ಈ ಕೇಸ್‌ನಲ್ಲಿ ವಿಶೇಷ ಎಂದರೆ ಮಕ್ಕಳ ಅಪಹರಣದಲ್ಲಿ ಅವರ ತಾಯಂದಿರೇ ಶಾಮೀಲಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಗಳು ಕಳೆದ ದಿ.5 ರಂದು‌ ನಗರದಿಂದ ಆರು ಮಕ್ಕಳನ್ನು ಅಪಹರಿಸಿದ್ದರು. ಅದೇ ದಿನ‌ ಮಕ್ಕಳ‌ ನಾಪತ್ತೆ ಕುರಿತು ವಿದ್ಯಾಗಿರಿ ಠಾಣೆಯಲ್ಲಿ‌ ದೂರು ದಾಖಲಾಗಿತ್ತು. 

ಧಾರವಾಡ(ನ.20):  ನಗರದಿಂದ ಆರು ಮಕ್ಕಳನ್ನು ಅಪಹರಿಸಿದ ನಾಲ್ವರನ್ನು ನಗರದ ವಿದ್ಯಾಗಿರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಧಾರವಾಡದ ರೇಶ್ಮಾ ಸಾಂಬ್ರಾಣಿ, ಪ್ರಿಯಾಂಕ ಸಾಂಬ್ರಾಣಿ, ಭೂಸಪ್ಪ ಚೌಕ ನಿವಾಸಿ ಸುನೀಲ‌ ಕರಿಗಾರ ಮತ್ತು ಶಿಕಾರಿಪುರ ಮೂಲದ ಮುತ್ತುರಾಜ ಬಿ. ಬಂಧಿತ ಆರೋಪಿಗಳಾಗಿದ್ದಾರೆ. 

ಈ ಕೇಸ್‌ನಲ್ಲಿ ವಿಶೇಷ ಎಂದರೆ ಮಕ್ಕಳ ಅಪಹರಣದಲ್ಲಿ ಅವರ ತಾಯಂದಿರೇ ಶಾಮೀಲಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಗಳು ಕಳೆದ ದಿ.5 ರಂದು‌ ನಗರದಿಂದ ಆರು ಮಕ್ಕಳನ್ನು ಅಪಹರಿಸಿದ್ದರು. ಅದೇ ದಿನ‌ ಮಕ್ಕಳ‌ ನಾಪತ್ತೆ ಕುರಿತು ವಿದ್ಯಾಗಿರಿ ಠಾಣೆಯಲ್ಲಿ‌ ದೂರು ದಾಖಲಾಗಿತ್ತು.

50ರ ಅಂಕಲ್‌ನ ಪ್ರೀತಿ ಫಜೀತಿ, ಡೇಟ್‌ಗೆ ಕರೆದೊಯ್ದು ಕಿಡ್ನಾಪ್ ಮಾಡಿ 3 ಲಕ್ಷ ರೂಗೆ ಬೇಡಿಕೆ ಇಟ್ಟ ಗೆಳತಿ!

ಕೂಡಲೇ ಕಾರ್ಯಪ್ರವೃತ್ತರಾದ ವಿದ್ಯಾಗಿರಿ ಠಾಣೆಯ ಸಿಪಿಐ ಸಂಗಮೇಶ ದಿಡಿಗಿನಾಳ‌ ನೇತೃತ್ವದ ಸಿಬ್ಬಂದಿ, ಅಪಹರಿಸಿದ‌ ಮಕ್ಕಳ‌ ಸಮೇತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಪಹರಣದ ಉದ್ದೇಶ ಮತ್ತು ಇತರ ಆರೋಪಿಗಳ‌ ಕುರಿತು ಪೊಲೀಸರು ತನಿಖೆಯನ್ನ ನಡೆಸುತ್ತಿದ್ದಾರೆ.