Asianet Suvarna News Asianet Suvarna News

ರಾಜ್ಯದ ಕೆಲವೆಡೆ ಮಳೆ ಎಚ್ಚರಿಕೆ: ಯೆಲ್ಲೋ ಅಲರ್ಟ್ ಘೋಷಣೆ

ಸದ್ಯ ಬಿರುಬೇಸಿಗೆಗೆ ಜನ ತತ್ತರಿಸಿದ್ದಾರೆ. ಇದರ ಮಧ್ಯೆ ರಾಜ್ಯದ ಕೆಲವೆಡೆ ಜೋರು ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ. ಯಾವಾಗ? ಎಲ್ಲೆಲ್ಲಿ ಮಳೆ?

heavy rains forecast From April 11 Yellow alert in karavali District rbj
Author
Bengaluru, First Published Apr 10, 2021, 8:04 PM IST

ಬೆಂಗಳೂರು, (ಏ.10): ರಾಜ್ಯದಲ್ಲಿ ಏಪ್ರಿಲ್ 11ರ ಬಳಿಕ ಭಾರಿ ಮಳೆಯಾಗಲಿದ್ದು, ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. 

ಏಪ್ರಿಲ್ 13 ಹಾಗೂ 14 ರಂದು ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಹವಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. 

ಈ ವರ್ಷ ಹೇಗಿರಲಿದೆ ಮಳೆ : ಭವಿಷ್ಯವಾಣಿ ಏನು ಹೇಳಿದೆ..?

ಇನ್ನುಳಿದಂತೆ ಕರ್ನಾಟಕದ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್,ಧಾರವಾಡ, ಕಲಬುರಗಿ, ವಿಜಯಪುರ, ಯಾದಗಿರಿಯಲ್ಲಿ ಮಳೆಯಾಗಲಿದೆ. 

ಇನ್ನು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಮಳೆಯಾಗಲಿದೆ. ಏಪ್ರಿಲ್ 13 ಹಾಗೂ 14 ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Follow Us:
Download App:
  • android
  • ios