ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ವಿರುದ್ಧ ಪ್ರತಿಭಟನೆ ನಡೆಸಲು ಆಗಮಿಸಿದ್ದ ರೂಪೇಶ್ ರಾಜಣ್ಣ ಮತ್ತು ಅವರ ತಂಡವನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಇಂದು ಬೆಳಗ್ಗೆ ನಡೆಯಿತು.
ಬೆಂಗಳೂರು (ಜೂ.24): ಕರ್ನಾಟಕದ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ನಿವಾಸದ ಮುಂದೆ ಇಂದು ಬೆಳಗ್ಗೆ ಭಾರೀ ಗೊಂದಲ ಮತ್ತು ಹೈಡ್ರಾಮಾ ನಡೆದಿದೆ. ಸಚಿವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ವಿರುದ್ಧ ಪ್ರತಿಭಟನೆ ನಡೆಸಲು ಆಗಮಿಸಿದ್ದ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಮತ್ತು ಅವರ ತಂಡವನ್ನು ಪೊಲೀಸರು ವಶಕ್ಕೆ ಪಡೆದರು.
ರೂಪೇಶ್ ರಾಜಣ್ಣ ಪ್ರತಿಭಟನೆಗೆ ಕಾರಣವೇನು?
ರೂಪೇಶ್ ರಾಜಣ್ಣ ಮತ್ತು ಸರ್ಫರಾಜ್ ಖಾನ್ ನಡುವಿನ ವೈಮನಸ್ಸು ತಾರಕಕ್ಕೇರಿತ್ತು. ಸರ್ಫರಾಜ್ ಖಾನ್, ರೂಪೇಶ್ ರಾಜಣ್ಣ ಅವರನ್ನು 'ಬ್ಲಾಕ್‌ಮೇಲರ್' ಎಂದು ಆರೋಪಿಸಿದ್ದರು. ಅಲ್ಲದೇ ರೂಪೇಶ್ ರಾಜಣ್ಣ ತಮ್ಮ ಬಳಿ ಹಣಕ್ಕಾಗಿ ಡಿಮಾಂಡ್ ಮಾಡಿದ್ದರು ಎಂದು ಸರ್ಫರಾಜ್ ಖಾನ್ ಗಂಭೀರ ಆರೋಪ ಮಾಡಿದ್ದರು. ಈ ಆರೋಪಗಳಿಗೆ ಪ್ರತಿಯಾಗಿ, ರೂಪೇಶ್ ರಾಜಣ್ಣ ಇಂದು ಜಮೀರ್ ಅಹಮದ್ ಖಾನ್ ಅವರ ಬೆಂಗಳೂರಿನ ನಿವಾಸದ ಮುಂದೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ, ಸರ್ಫರಾಜ್ ಖಾನ್ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದರು.
ಕರ್ನಾಟಕದ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ನಿವಾಸದ ಮುಂದೆ ಇಂದು ಬೆಳಗ್ಗೆ ಭಾರೀ ಗೊಂದಲ ಮತ್ತು ಹೈಡ್ರಾಮಾ ನಡೆದಿದೆ. ಸಚಿವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ವಿರುದ್ಧ ಪ್ರತಿಭಟನೆ ನಡೆಸಲು ಆಗಮಿಸಿದ್ದರು. ಪ್ರತಿಭಟನೆಯ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಬೆಂಗಳೂರು ಪೊಲೀಸರು, ರೂಪೇಶ್ ರಾಜಣ್ಣ ಮತ್ತು ಅವರ ತಂಡವನ್ನು ತಕ್ಷಣವೇ ವಶಕ್ಕೆ ತೆಗೆದುಕೊಂಡರು.
ಹೇಡಿಗಳಂತೆ ಪೊಲೀಸರನ್ನ ಬಳಸಿಕೊಂಡು ಬಂಧಿಸ್ತೀರಾ? : ಆಕ್ರೋಶ
ಸರ್ಫರಾಜ್ ಖಾನ್ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗುವ ಮೂಲಕ ರೂಪೇಶ್ ರಾಜಣ್ಣ ಮತ್ತು ಅವರ ಬೆಂಬಲಿಗರು ಪ್ರತಿಭಟನೆಗೆ ಮುಂದಾದರು. ಈ ವೇಳೆ ಪೊಲೀಸರು ರೂಪೇಶ್ ರಾಜಣ್ಣ ಹಾಗೂ ತಂಡವನ್ನು ವಶಕ್ಕೆ ಪಡೆದರು. ಇದರಿಂದ ಆಕ್ರೋಶಗೊಂಡ ರೂಪೇಶ್ ರಾಜಣ್ಣ, ಸದಸ್ಯರು 'ಹೇಡಿಗಳಂತೆ ಪೊಲೀಸರನ್ನ ಹಾಕಿ ಪ್ರತಿಭಟನೆಯನ್ನು ಹತ್ತಿಕ್ಕುತ್ತಿದ್ದಾರೆ ಎಂದು ಕಿಡಿಕಾರಿದರು
