Asianet Suvarna News Asianet Suvarna News

Karnataka| ರಾಜ್ಯದಲ್ಲಿ ಇನ್ನೂ 3-4 ದಿನ ಭಾರಿ ಮಳೆ

*  ಮೋಡ, ಚಳಿಯ ವಾತಾವರಣ ಮುಂದುವರಿಕೆ
*  ವಾಯುಭಾರ ಕುಸಿತ, ಕಡಿಮೆ ಒತ್ತಡ ಸೃಷ್ಟಿಕಾರಣ
*  ಬಂಗಾಳ ಕೊಲ್ಲಿಯಲ್ಲಿನ ಪ್ರಬಲ ವಾಯಭಾರ ಕುಸಿತ 
 

Heavy Rain Likely in Next 3-4 Days in Karnataka grg
Author
Bengaluru, First Published Nov 12, 2021, 6:48 AM IST
  • Facebook
  • Twitter
  • Whatsapp

ಬೆಂಗಳೂರು(ನ.12): ಬಂಗಾಳ ಕೊಲ್ಲಿಯಲ್ಲಿ(Bay of Bengal) ಉಂಟಾಗಿರುವ ವಾಯುಭಾರ ಕುಸಿತದ ಪ್ರಭಾವದಿಂದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇನ್ನೂ ಮೂರ್ನಾಲ್ಕು ದಿನ ಹೆಚ್ಚು ಮಳೆಯಾಗಲಿದೆ. ಹೆಚ್ಚಿನ ಪ್ರಮಾಣದ ಮಳೆ ಅಥವಾ ಜಿಟಿಜಿಟಿ ಮಳೆಯಿಂದಾಗಿ(Rain) ಮೋಡ ಕವಿದ ಮತ್ತು ಚಳಿಯ ವಾತಾವರಣ ಇರಲಿದೆ.

"

ಬಂಗಾಳ ಕೊಲ್ಲಿಯಲ್ಲಿನ ಪ್ರಬಲ ವಾಯಭಾರ ಕುಸಿತ ದಕ್ಷಿಣ ಆಂಧ್ರ(Andhra Pradesh) ಮತ್ತು ಉತ್ತರ ತಮಿಳುನಾಡು(Tamil Nadu) ಕರಾವಳಿಯಲ್ಲಿ ಸಕ್ರಿಯವಾಗಿದೆ. ನ.13ರ ಹೊತ್ತಿಗೆ ಬಂಗಾಳ ಕೊಲ್ಲಿಯ ದಕ್ಷಿಣ ಅಂಡಮಾನ್‌ ಸಮುದ್ರದ(sea) ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ಸೃಷ್ಟಿಯಾಗುವ ಸೂಚನೆ ಇದೆ. ಇದೆಲ್ಲರ ಪರಿಣಾಮ ರಾಜ್ಯದ(Karnataka) ವಾತಾವರಣದ ಮೇಲೂ ಉಂಟಾಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ನ.12 ರಂದು ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ನ.13 ರಂದು ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಹಾಗೂ ನವೆಂಬರ್‌ 14 ಮತ್ತು 15ರಂದು ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಶಿವಮೊಗ್ಗ ಜಿಲ್ಲೆಯ ಕೆಲ ಭಾಗದಲ್ಲಿ ಭಾರಿ ಮಳೆಯಾಗಲಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ(Department of Meteorology) ತಿಳಿಸಿದೆ.

Chennai Rains| 5 ವರ್ಷದ ದಾಖಲೆ ಮಳೆಗೆ ಮುಳುಗಿದ ಚೆನ್ನೈ!

ಕೋಲಾರ, ತುಮಕೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉಳಿದಂತೆ ರಾಮನಗರ, ಚಾಮರಾಜನಗರ, ಮಂಡ್ಯ, ಮೈಸೂರು, ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಕೆಲ ಭಾಗದಲ್ಲಿ ಭಾರಿ ಮಳೆಯಾಗುವ ಸೂಚನೆ ನೀಡಿದೆ.

