ಹೈಕೋರ್ಟ್‌ ಏಕಸದ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ಒಂದು ತಿಂಗಳ ಕಾಲ ರಿಲೀಫ್‌ ನೀಡಿದೆ. ಆದೇಶಕ್ಕೆ ತಡೆ ನೀಡುವಂತೆ ಗೌರಿ ಶಂಕರ್ ಪರ ವಕೀಲರು ಮನವಿ ಮಾಡಿಕೊಂಡಿದ್ದರು. ಈಗಾಗಲೇ ಚುನಾವಣೆ‌ ದಿನಾಂಕ ಘೋಷಣೆ ಆಗಿದೆ. ಈ ಹಿನ್ನೆಲೆ, ಒಂದು ತಿಂಗಳ ಕಾಲ ಆದೇಶಕ್ಕೆ ತಡೆ ನೀಡುವಂತೆ ಮನವಿ ಮಾಡಿದ್ದರು

ಬೆಂಗಳೂರು (ಮಾರ್ಚ್‌ 30, 2023): ತುಮಕೂರು ಗ್ರಾಮಾಂತರ ಕ್ಷೇತ್ರದ ಮತದಾರರಿಗೆ ನಕಲಿ ಬಾಂಡ್ ಹಂಚಿಕೆ‌ ಪ್ರಕರಣದಲ್ಲಿ ಜೆಡಿಎಸ್‌ ಶಾಸಕ ಗೌರಿಶಂಕರ್‌ ಅವರು ಶಾಸಕ ಸ್ಥಾನದಿಂದಲೇ ಅನರ್ಹಗೊಂಡಿದ್ದರು. ಈ ಸಂಬಂಧ ಹೈಕೋರ್ಟ್ ಏಕಸದಸ್ಯ ಪೀಠ ಮಹತ್ವದ ಆದೇಶ ನೀಡಿತ್ತು. ತುಮಕೂರು ಗ್ರಾಮಾಂತರದ ಬಿಜೆಪಿ ಮಾಜಿ ಶಾಸಕ ಹಾಗೂ ಪರಾಜಿತ ಅಭ್ಯರ್ಥಿ ಸುರೇಶ್ ಗೌಡ ಜೆಡಿಎಸ್‌ ಶಾಸಕ ಶಾಸಕ ಈ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಆದೇಶದ ವಿರುದ್ಧ ಶಾಸಕ ಗೌರಿಶಂಕರ್‌ ಮೇಲ್ಮನವಿ ಸಲ್ಲಿಸಿದ್ದು, ಹೈಕೋರ್ಟ್‌ ಏಕಸದಸ್ಯ ಪೀಠದ ಆದೇಶಕ್ಕೆ ಹೈಕೋರ್ಟ್‌ ವಿಭಾಗೀಯ ಪೀಠ ಆದೇಶಕ್ಕೆ ತಡೆ ನೀಡಿದೆ. ಈ ಹಿನ್ನೆಲೆ, ಒಂದು ತಿಂಗಳ ಕಾಲ ಹೈಕೋರ್ಟ್‌ ವಿಭಾಗೀಯ ಪೀಠ ತಡೆ ನೀಡಿದ್ದು, ಗೌರಿಶಂಕರ್‌ಗೆ ರಿಲೀಫ್‌ ಸಿಕ್ಕಿದೆ. 

ಆದರೆ, ಹೈಕೋರ್ಟ್‌ ಏಕಸದ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ಒಂದು ತಿಂಗಳ ಕಾಲ ರಿಲೀಫ್‌ ನೀಡಿದೆ. ಆದೇಶಕ್ಕೆ ತಡೆ ನೀಡುವಂತೆ ಗೌರಿ ಶಂಕರ್ ಪರ ವಕೀಲರು ಮನವಿ ಮಾಡಿಕೊಂಡಿದ್ದರು. ಈಗಾಗಲೇ ಚುನಾವಣೆ‌ ದಿನಾಂಕ ಘೋಷಣೆ ಆಗಿದೆ. ಈ ಹಿನ್ನೆಲೆ, ಒಂದು ತಿಂಗಳ ಕಾಲ ಆದೇಶಕ್ಕೆ ತಡೆ ನೀಡುವಂತೆ ಮನವಿ ಮಾಡಿದ್ದರು. ಈ ವಾದ ಆಲಿಸಿದ ನ್ಯಾಯಪೀಠ, ಒಂದು ತಿಂಗಳ ಕಾಲ ಆದೇಶಕ್ಕೆ ತಡೆ ನೀಡಿದೆ.

