ಈ ವರ್ಷ ಹೇಗಿರಲಿದೆ ಮಳೆ : ಭವಿಷ್ಯವಾಣಿ ಏನು ಹೇಳಿದೆ..?
ಹಲವು ವರ್ಷಗಳಿಂದ ಒಂದೆ ಅತಿವೃಷ್ಟಿಯಾದರೆ, ಇನ್ನೊಂದೆಡೆ ಅನಾವೃಷ್ಟಿಯಾಗುತ್ತಿದೆ. ಇದರಿಂದ ರೈತರ ಬದುಕು ಅತ್ಯಂತ ದುಸ್ಥರವಾಗಿ ನಡೆಯುತ್ತಿದ್ದು ಇದರ ಬೆನ್ನಲ್ಲೇ ಭವಿಷ್ಯವಾಣಿಯಿಂದು ಸಂತಸದ ಸುದ್ದಿ ನೀಡಿದೆ.
ಬಾಗಲಕೋಟೆ (ಮಾ.26): ‘ಪ್ರಸಕ್ತ ವರ್ಷ ಮುಂಗಾರು ಮಳೆಗಳಾದ ರೋಹಿಣಿ, ಪುನರ್ವಸು, ಹಿಂಗಾರು ಮಳೆಗಳಲ್ಲಿ ಮಗೆ, ಉತ್ತರೆ ಮಳೆಗಳು ಸಂಪೂರ್ಣ ಸುರಿಯಲಿವೆ.’
-ಇದು ಕೃಷಿಕರ ಮಠವೆಂದೇ ಖ್ಯಾತಿ ಪಡೆದಿರುವ ಬಾಗಲಕೋಟೆ ಜಿಲ್ಲೆಯ ಮುರನಾಳ ಶ್ರೀ ಮಳೆರಾಜೇಂದ್ರಸ್ವಾಮಿ ಮಠದ ವಾಣಿ.
ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ರಾತ್ರಿ ನಡೆದ ಕಡುಬಿನ ಕಾಳಗದ(ಮಳೆ ಬೆಳೆ ಸೂಚನೆ)ಲ್ಲಿ ಈ ವಾಣಿಯನ್ನು ಹೇಳಲಾಗಿದೆ.
ಎಂಟಾಣೆ ಮಳೆ, ಮಹಾನ್ ವ್ಯಕ್ತಿಯ ತಲೆದಂಡ; ಚಿಕ್ಕಯ್ಯಪ್ಪ ಕಾಲಜ್ಞಾನ ಸುಳ್ಳಾಗಿದ್ದೇ ಇಲ್ಲ! ..
ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ರೋಹಿಣಿ, ಪುನರ್ವಸು, ಸಂಪೂರ್ಣ, ಆರಿದ್ರಾ, ಮೃಗಶಿರಾ ಉತ್ತಮ ಮಳೆಗಳಾಗಿದ್ದರೆ, ಪುಷ್ಯಾ ಮಳೆ ಸಾಧಾರಣ ಮಳೆಯಾಗಲಿದೆ. ಹಿಂಗಾರಿನಲ್ಲಿ ಮಗೆ ಸಂಪೂರ್ಣ, ಉತ್ತರೆ ಉತ್ತಮ, ಚಿತ್ತಾ, ಸ್ವಾತಿ ಮಳೆ ಸಾಧಾರಣವಾಗಿರಲಿದೆ ಎಂದು ಶ್ರೀ ಮಠದ ಸೂಚನೆ ದೊರೆಯಿತು ಎಂದು ಮಠಾಧೀಶರಾದ ಜಗನ್ನಾಥಸ್ವಾಮಿ, ಅಖಂಡಸ್ವಾಮಿ ಮಹಾಪುರುಷ ಅವರು ಭಕ್ತರಿಗೆ ತಿಳಿಸಿದ್ದಾರೆ.