ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ನರ್ಸಿಂಗ್ ವಿದ್ಯಾರ್ಥಿನಿಯೋರ್ವಳು ಲೋ ಬಿಪಿ ಕಾರಣದಿಂದ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಸಣ್ಣ ವಯಸ್ಸಿನವರೇ ಹಾರ್ಟ್ ಅಟ್ಯಾಕ್‌ಗೆ ಬಲಿಯಾಗುತ್ತಿರುವುದು ಆತಂಕಕಕ್ಕೆ ಕಾರಣವಾಗಿದೆ.

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಆ.14): ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ನರ್ಸಿಂಗ್ ವಿದ್ಯಾರ್ಥಿನಿಯೋರ್ವಳು ಲೋ ಬಿಪಿ ಕಾರಣದಿಂದ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಮೃತ ಯುವತಿ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲು ಜಾತಿಮಾರು ನಿವಾಸಿ ರಾಜು ದೇವಾಡಿಗ ಮತ್ತು ಸರೋಜ ದಂಪತಿಗಳ ಪುತ್ರಿ ಸುಮಾ (19) ಎಂದು ತಿಳಿದುಬಂದಿದೆ.

ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ಈಕೆ ಮನೆಗೆ ಬಂದಿದ್ದ ಸಂದರ್ಭ ಆಗಸ್ಟ್ 9 ರಂದು ಅನಾರೋಗ್ಯದ ಕಾರಣದಿಂದ ಸ್ಥಳೀಯ ಆಸ್ಪತ್ರೆಗೆ ತೆರಳಿ ಮಾತ್ರೆಗಳನ್ನು ಪಡೆದು ಮನೆಗೆ ತೆರಳಿದ್ದಳು. ನಂತರ ಆಗಸ್ಟ್ 11 ರಂದು ಮತ್ತೆ ಅನಾರೋಗ್ಯ ಜಾಸ್ತಿಯಾದ ಕಾರಣ ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದು ಗುಣಮುಖವಾಗಿರುವ ಕಾರಣ ಬಳ್ಳಮಂಜದಲ್ಲಿರುವ ತನ್ನ ಅಕ್ಕನ ಮನೆಗೆ ತೆರಳಿದ್ದಳು. ಆಗಸ್ಟ್ 13 ರಂದು ಸಂಜೆ ಮತ್ತೆ ಅಸ್ವಸ್ಥಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಲೋ ಬಿಪಿ(Low BP)ಉಂಟಾಗಿ ಹೃದಯಾಘಾತ(Heart attack)ದಿಂದ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

ಹಠಾತ್ ಹಾರ್ಟ್ ಅಟ್ಯಾಕ್ ಆದಾಗ ಏನ್ ಮಾಡ್ಬೇಕು?

ದ.ಕ ಜಿಲ್ಲೆಯಲ್ಲಿ ಸಣ್ಣ ವಯಸ್ಸಿನವರಿಗೆ ಹಾರ್ಟ್ ಅಟ್ಯಾಕ್!

ದ‌.ಕ(Dakshina kannada) ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಲ್ಲಿ ಸಣ್ಣ ವಯಸ್ಸಿನವರೇ ಹೆಚ್ಚಾಗಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. 

ಹೃದಯಾಘಾತಕ್ಕೆ ‌ಬಲಿಯಾದ ಸಣ್ಣ ವಯಸ್ಸಿನವರ ಮಾಹಿತಿ

 ಶ್ರೇಯಾ ಪಕ್ಕಳ(16)
ವಿಳಾಸ: ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಬೆಳ್ಳಿಪಾಡಿ ಗ್ರಾಮ
ಶಿಕ್ಷಣ- ಪ್ರಥಮ ಪಿಯುಸಿ(ವಿಜ್ಞಾನ ವಿಭಾಗ)
ಮೃತಪಟ್ಟ ದಿನಾಂಕ- ಮಾರ್ಚ್ 23,2021
ಕಾಲೇಜು: ವಿವೇಕಾನಂದ ಕಾಲೇಜು ಪುತ್ತೂರು. ದಿಢೀರ್ ಅಸ್ವಸ್ಥಗೊಂಡು ಸಾವು, ಆಸ್ಪತ್ರೆಗೆ ದಾಖಲಿಸಿದ ವೇಳೆ ಹೃದಯಾಘಾತವಾದ ಬಗ್ಗೆ ಮಾಹಿತಿ

 ಮೋಕ್ಷಿತ್(7)
ವಿಳಾಸ: ದ.ಕ‌ ಜಿಲ್ಲೆಯ ಸುಳ್ಯ ತಾಲೂಕಿನ ಕುಂಟಿಕಾನ
ಶಿಕ್ಷಣ: ಎರಡನೇ ತರಗತಿ
ಮೃತಪಟ್ಟ ದಿನಾಂಕ- ನವೆಂಬರ್ 01, 2022
ಶಾಲೆ: ಕುಕ್ಕುಜಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಯ. ಜ್ವರದಿಂದ ಬಾಲಕ ಕುಸಿದು ಬಿದ್ದು ಸಾವು. ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವು ಸಂಭವಿಸಿದ ಬಗ್ಗೆ ವೈದ್ಯರ ‌ಮಾಹಿತಿ