ವಾರದಿಂದ ಸುರಿಯುತ್ತಿರುವ ಮಳೆ: ಹಾಳಾಯ್ತು ರಾಗಿ ಬೆಳೆ

ದಾಬಸ್‌ಪೇಟೆ: ಒಂದು ವಾರದಿಂದ ಸೋಂಪುರ ಹಾಗೂ ಸುತ್ತಮುತ್ತ ಸುರಿಯುತ್ತಿರುವ ಮಳೆಯಿಂದ ಸಾವಿರಾರು ಹೆಕ್ಟೇರ್‌ ರಾಗಿ ಬೆಳೆ ಹಾಳಾಗುವ ಸಂಭವ ಹೆಚ್ಚಾಗಿದೆ. ಇದರಿಂದ ರಾಗಿ ಇಳುವರಿ ಕುಸಿಯುವ, ರೈತರಿಗೆ ಹುಲ್ಲು ಕೊಳೆಯುವ ಆತಂಕ ಮೂಡಿಸಿದೆ.

ಸೋಂಪುರ ಹೋಬಳಿಯಲ್ಲಿ ಈ ಬಾರಿ ಐದು ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ಗಳಲ್ಲಿ ರಾಗಿ ಬೆಳೆ ಬಿತ್ತನೆಯಾಗಿದೆ. ಸಕಾಲಕ್ಕೆ ಬಂದ ಮಳೆಯಿಂದ ಉತ್ತಮವಾಗಿಯೇ ಬೆಳೆ ಬಂದಿದೆ. ಕೊಯ್ಲಿಗೆ ಬಂದಿರುವ ಈ ಹಂತದಲ್ಲಿ ಮಳೆ ಸುರಿದಿರುವುದರಿಂದ ರೈತ ವರ್ಗಕ್ಕೆ ತೊಂದರೆಯಾಗಿದೆ.

Chennai Rains: ಭಾರಿ ಮಳೆಯಿಂದ ಚೆನ್ನೈ ನಗರ ಜಲಾವೃತ, ರೆಡ್ ಅಲರ್ಟ್ ಘೋಷಣೆ!

ತಮಿಳುನಾಡಿನ 11 ಜಿಲ್ಲೆಗಳಲ್ಲಿ ವರುಣನ ಆರ್ಭಟ, ಜನಜೀವನ ಅಸ್ತವ್ಯಸ್ತ!

ತಮಿಳುನಾಡಿನ (Tamil Nadu) ಹನ್ನೊಂದು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ 2015ರ ಬಳಿಕ ಸುರಿದ ವರ್ಷಧಾರೆಯಿಂದ (Rain) ಜನರು ತತ್ತರಿಸಿದ್ದಾರೆ. ಈವರೆಗೆ ಐವರು ಮೃತಪಟ್ಟಿದ್ದು, ಇಪ್ಪತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಚೆನ್ನೈನ ಬಹುತೇಕ ರಸ್ತೆಗಳು, ಅಂಡರ್‌ಪಾಸ್‌ಗಳು ಜಲಾವೃತಗೊಂಡಿವೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ. ಜಲಾವೃತ ಆಡಂಬಾಕಂ ‍ಪೊಲೀಸ್ ಠಾಣೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಪರಿಹಾರ ಕಾರ್ಯಾಚರಣೆಗೆ ಚೆನ್ನೈ (Chennai) ಪಾಲಿಕೆಯು ಸುಮಾರು 23 ಸಾವಿರ ಸಿಬ್ಬಂದಿಯನ್ನು ನಿಯೋಜಿಸಿದೆ. ಮಳೆಯಿಂದ ಸಂತ್ರಸ್ತರಾಗಿರುವ 2 ಲಕ್ಷಕ್ಕೂ ಹೆಚ್ಚು ಜನರಿಗೆ ಆಹಾರವನ್ನು ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಚೆನ್ನೈನ 15 ವಲಯಗಳ ಮೇಲುಸ್ತುವಾರಿಗೆ 15 ಐಎಎಸ್ ಅಧಿಕಾರಿಗಳನ್ನು ಮುಖ್ಯಮಂತ್ರಿ ನಿಯೋಜಿಸಿದ್ದಾರೆ. 200 ವಿಶೇಷ ವೈದ್ಯಕೀಯ ಶಿಬಿರಗಳನ್ನು ತೆರೆಯಲಾಗಿದೆ. ತಗ್ಗು ಪ್ರದೇಶಗಳನ್ನು ಆವರಿಸಿರುವ ಕೆಸರು ಹಾಗೂ ಕಸವನ್ನು ತೆರವುಗೊಳಿಸಲು ಪಾಲಿಕೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. 
 

Follow Us:
Download App:
  • android
  • ios