ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಅತಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಯಾದಗಿರಿ ಜಿಲ್ಲೆಯಲ್ಲೂ ಮಳೆ ಬೀಳಲಿದೆ ಎಂದು ತಿಳಿಸಿದ ಹವಾಮಾನ ಇಲಾಖೆ
ಬೆಂಗಳೂರು(ಜು.24): ರಾಜ್ಯದ ಹಲವೆಡೆ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿಯಾದ್ಯಂತ ವರುಣನ ಆರ್ಭಟ ಮುಂದುವರಿಯಲಿದ್ದು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.
ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಅತಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಯಾದಗಿರಿ ಜಿಲ್ಲೆಯಲ್ಲೂ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗುರುಮಠಕಲ್: ಮಳೆಯಿಂದ ಹಲವೆಡೆ ಜನಜೀವನ ಅಸ್ತವ್ಯಸ್ತ
ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿ, ಉತ್ತರಕನ್ನಡದ ಜಗಲ್‌ಬೆಟ್, ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ತಲಾ 17 ಸೆಂ.ಮೀ., ಸುಬ್ರಹ್ಮಣ್ಯ, ಗೇರುಸೊಪ್ಪ, ಕೋಟದಲ್ಲಿ 16, ಉಪ್ಪಿನಂಗಡಿ, ಮಾಣಿ ತಲಾ 15, ಮಂಗಳೂರು ವಿಮಾನ ನಿಲ್ದಾಣ, ಧರ್ಮಸ್ಥಳ, ಪುತ್ತೂರು, ಲಿಂಗನಮಕ್ಕಿ ತಲಾ 14, ಪಣಂಬೂರು, ಸುಳ್ಯ, ಸಿದ್ದಾಪುರ (ಉಡುಪಿ) ತಲಾ 13 ಹಾಗೂ ಕುಮಟಾ, ಜಯಪುರ, ಕಳಸದಲ್ಲಿ ತಲಾ 12 ಸೆಂ.ಮೀ. ಮಳೆಯಾಗಿದೆ.
ಕುಂದಾಪುರ, ಕೊಲ್ಲೂರು, ಕದ್ರಾ, ಕೊಪ್ಪ, ಮೂರ್ನಾಡು, ವಿರಾಜಪೇಟೆ, ತಾಳಗುಪ್ಪದಲ್ಲಿ ತಲಾ 11 ಸೆಂ.ಮೀ., ಹಳಿಯಾಳ, ಮಂಕಿ, ಲೋಂಡಾ, ಹುಂಚದಕಟ್ಟೆ, ಶೃಂಗೇರಿಗಳಲ್ಲಿ 10, ಕಮ್ಮರಡಿ, ಮೂಡಿಗೆರೆಯಲ್ಲಿ ತಲಾ 8, ಮಂಗಳೂರು, ಹೊನ್ನಾವರ, ಬಾಳೆಹೊನ್ನೂರಲ್ಲಿ ತಲಾ 7 ಸೆಂ.ಮೀ. ಮಳೆ ದಾಖಲಾಗಿದೆ. ರಾಯಚೂರಿನ ಮಸ್ಕಿ, ಕೊಪ್ಪಳದ ಕುಕನೂರು, ಧಾರವಾಡದ ಅಣ್ಣಿಗೇರಿ, ಚಿಕ್ಕಬಳ್ಳಾಪುರದ ಚಿಂತಾಮಣಿಗಳಲ್ಲಿ 1 ಸೆಂ.ಮೀ. ಮಳೆ ದಾಖಲಾಗಿದೆ.