ಅನ್ವಿತಾ ಹೆಗ್ಡೆ(14)
ವಿಳಾಸ: ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಳಿಕೆ
ಶಿಕ್ಷಣ- 9ನೇ ತರಗತಿ
ಮೃತಪಟ್ಟ ದಿನಾಂಕ: ಮೇ.17, 2022
ಶಾಲೆ: ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ, ವಿಟ್ಲ. ಯಾವುದೇ ಎದೆ ಸಂಬಂಧಿ‌ ಖಾಯಿಲೆ ಇರಲಿಲ್ಲ. ತಡರಾತ್ರಿ ಎದೆನೋವು ಕಾಣಿಸಿಕೊಂಡು ಹೃದಯಾಘಾತ

ಸಚಿನ್(17)
ವಿಳಾಸ: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯಾ
ಶಿಕ್ಷಣ- ದ್ವಿತೀಯ ಪಿಯುಸಿ(ಕಲಾ ವಿಭಾಗ)
ಮೃತಪಟ್ಟ ದಿನಾಂಕ: ಅಗಸ್ಟ್ 09, 2022
ಶಾಲೆ: ಪದವಿಪೂರ್ವ ಕಾಲೇಜು, ಮುಂಡಾಜೆ. ಎದೆನೋವು ಕಾಣಿಸಿಕೊಂಡು ಹೃದಯಾಘಾತ 

Health Tips : ನಾಲ್ಕರಲ್ಲಿ ಒಬ್ಬರಿಗೆ ಮುನ್ಸೂಚನೆಯೇ ಇಲ್ಲದೆ ಬರುತ್ತೆ ಹೃದಯಾಘಾತ

ನಾಗೇಶ್(23)
ವಿಳಾಸ: ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ
ಶಿಕ್ಷಣ- ಪ್ಯಾರಾ ಮೆಡಿಕಲ್ ವಿದ್ಯಾರ್ಥಿ
ಮೃತಪಟ್ಟ ದಿನಾಂಕ: ಫೆಬ್ರವರಿ 14, 2022
ಶಾಲೆ: ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜು, ದೇರಳಕಟ್ಟೆ‌. ರಾತ್ರಿ ಮಲಗಿದ್ದ ವೇಳೆ ಹೃದಯಾಘಾತ

ಮಹಮ್ಮದ್ ಹಸೀಮ್(17)
ವಿಳಾಸ: ಶಾಲೆಗೆ ಹೋಗಲು ಸಿದ್ದವಾಗಿದ್ದ ಹಸೀಮ್ ಹೃದಯಾಘಾತದಿಂದ ಸಾವು. ಮಂಗಳೂರು ಹೊರವಲಯದ ಸುರತ್ಕಲ್ 
ಕೃಷ್ಣಾಪುರ ಏಳನೇ ಬ್ಲಾಕ್ ನಿವಾಸಿ.‌ ಶಾಲೆಗೆ ಹೊರಡಲು ಸಿದ್ದವಾಗಿದ್ದ ವೇಳೆ ತಲೆ ತಿರುಗಿ ಬಿದ್ದಿದ್ದ ಹಸೀಮ್.
ಮೃತಪಟ್ಟ ದಿನಾಂಕ: ಜನವರಿ 10, 2023

ಲೈಲಾ ಆಫಿಯಾ(23) 
ವಿಳಾಸ: ಮಂಗಳೂರಿನ ಅಡ್ಯಾರ್ ಕಣ್ಣೂರು ಸಮೀಪದ ಬೀರ್ಪುಗುಡ್ಡೆ
ಮದುವೆಯಾದ ಮೊದಲ ದಿನವೇ ಹೃದಯಾಘಾತದಿಂದ ನಿಧನ. 
ಮಾರ್ಚ್ 01, 2023ರಂದು ನಡೆದ ಘಟನೆ

ಸಾಲಿಯತ್(24), ರಾಷ್ಟ್ರ ಮಟ್ಟದ ವಾಲಿಬಾಲ್ ಆಟಗಾರ್ತಿ
ಉಜಿರೆ ಎಸ್.ಡಿ.ಎಂ. ಕಾಲೇಜಿನ ಹಳೇ ವಿದ್ಯಾರ್ಥಿನಿಯಾಗಿದ್ದರು
ಮೇ.31, 2023ರಂದು ಹೃದಯಾಘಾತದಿಂದ ನಿಧನ
ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಡಂಗಡಿ ಪೊಯ್ಯೇಗುಡ್ಡೆ