Asianet Suvarna News Asianet Suvarna News

ಲವ್ ಜಿಹಾದ್ ತಡೆಗೆ ಶ್ರೀರಾಮ ಸೇನೆಯಿಂದ ಸಹಾಯವಾಣಿ

ಅನ್ಯ ಕೋಮಿನ ಯುವಕರಿಂದ ಹಿಂದೂ ಯುವತಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ ಎಂದು ತಿಳಿಸಿದ ಶ್ರೀರಾಮ ಸೇನೆ ಬೆಂಗಳೂರು ನಗರಾಧ್ಯಕ್ಷ ಎಸ್. ಭಾಸ್ಕರನ್

Helpline from Sri Ram Sena to stop Love Jihad in Karnataka grg
Author
First Published May 30, 2024, 11:06 AM IST

ಬೆಂಗಳೂರು(ಮೇ.30):  ರಾಜ್ಯದಲ್ಲಿ ಲವ್ ಜಿಹಾದ್ ಮತ್ತು ಹಿಂದೂ ಹೆಣ್ಣುಮಕ್ಕಳ ಹತ್ಯೆ ಪ್ರಕರಣ ತಡೆದು ರಕ್ಷಣೆ ಒದಗಿಸುವ ಉದ್ದೇಶದಿಂದ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಸಹಾಯವಾಣಿ ಸಂಖ್ಯೆಯನ್ನು ಶ್ರೀರಾಮ ಸೇನೆ ಬಿಡುಗಡೆ ಮಾಡಿದೆ. 9090443444 ಸಹಾಯವಾಣಿ ಸಂಖ್ಯೆಯಾಗಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸಹಾಯವಾಣಿ ಬಿಡುಗಡೆಗೊಳಿಸಿ ಮಾತನಾಡಿದ ಶ್ರೀರಾಮ ಸೇನೆ ಬೆಂಗಳೂರು ನಗರಾಧ್ಯಕ್ಷ ಎಸ್. ಭಾಸ್ಕರನ್, ಅನ್ಯ ಕೋಮಿನ ಯುವಕರಿಂದ ಹಿಂದೂ ಯುವತಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ ಎಂದು ತಿಳಿಸಿದ್ದಾರೆ. 

'ಮುಸ್ಲಿಮರಿಗೆ ಲಿವ್ ಇನ್ ಸಂಬಂಧದಲ್ಲಿರುವ ಹಕ್ಕಿಲ್ಲ. ಆದರೆ..' ಹೈಕೋರ್ಟ್ ಮಹತ್ವದ ಆದೇಶ

ತಮ್ಮ ವೈಯಕ್ತಿಕ ಲಾಭಕ್ಕಾಗಿ ಅಮಾಯಕ ಯುವತಿಯರನ್ನು ಪ್ರೀತಿ, ಪ್ರೇಮದ ಹೆಸರಿನಲ್ಲಿ ಅತ್ಯಾಚಾರ, ಕೊಲೆ, ಮತಾಂತರ ಹಾಗೂ ಭಯೋತ್ಪಾದನಾ ಕೃತ್ಯಗಳಿಗೆ ಬಳಸಲಾಗುತ್ತಿದೆ ಎಂದು ಕಿಡಿಕಾಡಿದರು. ಇಂತಹ ಪ್ರಕರಣಗಳಿಂದ ಯುವತಿಯರನ್ನು ರಕ್ಷಿಸಲು ಸಹಾಯವಾಣಿ ಆರಂಭಿಸಲಾಗಿದೆ ಎಂದರು.

Latest Videos
Follow Us:
Download App:
  • android
  • ios