ಲಾಕ್ ಡೌನ್ ವಿಸ್ತರಣೆ ಬಹುತೇಕ ಫಿಕ್ಸ್; ಸ್ಪಷ್ಟಪಡಿಸಿದ ಸುಧಾಕರ್

* ರಾಜ್ಯದಲ್ಲಿ ಮೇ 24ರ ಬಳಿಕವೂ ಲಾಕ್ ಡೌನ್ ಮುಂದುವರೆಕೆ ಫಿಕ್ಸ್
* ಈ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ
* ಅಧಿಕೃತವಾಗಿ ಪ್ರಕಟಿಸಲಿರುವ ಸಿಎಂ ಬಿಎಸ್ ಯಡಿಯುರಪ್ಪ
 

Health Minister Dr K Sudhakar Reacts On Karnataka Lockdown extend rbj

ದಾವಣಗೆರೆ, (ಮೇ.21): ಕೊರೊನಾ ಅಟ್ಟಹಾಸ ನಿಯಂತ್ರಿಸಲು ರಾಜ್ಯದಲ್ಲಿ ಮೇ 24ರ ಬಳಿಕವೂ ಲಾಕ್ ಡೌನ್ ಮುಂದುವರಿಯುವುದು ಬಹುತೇಕ ಖಚಿತವಾಗಿದೆ. ಈ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಇಂದು (ಶುಕ್ರವಾರ) ದಾವಣಗೆರೆಯಲ್ಲಿ ಮಾತನಾಡಿದ ಸಚಿವ ಸುಧಾಕರ್,  ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ ಬಗ್ಗೆ ಬಹುತೇಕ ಸಚಿವರು ಒಲವು ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಇಚ್ಛೆ ಕೂಡ ಅದೇ ಆಗಿದೆ. ಮೇ 22 ಅಥವಾ 23ರಂದು ಲಾಕ್ ಡೌನ್ ನಿರ್ಧಾರ ಪ್ರಕಟವಾಗಲಿದೆ ಎಂದರು.

ಕೋವಿಡ್ ರಿಸ್ಕ್ : ಮತ್ತೆರಡು ವಾರ ರಾಜ್ಯದಲ್ಲಿ ಲಾಕ್‌ಡೌನ್?

ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸುತ್ತಿರುವ ಕೊರೊನಾ ಸೋಂಕು ನಿಯಂತ್ರಿಸಬೇಕು ಎಂದರೆ ರಾಜ್ಯದಲ್ಲಿ ಇನ್ನಷ್ಟು ದಿನಗಳ ಕಠಿಣ ಲಾಕ್ ಡೌನ್ ಅನಿವಾರ್ಯ. ಇದರಿಂದ ಸಾವು-ನೋವನ್ನು ತಡೆಯಬಹುದಾಗಿದೆ. ಇನ್ನು ರಾಜ್ಯದಲ್ಲಿ ರೆಮ್ ಡಿಸಿವಿರ್ ಕೊರತೆಯಿಲ್ಲ. 10 ಲಕ್ಷ ರೆಮ್ ಡಿಸಿವಿರ್ ತರಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಕೊರೋನಾ ಎರಡನೇ ಅಲೆಯ ಮೊದಲ ಹಂತದ ಲಾಕ್‌ಡೌನ್ ಇದೇ ಮೇ. 24 ಅಂತ್ಯವಾಗಿದೆ. ಇದು ಮತ್ತಷ್ಟು ದಿನ ವಿಸ್ತರಣೆಯಾಗುವುದು ಪಕ್ಕಾ ಆಗಿದೆ. ಈ ಬಗ್ಗೆ ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ಸುಳಿವು ಕೊಟ್ಟಿದ್ದು, ಈ ಬಗ್ಗೆ ಮೇ.23ರಂದು ಅಂತಿಮ ಪ್ರಕಟಣೆ ಹೊರಡಿಸಲಿದ್ದಾರೆ.

Latest Videos
Follow Us:
Download App:
  • android
  • ios