JDS ಶಾಸಕ ಗೌರಿಶಂಕರ್‌ಗೆ 'ಬಾಂಡ್; ಕಂಟಕ... MLA ಸ್ಥಾನಕ್ಕೆ ಕುತ್ತು?

ಏನಿದು ಪ್ರಕರಣ..?

2018ರ ವಿಧಾನಸಭೆ ಚುನಾವಣೆ ವೇಳೆ ಮತದಾರರಿಗೆ ಆಮಿಷ ನೀಡಿ, ನಕಲಿ ಬಾಂಡ್ ಹಂಚಿದ ಆರೋಪದ ಕೇಸ್ ಜೆಡಿಎಸ್‌ ಶಾಸಕ ಗೌರಿಶಂಕರ್ ಮೇಲಿತ್ತು. ಈ ಸಂಬಂಧ ಹೈಕೋರ್ಟ್‌ ಏಕಸದ್ಯ ಪೀಠದ ನ್ಯಾಯಮೂರ್ತಿ ಸುನೀಲ್‌ದತ್ ಯಾದವ್ ಅನರ್ಹಗೊಳಿಸಿ ಆದೇಶ ನೀಡಿದ್ದರು. ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿ ಶಂಕರ್‌ರನ್ನ ಶಾಸಕ‌ ಸ್ಥಾನದಿಂದ ಅಸಿಂಧುಗೊಳಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು. 

32 ಸಾವಿರ ವಯಸ್ಕರು ಹಾಗೂ 16 ಸಾವಿರ ಮಕ್ಕಳಿಗೆ ನಕಲಿ ವಿಮಾ ಪಾಲಿಸಿ ಬಾಂಡ್ ವಿತರಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. 2018 ರ ಚುನಾವಣೆಯಲ್ಲಿ ನಕಲಿ ಬಾಂಡ್ ಆಮಿಷ ಒಡ್ಡಿ ಅಕ್ರಮವಾಗಿ ಗೆದ್ದಿದ್ದಾರೆಂಬ ಆರೋಪ ಜೆಡಿಎಸ್‌ ಶಾಸಕ ಗೌರಿ ಶಂಕರ್‌ ಅವರ ಮೇಲೆ ವ್ಯಕ್ತವಾಗಿತ್ತು. ಇದರ ವಿರುದ್ಧ ಪರಾಜಿತ ಅಭ್ಯರ್ಥಿ ಬಿಜೆಪಿಯ ಸುರೇಶ್‌ ಗೌಡ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಹೈಕೋರ್ಟ್‌ ಏಕಸದಸ್ಯ ಪೀಠ ಗೌರಿಶಂಕರ್‌ ಅವರನ್ನು ಅನರ್ಹಗೊಳಿಸಿತ್ತು. ಆದರೆ, ವಿಭಾಗೀಯ ಪೀಠ ಅನರ್ಹತೆಯನ್ನು ಒಂದು ತಿಂಗಳ ಕಾಲ ತಡೆ ಹಿಡಿದಿದೆ. ಈ ಮೂಲಕ ಜೆಡಿಎಸ್‌ ಶಾಸಕ ಗೌರಿಶಂಕರ್‌ಗೆ ರಿಲೀಫ್‌ ದೊರೆತಂತಾಗಿದೆ. 

ಜೆಡಿಎಸ್ ಶಾಸಕಗೆ ಶುರುವಾಯ್ತು ಸಂಕಷ್ಟ : ಸೂಪರ್ ಎಕ್ಸ್‌ಕ್ಲೂಸಿವ್