ಬೀದರ್: ಏಕಾಏಕಿ ಭಾರೀ ಗಾಳಿ, ಸಿಡಿಲು ಗುಡುಗು ಸಹಿತ ಮಳೆ; ಆತಂಕಗೊಂಡ ಜನರು!
ಒಂದು ಕಡೆ ಬೇಸಗೆ ಬಿಸಲು, ಇನ್ನೊಂದು ಕಡೆ ಮಳೆ ಸಹಿತ ಬಿರುಗಾಳಿ. ಬೀದರ್‌ನಲ್ಲಿ ಸಂಜೆ ಏಕಾಏಕಿ ಸುರಿದ ಅಕಾಲಿಕ ಮಳೆಗೆ ಮರಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತಗೊಂಡರು.
ಬೀದರ್ (ಮಾ.17): ಒಂದು ಕಡೆ ಬೇಸಗೆ ಬಿಸಲು, ಇನ್ನೊಂದು ಕಡೆ ಮಳೆ ಸಹಿತ ಬಿರುಗಾಳಿ. ಬೀದರ್‌ನಲ್ಲಿ ಸಂಜೆ ಏಕಾಏಕಿ ಸುರಿದ ಅಕಾಲಿಕ ಮಳೆಗೆ ಮರಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತಗೊಂಡರು.
ಬೀದರ್ ಜಿಲ್ಲೆಯ ಜನವಾಡ, ಭಾಲ್ಕಿಯ ಕೋಸಂ ಹಾಗೂ ಬೀದರನ ಹಲವು ಹಳ್ಳಿಯಲ್ಲಿ ಜನರು ಹೈರಾಣ. ಗುಡುಗು ಸಹಿತ ಭಾರೀ ಮಳೆಗೆ ಆತಂಕಗೊಂಡ ಜನರು. ಮಧ್ಯಾಹ್ನ 3 ಗಂಟೆಗೆ ಆರಂಭವಾದ ಭಾರೀ ಗಾಳಿ ಸಹಿತ ಮಳೆ, ಒಂದೇ ಗಂಟೆಯಲ್ಲಿ ಇಡೀ ಹಳ್ಳಿಯಲ್ಲಿ ಅವಾಂತರ ಸೃಷ್ಟಿಸಿದೆ. ರೈತರ ಬೆಳೆಗಳಿಗೆ ಅಪಾರ ಹಾನಿ ಉಂಟುಮಾಡಿದೆ.
2024 ಜಗತ್ತಿಗೇ ಒಳ್ಳೆದಲ್ಲ! ದುರಂತಗಳ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ!
ಕೊಡಗಿನಲ್ಲಿ 2 ದಿನಗಳಿಂದ ಅಕಾಲಿಕ ಮಳೆ: ಕಾಫಿ, ಭತ್ತ ಸೇರಿದಂತೆ ವಿವಿಧ ಬೆಳೆಗಳು ಹಾಳು, ಸಂಕಷ್ಟದಲ್ಲಿ ರೈತರು!
ಬೆಳಗ್ಗೆಯಿಂದ ವಿಪರೀತ ಬಿಸಲಿಗೆ ಬಸವಳಿದಿದ್ದ ಜನರು ಸಂಜೆ ಏಕಾಏಕಿ ಮೋಡ ಕವಿದು ಗುಡುಗು, ಮಿಂಚು ಸಹಿತ ಮಳೆಯಾಗಿದೆ. ಸಿಡಿಲು ಬಡಿದು ತೆಂಗಿನಮರಕ್ಕೆ ಬೆಂಕಿ ಹೊತ್ತಿಕೊಂಡಿತು. ತಕ್ಷಣ ತೆಂಗಿನ ಮರ ಕೀಳಿದ ಮನೆಯ ಮಾಲೀಕ ಶಂಕರ್. ಬಿರುಗಾಳಿ ಬೃಹತ್ ಮರಗಳು ಧರೆಗುರುಳಿಬಿದ್ದಿವೆ. ಸಣ್ಣಪುಟ್ಟ ತಗಡಿನ ಮನೆಗಳು ಸಹ ಬಿರುಗಾಳಿಗೆ ಕಿತ್ತುಬಿದ್ದಿವೆ. ಮನೆಯಲ್ಲಿ ವಸ್ತುಗಳು ಹಾಳಾಗಿ ಜನರು ಮೊದಲ ಮಳೆಗೆ ಹೈರಾಣಾದರು.