Asianet Suvarna News Asianet Suvarna News

5 ಜಿಲ್ಲೆಯಲ್ಲಿ ಭಾರಿ ಮಳೆ : ಸಿಡಿಲಿಗೆ ರೈತ ಸಾವು

  • ರಾಜ್ಯದ ಕರಾವಳಿ ಮತ್ತು ಬಯಲುಸೀಮೆಯ ಕೆಲಭಾಗಗಲ್ಲಿ ಸೋಮವಾರ ಉತ್ತಮ ಮಳೆ
  • ಸಿಡಿಲಿಗೆ ರೈತನೊಬ್ಬ ಮೃತಪಟ್ಟಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ
heavy rain lashes in 5 Districts snr
Author
Bengaluru, First Published Oct 5, 2021, 7:16 AM IST
  • Facebook
  • Twitter
  • Whatsapp

ಬೆಂಗಳೂರು (ಅ.05): ರಾಜ್ಯದ ಕರಾವಳಿ ಮತ್ತು ಬಯಲುಸೀಮೆಯ ಕೆಲಭಾಗಗಲ್ಲಿ ಸೋಮವಾರ ಉತ್ತಮ ಮಳೆಯಾಗಿದ್ದು (Rain) ಸಿಡಿಲಿಗೆ ರೈತನೊಬ್ಬ (farmer) ಮೃತಪಟ್ಟಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. 

ಹುಬ್ಬಳ್ಳಿ ತಾಲೂಕಿನ ಅಗಡಿ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಶಿವಾನಂದ  ಚೆನ್ನಬಸಪ್ಪ ಗೋಕುಲ ಸಿಡಿಲು  ಬಡಿದು ಸ್ಥಳದಲ್ಲೇ ಮೃತಪಟ್ಟರು. 

3 ಸೂರ್ಯರ ಸುತ್ತ ಸುತ್ತುವ ಗ್ರಹ ಪತ್ತೆ... ಭೂಮಿಯ ರಹಸ್ಯಕ್ಕೆ ಉತ್ತರ!

ಉಡುಪಿ (Udupi), ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು ಅಡಿಕೆ ತೋಟಗಳಿಗೆ ನೀರು ನುಗ್ಗಿದೆ. ಮನೆಗೆ ಹಾನಿಯಾಗಿದೆ. ಕಡೂರು, ತರೀಕೆರೆ, ಚಿಕ್ಕಮಗಳೂರು (Chikkamagaluru) ತಾಲೂಕುಗಳಲ್ಲಿ ಮಳೆಯಾಗಿದ್ದು ಅಡಕೆ, ಈರುಳ್ಳಿ ಬೆಳೆಗಳಿಗೆ ಹಾನಿಯಾಗಿದೆ. ದಾವಣಗೆರೆ ನಗರದಲ್ಲಿ ಸುರಿದ ಭಾರೀ ಮಳೆಗೆ ಹಳ್ಳಿಹಾಳ್‌ ಕ್ರಾಸ್‌ ಬಳಿ ಸಾಲು ಮರ ರಸ್ತೆಗುರುಳಿದ್ದು ವಾಹನ ಸವಾರರು ಸ್ವಲ್ಪದರಲ್ಲೇ ಅನಾಹುತದಿಂದ ಪಾರಾಗಿದ್ದಾರೆ.

