Panchamasali: ಅವನು ಅಪ್ಪನಿಗೆ ಹುಟ್ಟಿಲ್ಲ- ಅವನೊಬ್ಬ ಪಿಂಪ್: ಹೆಸರೇಳದೇ ಯತ್ನಾಳ್ ವಿರುದ್ಧ ಸಚಿವ ನಿರಾಣಿ ಆರೋಪ
ಅವನೊಬ್ಬ ಇದ್ದಾನೆ ಬಿಜಾಪುರದವನು. ಅವನು ಅಪ್ಪನಿಗೆ ಹುಟ್ಟಿದವನಲ್ಲ. ಅವನು ಪಿಂಪ್ ಆಗಿ ಕೆಲಸ ಮಾಡಿದ್ದಾನೆ. ನನಗೆ ಸಂಸ್ಕೃತಿ ಇದೆ. ಇನ್ನು ನಾಲಿಗೆ ಹರಿಬಿಟ್ಟರೆ ನಾಲಿಗೆ ಕತ್ತರಿಸ್ತೇನೆ ಎಂದು ಸಚಿವ ಮುರುಗೇಶ್ ನಿರಾಣಿ ಅವರು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಆರೋಪ ಮಾಡಿದ್ದಾರೆ.

ಬೆಂಗಳೂರು (ಜ.14): ಅವನೊಬ್ಬ ಇದ್ದಾನೆ ಬಿಜಾಪುರದವನು. ಅವನು ಅಪ್ಪನಿಗೆ ಹುಟ್ಟಿದವನಲ್ಲ. ಅವನು ಪಿಂಪ್ ಆಗಿ ಕೆಲಸ ಮಾಡಿದ್ದಾನೆ. ನನಗೆ ಸಂಸ್ಕೃತಿ ಇದೆ. ಇನ್ನು ನಾಲಿಗೆ ಹರಿಬಿಟ್ಟರೆ ನಾಲಿಗೆ ಕತ್ತರಿಸ್ತೇನೆ ಎಂದು ಸಚಿವ ಮುರುಗೇಶ್ ನಿರಾಣಿ ಅವರು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಆರೋಪ ಮಾಡಿ ಅವಾಜ್ ಹಾಕಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಹೋರಾಟದ ಬಗ್ಗೆ ವಿಜಯಪುರದ ಶಾಸಕ ಬವಸವನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಸಿ.ಸಿ. ಪಾಟೀಲ್ ಹಾಗೂ ಮುರುಗೇಶ್ ನಿರಾಣಿ ವಿರುದ್ಧ ಹಗುರವಾಗಿ ಮಾತನಾಡುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಮುರುಗೇಶ್ ನಿರಾಣಿ ಅವರು, ರಾಜ್ಯ ವಿಧಾನಸಭೆಯ ಹೊತ್ತಿನಲ್ಲಿ ಮೀಸಲಾತಿಗೆ ಆಗ್ರಹಿಸಿ ಹೋರಾಟ ಮಾಡ್ತಾ ಇರೋರು ಪಕ್ಕಾ ರಾಜಕೀಯ ಮಾಡ್ತಾ ಇದ್ದಾರೆ. ಅಂದು ಏನು ಮಾತಾಡದವರು ಇಂದು ಹೋರಾಟ ಯಾಕೆ ಮಾಡುತ್ತಿದ್ದಾರೆ. ಎಸ್ಸಿ ಮತ್ತು ಎಸ್ಟಿ ಸಮಾಜದವರು ಯಾರು ಗಲಾಟೆ ಮಾಡಿಲ್ಲ. ಇವರು ಲಿಂಗಾಯತರನ್ನು ಒಡೆಯುತ್ತಿದ್ದಾರೆ. ಅವನು ಅಪ್ಪನಿಗೆ ಹುಟ್ಟಿದವನಾದರೆ ಪಾರ್ಟಿ ಬಿಟ್ಟು ಮಾತಾಡಬೇಕು ಎಂದು ಯತ್ನಾಳ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಮತ್ತೆ ಭುಗಿಲೆದ್ದ ಪಂಚಮಸಾಲಿ ಮೀಸಲಾತಿ ಹೋರಾಟ
ಪಂಚಮಸಾಲಿಗೆ 2ಎ ನೀಡಲು ಬರಲ್ಲ ಎಂದು ವರದಿ:
