ಕರಾವಳಿ, ಮಲೆನಾಡಲ್ಲಿ ಭರ್ಜರಿ ಮಳೆ: ಜಮೀನು, ಮನೆಗಳಿಗೆ ನುಗ್ಗಿದ ನೀರು!

ಕರಾವಳಿ, ಮಲೆನಾಡಲ್ಲಿ ಭರ್ಜರಿ ಮಳೆ| ಉಕ್ಕಿ ಹರಿ​ಯು​ತ್ತಿ​ರುವ ಹಲವು ನದಿಗಳು| ಜಮೀನು, ಮನೆಗಳಿಗೆ ನುಗ್ಗಿದ ನೀರು

Heavy Rain Lashes In Malnad And Coastal Karnataka

ಬೆಂಗಳೂರು(ಆ.06): ಕರಾವಳಿ, ಮಲೆನಾಡು ಭಾಗಗಲ್ಲಿ ನಿರಂತರವಾಗಿ ಮಳೆ ಆರ್ಭಟ ಮುಂದುವರಿದ್ದು, ಪ್ರಮುಖ ನದಿ, ಕೆರೆಗಳು ಉಕ್ಕಿ ಹರಿಯುತ್ತಿವೆ. ಮನೆಗಳು, ವಿದ್ಯುತ್‌ ಕಂಬಗಳು, ಮರಗಳು ನೆಲಕ್ಕುರುಳಿವೆ. ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ.

ಮಲೆನಾಡಿನಲ್ಲಿ ಮುಂದುವರಿದ ವರುಣನ ಆರ್ಭಟ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಕುಮಾರಧಾರಾ ನದಿ ಸಂಪೂರ್ಣವಾಗಿ ತುಂಬಿ ಹರಿದು ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟಮುಳುಗಿದೆ. ಮಂಗಳೂರು ಹೊರವಲಯದ ಕುಲಶೇಖರ- ಕಾವೂರು ರಸ್ತೆಯಲ್ಲಿ ಮರ ಬಿದ್ದು ವಾಹನ ಜಖಂಗೊಂಡಿದೆ. ಉಡುಪಿಯಲ್ಲಿ ಪ್ರಮುಖ ನದಿಗಳಲ್ಲಿ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಇತಿಹಾಸ ಪ್ರಸಿದ್ಧ ಕುಂದಾಪುರದ ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಬ್ಜಾ ನದಿಯ ನೀರು ನುಗ್ಗಿದರೆ, ಮನೆಗಳು, ಜಮೀನಿನ ಬೆಳೆಗಳು ನಾಶವಾಗಿವೆ. ಇನ್ನು ಸಮುದ್ರ ತೀರದಲ್ಲಿ ಗಾಳಿಯ ಅಬ್ಬರ ಜೋರಾಗಿದ್ದು, ಇನ್ನೆರಡು ದಿನಗಳ ಕಾಲ ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ.

ಉತ್ತರಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಿದ್ಯುತ್‌ ಕಂಬಗಳು, ಅಡಿಕೆ ಬೆಳೆಗಳು, ಮರಗಳು ಬಿದ್ದು ಹಲವೆಡೆ ಬಿದ್ದ ವಿದ್ಯುತ್‌ ಸರಬರಾಜು ಕಡಿತವಾಗಿದೆ. ಇನ್ನು ಶೃಂಗೇರಿಯ ತುಂಗಾನದಿ ತೀರದಲ್ಲಿರುವ ಕಪ್ಪೆ ಶಂಕರ ದೇವಾಲಯ ನೀರಿನಲ್ಲಿ ಮುಳುಗಿದೆ. ತುಂಗಾನದಿ ಅಪಾಯದ ಮಟ್ಟಮೀರಿ ಹರಿಯುತ್ತಿದೆ.

ನಾಲ್ಕೆ ೖದು ದಿನ ಭಾರೀ ಮಳೆಯ ಮುನ್ನೆಚ್ಚರಿಕೆ

ಶಿವಮೊಗ್ಗ ಜಿಲ್ಲೆಯ ತುಂಗಾ, ಭದ್ರಾ, ಶರಾವತಿ ನದಿಗಳಿಗೆ ಜೀವಕಳೆ ಬಂದಿದ್ದು, ಗಾಜನೂನು ಅಣೆಕಟ್ಟೆಯಲ್ಲಿ 21 ಕ್ರೆಸ್ಟ್‌ ಗೇಟ್‌ ತೆರೆಯುವ ಮೂಲಕ 45 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಯಬಿಡಲಾಗಿದೆ. ಅಪಾಯ ಮಟ್ಟದಲ್ಲಿ ತುಂಗೆ ಹರಿಯುತ್ತಿದ್ದು, ಜನರು ಸುರಕ್ಷಿತವಾಗಿರಲು ಸೂಚಿಸಲಾಗಿದೆ. ಧಾರವಾಡ, ಹಾವೇರಿ, ಗದಗ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆಯಾಗಿದೆ.

Latest Videos
Follow Us:
Download App:
  • android
  • ios