಸ್ಥಿತಿಯಲ್ಲಿದೆ. ಮಹಾರಾಷ್ಟ್ರ, ದೆಹಲಿಯಲ್ಲಿ ಈಗಾಗಲೇ ಏರಿಕೆಯಾಗಿ ತಗ್ಗಿದ್ದು, ಮುಂದಿ ಎರಡು ವಾರದಲ್ಲಿ ರಾಜ್ಯದಲ್ಲಿಯೂ ತೀವ್ರತೆ ತಗ್ಗಬಹುದು ಅಂತ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌, ಮಂಜುನಾಥ್‌ ತಿಳಿಸಿದ್ದಾರೆ. 

ಇನ್ನು 2 ವಾರದಲ್ಲಿ 3ನೇ ಅಲೆ ಉಚ್ಛ್ರಾಯಕ್ಕೆ?

ನವದೆಹಲಿ: ಕೋವಿಡ್‌ ಸೋಂಕು ದಿನೇದಿನೇ ಹೆಚ್ಚುತ್ತಿದ್ದರೂ ಅದು ಒಬ್ಬರಿಂದ ಒಬ್ಬರಿಗೆ ಹರಡುವ ಪ್ರಮಾಣ ನಿರಂತರವಾಗಿ ಇಳಿಕೆಯಾಗುತ್ತಿದ್ದು, ಮುಂದಿನ 14 ದಿನಗಳಲ್ಲಿ ದೇಶದಲ್ಲಿ ಮೂರನೇ ಅಲೆ ಉಚ್ಛ್ರಾಯಕ್ಕೆ ತಲುಪುವ ಸಾಧ್ಯತೆಯಿದೆ ಎಂದು ಐಐಟಿ ಮದ್ರಾಸ್‌ನ ಅಧ್ಯಯನ ಹೇಳಿದೆ.
 

Latest Videos
Follow Us:
Download App:
  • android
  • ios