ರಾಜ್ಯದಲ್ಲಿ 2016 ರಲ್ಲಿ ಕಾಂತರಾಜ್ ವರದಿ ಪಂಚಮಸಾಲಿಗೆ 2ಎ ನೀಡಲು ಬರಲ್ಲ ಎಂದು ವರದಿ ನೀಡಿದ್ದರು. ಆಗ, ಇಂದು ಹೋರಾಟ ಮಾಡುವ ಯಾರೊಬ್ಬರೂ ಮೀಸಲಾತಿಯ ಬಗ್ಗೆ ಮಾತನಾಡಲಿಲ್ಲ. ಆಗ ಎಲ್ಲಿ ಮಲಗಿದ್ರಿ ನೀವು?. ಈಗ ವಿಧಾನಸಭಾ ಚುನಾವಣೆ ಹೊಸ್ತಿಲ್ಲಿ ಬಂದು ಗಲಾಟೆ ಮಾಡುತ್ತಿದ್ದಾರೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹರಿಹಾಯ್ದಿದ್ದಾರೆ. ಇನ್ನು ಕುಮಾರ್ ಅಂತ ಒಬ್ಬ ಡ್ರೈವರ್‌ನ ಕೊಲೆ ಆಗಿದೆ. ಅದು ಯಾಕೆ ಆಯ್ತು?.. ಹೇಗೆ ಆಯ್ತು...? ಎನ್ನುವುದನ್ನು ಮಾಧ್ಯಮದವರು ಪತ್ತೆ ಹಚ್ಚಬೇಕು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಮೀಸಲಾತಿ ಕುರಿತು ಸಿಎಂ ಸ್ಪಂದನೆ:
ಸಚಿವ ಸಿ.ಸಿ. ಪಾಟೀಲ್ ಮಾತನಾಡಿ, ಈಗಾಗಲೇ ಸಿಎಂ ಮೀಸಲಾತಿ ನಿರ್ಣಯ ಮಾಡಿದ್ದಾರೆ. ಮೀಸಲಾತಿ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಂದಿಸಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಮಾಡಬೇಕಾಗತ್ತದೆ. ಇದನ್ನೆಲ್ಲಾ ಜುಮೃತ್ಯುಂಜಯ ಸ್ವಾಮಿಜಿ ತಿಳ್ಕೊಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಸ್ವಾಮಿಜಿ ಯಾಕೆ ಮಾತನಾಡಲಿಲ್ಲ. ಆದರೆ, ಈಗ ಯಾಕೆ ಮಾತನಾಡುತ್ತಿದ್ದೀರಿ ಎಂದು ಜಯಮೃತ್ಯುಂಜಯ ಸ್ವಾಮಿಜಿ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಶ್ರೀಮಂತರಿಗೆ ಮೀಸಲಾತಿ ನೀಡುವುದನ್ನು ನಾನು ಒಪ್ಪಲ್ಲ: ಕೆ.ಎಸ್.ಈಶ್ವರಪ್ಪ
ಯತ್ನಾಳ್ ಬಗ್ಗೆ ಪಾರ್ಟಿ ಗಮನಕ್ಕೆ ಬಂದಿದೆ: ಈಗಾಲೇ ಮಧ್ಯಂತರ ವರದಿ ಸಿಎಂ ಪಡೆದಿದ್ದಾರೆ. ಸಿಎಂ ಬುದ್ದಿವಂತರು ಇದ್ದಾರೆ. ಮೀಸಲಾತಿ ನೀಡುವ ಬಗ್ಗೆ ಕಾನೂನು ಅಡಿ ತೀರ್ಮಾನ ಆಗಲಿದೆ. ಇನ್ನು ಬಸವನಗೌಡ ಪಾಟೀಲ್ ಯತ್ನಾಳ್ ಮೇಲೆ ಕ್ರಮ ಕೈಗೊಳ್ಳುವುಯದಕ್ಕೆ ಯಾವುದೇ ಭಯವಿಲ್ಲ. ಆದರೆ, ಅವರು ಹಿರಿಯರು, ಕೇಂದ್ರ ಸಚಿವ ಆಗಿದ್ದವರು. ಅವರ ಬಗ್ಗೆ ಪಾರ್ಟಿಯ ಗಮನಕ್ಕೆ ಬಂದಿದೆ. ಇನ್ನು ಮುಂಬರುವ ಚುನಾವಣೆಯಲ್ಲಿ ಯತ್ನಾಳ್ ಗೆ ಟಿಕೇಟ್ ನೀಡೊದಿಲ್ಲ ಎಂದು ಸಿಎಂ ಹೇಳಿದ್ದಾರಾ? ಟಿಕೆಟ್ ನಿರ್ಧಾರ ಮಾಡೋದು ಹೈಕಮಾಂಡ್ ಎಂದು ಸಚಿವ ಸಿಸಿ ಪಾಟೀಲ್ ಹೇಳಿದರು.