ಮಳೆಗೆ ತತ್ತರಿಸಿದ ರಾಜಧಾನಿ ಬೆಂಗಳೂರು
 
ರಾಜಧಾನಿ ಬೆಂಗಳೂರಿನಲ್ಲಿ (Bengaluru) ಭಾನುವಾರ ರಾತ್ರಿ ಸುರಿದ ಭಾರೀ ಮಳೆ ಸಾಕಷ್ಟುಅನಾಹುತ ಸೃಷ್ಟಿಸಿದೆ. ಮಳೆ ನೀರು ಕಾಲುವೆ, ರಾಜಕಾಲುವೆಗಳು ತುಂಬಿ ಹರಿದು ತಗ್ಗು ಪ್ರದೇಶದ ನೂರಾರು ಮನೆಗಳು, ಅಪಾರ್ಟ್‌ಮೆಂಟ್‌ಗಳು, ಬಡಾವಣೆ ರಸ್ತೆಗಳು, ಅಂಗಡಿ-ಮುಂಗಟ್ಟುಗಳು ಜಲಾವೃತವಾಗಿ ನಿವಾಸಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಜಯನಗರದ ಸೌಂತ್‌ ಎಂಡ್‌ ವೃತ್ತದಲ್ಲಿ ಮರ ಬಿದ್ದು ದ್ವಿಚಕ್ರವಾಹನ ಸವಾರ ನಾಗರಾಜ್‌(73) ಮೃತಪಟ್ಟಿದ್ದು, ರಾಜರಾಜೇಶ್ವರಿನಗರದಲ್ಲಿ ದನಕೊಟ್ಟಿಗೆ ರಾಜಕಾಲುವೆ ನೀರು ನುಗ್ಗಿ 18 ಜಾನುವಾರುಗಳು ಮೃತಪಟ್ಟಿವೆ. ಹತ್ತಾರು ವಿದ್ಯುತ್‌ ಕಂಬಗಳು, 25ಕ್ಕೂ ಹೆಚ್ಚು ಮರಗಳು ರಸ್ತೆಗೆ ಉರುಳಿವೆ. ಎಚ್‌ಎಎಲ್‌ನ ರಮೇಶ್‌ ನಗರದಲ್ಲಿ 12 ಅಡಿ ಎತ್ತರದ 200 ಮೀಟರ್‌ ಉದ್ದದ ಕಾಂಪೌಂಡ್‌ ಬಿದ್ದು, ಮೂರು ಕಾರು, ನಾಲ್ಕು ಆಟೋ, ಟಿಟಿ ವಾಹನಕ್ಕೆ ಹಾನಿಯಾಗಿದೆ. ಶೇಷಾದ್ರಿಪುರಂನಲ್ಲಿರುವ ಆಕಾಶ್‌ ಸ್ಟುಡಿಯೋಗೆ ಹೊಂದಿಕೊಂಡಿದ್ದ 200 ಅಡಿ ಉದ್ದದ ಗೋಡೆ ಕುಸಿದು ಸ್ಟುಡಿಯೋ ಆವರಣಕ್ಕೆ ನೀರು ನುಗ್ಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇನ್ನು ಕೋರಮಂಗಲ, ರಾಜರಾಜೇಶ್ವರಿನಗರ, ನಾಯಂಡಹಳ್ಳಿ ಸೇರಿದಂತೆ ನಗರದ ವಿವಿಧೆಡೆ ಕಾರು, ದ್ವಿಚಕ್ರವಾಹನ, ಆಟೋಗಳು, ಟೆಂಪೋ ಟ್ರಾವೆಲರ್‌ಗಳು ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ವಾಹನಗಳು ನೀರಿನಲ್ಲಿ ಮುಳುಗಿ ಹಾನಿಯಾಗಿದೆ. ಕೋಟ್ಯಂತರ ರುಪಾಯಿ ಮೌಲ್ಯದ ಆಸ್ತಿ ನಾಶವಾಗಿವೆ.

ರಾಜರಾಜೇಶ್ವರಿನಗರ ವಲಯ, ಪಶ್ಚಿಮ ವಲಯ, ಪೂರ್ವ ವಲಯ ಸೇರಿದಂತೆ ನಗರದ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜಲಾವೃತವಾದ ಹಿನ್ನೆಲೆಯಲ್ಲಿ ಮಹಿಳೆಯರು, ವೃದ್ಧರು, ಮಕ್ಕಳು ಸೇರಿದಂತೆ ಮನೆಗಳ ಸದಸ್ಯರು ಇಡೀ ರಾತ್ರಿ ಪರದಾಡಿದರು. ಪ್ರವಾಹದ ಮಾದರಿಯಲ್ಲಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ರಾತ್ರೋರಾತ್ರಿ ಬಂಧುಗಳ ಮನೆ, ಸ್ನೇಹಿತರ ಮನೆಗಳಲ್ಲಿ ಆಶ್ರಯಪಡೆಯುವ ಸ್ಥಿತಿ ನಿರ್ಮಾಣವಾಗಿತ್ತು.

Follow Us:
Download App:
  • android
  • ios